ಮುಖ್ಯ ಮಂತ್ರಿ ಕೇಶವ್ ಪ್ರಸಾದ ಮೌರ್ಯ ಕ್ಷೇತ್ರಗಳಾದ ಗೋರಖ್‌ಪುರ ಮತ್ತು ಫೂಲ್ಪುರದಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ.
Advertisement
ಯೋಗಿ ಆದಿತ್ಯನಾಥ್ ಮತ್ತು ಕೇಶವ ಪ್ರಸಾದ್ ಮೌರ್ಯ ಅವರು ಸಿಎಂ ಮತ್ತು ಡಿಸಿಎಂ ಸ್ಥಾನಕ್ಕೇರಿದ ಬಳಿಕ ಲೋಕ ಸಭೆ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರಿಂದ ಈ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಈ ಎರಡೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸಮಾಜವಾದಿ, ಬಹುಜನ ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಂಡ ತಂತ್ರಗಾರಿಕೆ ಕೆಲಸ ಮಾಡಿದ್ದು, ಅಖೀಲೇಶ್ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಆದರೆ, ಈ ಸೋಲು ಬಿಜೆಪಿ ಪಾಲಿಗೆ ಭರಿಸಲಾಗದ ಪೆಟ್ಟು ನೀಡಿದೆ. ಇನ್ನು 1989ರಿಂದಲೂ ಗೋರಖ್ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲುತ್ತಾ ಬಂದಿದ್ದು ಭದ್ರ ಕೋಟೆಯಂತಿತ್ತು. ಫೂಲ್ಪು ರ ಕ್ಷೇತ್ರ ಕಳೆದ ಬಾರಿ ಯಷ್ಟೇ ಬಿಜೆಪಿ ಮುಡಿಗೆ ಬಂದಿತ್ತು. ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಎರಡೂ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ವಿಶ್ವಾಸವೂ ಸೋಲಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. 2019ರಲ್ಲೂ ಇದೇ ಒಪ್ಪಂದ?:
ಗೆಲುವು ಖಚಿತವಾಗುತ್ತಿದ್ದಂತೆಯೇ, ಅಖೀಲೇಶ್ ಯಾದವ್ ಸುದ್ದಿಗೋಷ್ಠಿಯಲ್ಲಿ ಮಾಯಾವತಿಗೆ ಧನ್ಯವಾದ ತಿಳಿಸಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲೂ ಈ ಮೈತ್ರಿ ಮುಂದುವರಿಯುವ ಸಾಧ್ಯತೆಗಳಿವೆ.
Related Articles
ಇದೇ ವೇಳೆ ಬಿಹಾರದಲ್ಲಿ ಆರ್‌ಜೆಡಿ ಮೇಲುಗೈ ಸಾಧಿಸಿದೆ. ಅರಾರಿಯಾ ಮತ್ತು ಜೆಹಾನಾಬಾದ್ ಲೋಕ ಸಭಾ ಕ್ಷೇತ್ರಗಳಲ್ಲಿ ಆರ್‌ಜೆಡಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇನ್ನು ಬಭುವಾ ಕ್ಷೇತ್ರದಲ್ಲಿ ಬಿಜೆ ಪಿಯ ರಿಂಕಿ ರಾಣಿ ಪಾಂಡೆ ಗೆದ್ದಿದ್ದಾರೆ. ಗಮನಾರ್ಹ ಅಂಶವೆಂದರೆ ಆಯಾಯ ಕ್ಷೇತ್ರಗಳಲ್ಲಿ ಆರ್‌ಜೆಡಿ ಮತ್ತು ಬಿಜೆಪಿ ಗೆದ್ದಿದ್ದರೂ, ಸರ್ಕಾರಕ್ಕೆ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
Advertisement
ನಮ್ಮ ಅತಿಯಾದ ಆತ್ಮವಿಶ್ವಾಸ ಮತ್ತು ಎದುರಾಳಿಗಳ ಒಳ ಮೈತ್ರಿಯನ್ನು ನಾವು ಸರಿಯಾಗಿ ವಿಶ್ಲೇಷಣೆ ನಡೆಸದೇ ಇರುವುದು ನಮ್ಮ ಸೋಲಿಗೆ ಕಾರಣವಾಯಿತು.-ಯೋಗಿ ಆದಿತ್ಯನಾಥ್, ಉ.ಪ್ರ. ಸಿಎಂ ಬಿಜೆಪಿ ಬಗ್ಗೆ ಜನರು ಕೋಪ ಗೊಂಡಿದ್ದಾರೆ ಎಂಬುದು ಈ ಫಲಿತಾಂಶಗಳಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ.ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಶಕ್ತಿ ವೃದ್ಧಿಗೆ ಪ್ರಯತ್ನ ನಡೆಸುತ್ತೇವೆ.
ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ