Advertisement

ಉಗ್ರರ ಹಿಟ್‌ಲಿಸ್ಟಲ್ಲಿ ಬಿಜೆಪಿ ನಾಯಕರು?

12:49 AM Jun 09, 2019 | Team Udayavani |

ಜಮ್ಮು: ಕಣಿವೆ ರಾಜ್ಯದ ಬಿಜೆಪಿ ನಾಯಕರ ಜೀವಕ್ಕೆ ಅಪಾಯವಿದ್ದು, ಉಗ್ರ ವಾದಿಗಳು ಅವರ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಹತ್ವದ ಮಾಹಿತಿಯೊಂದನ್ನು ಗುಪ್ತಚರ ಇಲಾಖೆ, ಜಮ್ಮು ಕಾಶ್ಮೀರ ಪೊಲೀಸ್‌ ಇಲಾಖೆಗೆ ರವಾನಿಸಿದೆ.

Advertisement

ಉಗ್ರರ ಹಿಟ್‌ ಲಿಸ್ಟ್‌ನಲ್ಲಿ ಜಮ್ಮು ಕಾಶ್ಮೀರದ ಬಿಜೆಪಿ ರಾಜ್ಯಾಧ್ಯಕ್ಷ ರವಿಂದರ್‌ ರೈನಾ ಹೆಸರೂ ಇದೆ ಎಂದು ಮಾಹಿತಿಯಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ಜಮ್ಮು, ಕಥುವಾ, ಸಾಂಬಾ, ಪೂಂಛ… ಹಾಗೂ ರಜೌರಿ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗಳಿಗೆ ಹಾಗೂ ರೇಂಜ್‌ ಅಧಿಕಾರಿಗಳ ಕಚೇರಿಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿ, ಬಿಗಿಭದ್ರತೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆರ್‌ಎಸ್‌ಎಸ್‌ ಪ್ರಚಾರಕರಾಗಿರುವ ರೈನಾರನ್ನು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಕಳೆದ ವರ್ಷ ನೇಮಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next