ಬೆಂಗಳೂರು: ಬಿಜೆಪಿ ಎಂದರೆ ಬ್ರೋಕರ್ ಪಾರ್ಟಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಯುವಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ತುಂಬೆಲ್ಲ ಬ್ರೋಕರ್‌ಗಳು ತುಂಬಿದ್ದಾರೆ.
ಶೇ. 40ರಷ್ಟು ಪರ್ಸಂಟೇಜ್ ಅಲ್ಲ, ಹೊಟೇಲ್‌ನಲ್ಲಿ ತಿಂಡಿ ದರ ಪಟ್ಟಿ ಇದ್ದಂತೆ ಇಲಾಖೆಗಳಲ್ಲಿ ವರ್ಗಾವಣೆ, ಟೆಂಡರ್ ಸೇರಿ ಇತರೆ ಕೆಲಸಗಳಿಗೆ ಪಟ್ಟಿ ನೇತು ಹಾಕಲಾಗಿದೆ ಎಂದರು.
ಉತ್ತರಪ್ರದೇಶದಲ್ಲಿ ಸೀಟುಗಳ ಸಂಖ್ಯೆ ಕಡಿಮೆಯಾದ ಬಗ್ಗೆ, ಪಂಜಾಬ್‌ನಲ್ಲಿ ಅವರು ಎಷ್ಟು ಸ್ಥಾನ ಗೆದ್ದಿದ್ದಾರೆ? ನಾವು ನಾಲ್ಕೂ ರಾಜ್ಯಗಳಲ್ಲಿ ಆಧಿಕಾರದಲ್ಲಿ ಇರಲಿಲ್ಲ. ಗೋವಾದಲ್ಲಿ ಆಪರೇಷನ್ ಕಮಲ ಮಾಡಿ ಎರಡು ಸ್ಥಾನಕ್ಕೆ ಇಳಿಸಿದ್ದರು. ಕಾಂಗ್ರೆಸ್ 12 ಸ್ಥಾನ ಗೆದ್ದಿದೆ ಎಂದು ಹೇಳಿದರು.
ಇದನ್ನೂ ಓದಿ:ಹೈಕಮಾಂಡ್ ಬುಲಾವ್; ಡಿ.ಕೆ.ಶಿವಕುಮಾರ್ ದಿಲ್ಲಿಗೆ
ಸದ್ಯ ಬಿಜೆಪಿಯವರು ಬೀಗುತ್ತಿದ್ದಾರೆ, ಬೀಗಲಿ. ಮುಖ್ಯ ಮಂತ್ರಿಗಳ ಕ್ಷೇತ್ರದಲ್ಲಿ ಎರಡು ಪಾಲಿಕೆ ಸೀಟುಗಳನ್ನು ಸೋತಿ ದ್ದಾರೆ. ಪಕ್ಕದ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತಿದ್ದಾರೆ.