Advertisement

ಬಂಗಾಲದ ಮೇಲೆ ಬಿಜೆಪಿ ಪ್ರೀತಿ

01:30 AM Apr 09, 2019 | Team Udayavani |

ಒಟ್ಟು ನಲವತ್ತೆರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕೆನ್ನುವುದು ಬಿಜೆಪಿ ಗುರಿ. ಅದಕ್ಕಾಗಿ ಪ್ರಧಾನಿ ಮೋದಿ ಆ ರಾಜ್ಯದ ಮೇಲೆ ದೃಷ್ಟಿ ಕೇಂದ್ರೀಕರಿಸಿದ್ದಾರೆ. ಎರಡು ತಿಂಗಳಲ್ಲಿ ಅವರು ನಾಲ್ಕು ಬಾರಿ ಅಲ್ಲಿಗೆ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರಾಮುಖ್ಯತೆಯ ವಿವರ ಹೀಗಿದೆ.

Advertisement

03 ನೇ ಅತ್ಯಂತ ಹೆಚ್ಚು ಸಂಸದರನ್ನು ಕಳುಹಿಸುವ ರಾಜ್ಯ
02 2014ರಲ್ಲಿ ಬಿಜೆಪಿ ಗೆದ್ದ ಸ್ಥಾನಗಳು
02 1999ರಲ್ಲಿ ಗೆದ್ದ ಕ್ಷೇತ್ರಗಳು

ಸವಾಲು-ನಿರೀಕ್ಷೆಗಳು
42 ಕ್ಷೇತ್ರಗಳ ಪೈಕಿ ಈ ಬಾರಿ 22 ಕ್ಷೇತ್ರಗಳನ್ನು ಗೆಲ್ಲಬೇಕು ಎನ್ನುವುದು ಪಕ್ಷದ ನಿಲುವು. ಅದಕ್ಕಾಗಿ ಈ ಪ್ರದೇಶದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ನೆಚ್ಚಿಕೊಂಡಿದೆ.

ಪಶ್ಚಿಮ ಬಂಗಾಳದ ಒಟ್ಟು ಜನಸಂಖ್ಯೆಯ ಪೈಕಿ ಶೇ.30 ಮಂದಿ ಮುಸ್ಲಿಂ ಸಮುದಾಯದವರು. ಜತೆಗೆ 2ನೇ ಬಾರಿಗೆ ಅಲ್ಲಿ ಟಿಎಂಸಿ ಅಧಿಕಾರದಲ್ಲಿದೆ.

ಹೀಗಾಗಿ, ಟಿಎಂಸಿ ಸರ್ಕಾರದ ಭ್ರಷ್ಟಾಚಾರ, ಹಗರಣಗಳೇ ಬಿಜೆಪಿ ಪ್ರಧಾನ ಅಸ್ತ್ರ.

Advertisement

ಈಶಾನ್ಯ ರಾಜ್ಯದ ಏಳು ರಾಜ್ಯಗಳ ಪೈಕಿ ಸ್ವಂತವಾಗಿ, ಮೈತ್ರಿಕೂಟದ ಜತೆಗೆ ಪಕ್ಷ ಅಧಿಕಾರದಲ್ಲಿರುವುದೂ ಒಂದು ಆಶಾ ಭಾವನೆ.

ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್‌, ಛತ್ತೀಸ್‌ಗಢಗಳಲ್ಲಿ ಹಿಂದಿನ ಸಾಧನೆ ತೋರಲು ಅಸಾಧ್ಯ ಎಂಬ ಅಂಶಗಳ ಹಿನ್ನೆಲೆಯಲ್ಲಿ ಪೂರ್ವದತ್ತ ಹೆಚ್ಚು ಒಲವು.

Advertisement

Udayavani is now on Telegram. Click here to join our channel and stay updated with the latest news.

Next