ನವದೆಹಲಿ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜೂನ್ 08) ಬಿಜೆಪಿ ವಿರುದ್ಧ ಸರಣಿ ವಾಗ್ದಾಳಿ ನಡೆಸಿದ್ದು, ಜನರನ್ನು ಮೂರ್ಖರನ್ನಾಗಿಸಲು ಚುನಾವಣೆ ಸಂದರ್ಭದಲ್ಲಿ ಮಾತ್ರ ಪ್ರತ್ಯೇಕ ರಾಜ್ಯ, ಅಭಿವೃದ್ಧಿ ಯೋಜನೆಗಳ ಬಗ್ಗೆ ಭರವಸೆಗಳನ್ನು ನೀಡುತ್ತದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಬೆಚ್ಚಿ ಬೀಳಿಸುವ ಘಟನೆ: ಇಬ್ಬರು ಮಹಿಳೆಯರ ಅರ್ಧ ದೇಹಗಳು ಪತ್ತೆ
ಚುನಾವಣೆಯ ಹೊಸ್ತಿಲಲ್ಲಿರುವಾಗ ಭಾರತೀಯ ಜನತಾ ಪಕ್ಷ ಎಲ್ಲಾ ಭರವಸೆಗಳನ್ನು ಘೋಷಿಸುತ್ತದೆ. ನಂತರ ಅವುಗಳನ್ನೆಲ್ಲಾ ಮರೆತುಬಿಡುತ್ತದೆ ಎಂದು ಮಮತಾ ಬ್ಯಾನರ್ಜಿ ಅಲಿಪುರ್ದೌರ್ ನಲ್ಲಿ ನಡೆದ ಸಮಾರಂಭದಲ್ಲಿ ತಿಳಿಸಿದ್ದಾರೆ.
ಉತ್ತರ ಬಂಗಾಳದಲ್ಲಿ ಉದ್ವಿಗ್ನತೆ ಸೃಷ್ಟಿಸಲು ಮತ್ತು ಈ ಪ್ರದೇಶವನ್ನು ರಾಜ್ಯದಿಂದ ಪ್ರತ್ಯೇಕಗೊಳಿಸಲು ಕೇಸರಿ ಪಕ್ಷವು ಪ್ರತ್ಯೇಕತಾವಾದಿ ಕಮ್ಟಾಪರ್ ಲಿಬರೇಷನ್ ಸಂಘಟನೆಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದು ದೂರಿದ್ದಾರೆ.
ಪ್ರಸ್ತಾವಿತ ಕಮ್ಟಾಪುರ್ ರಾಜ್ಯದೊಳಗೆ ಮಮತಾ ಬ್ಯಾನರ್ಜಿ ಪ್ರವೇಶಿಸುವ ಧೈರ್ಯ ತೋರಿಸಬಾರದು ಎಂದು ಕಮ್ಟಾಪುರ್ ಲಿಬರೇಶನ್ ಸಂಘಟನೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿತ್ತು.