Advertisement
ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇರುವ ಕಾರಣ ಹತಾಶೆಯಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಹೆಚ್ಚಿರುವ ಭ್ರಷ್ಟಾಚಾರ ಕುರಿತು ಗುತ್ತಿಗೆದಾರರೇ ಪ್ರಧಾನಿ, ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಧರ್ಮಾಧಾರಿತ ರಾಜಕಾರಣ ನಡೆಸಿ ಜನರ ಮನಸ್ಸನ್ನು ಸೆಳೆಯಲು ಯತ್ನಿಸುವ ಬದಲು ಉತ್ತಮ ಯೋಜನೆಗಳನ್ನು ತಂದು, ಅಭಿವೃದ್ಧಿಯಲ್ಲಿ ಇತರ ರಾಜ್ಯಗಳ ಜತೆ ಪೈಪೋಟಿ ನೀಡಲಿ ಎಂದರು.
ಕಂದಾಯ ಸಚಿವರ ಗ್ರಾಮವಾಸ್ತವ್ಯ ಸ್ವಾಗತಾರ್ಹ. ಆದರೆ ಅವರ ಡೀಮ್ಡ್ ಅರಣ್ಯ ಕುರಿತಾದ ಹೇಳಿಕೆ ಭರವಸೆಗೆ ಸೀಮಿತವಾಗಬಾರದು. ಕಾರ್ಯೋನ್ಮುಖ ರಾಗಬೇಕು. ಹಿಜಾಬ್ ಕುರಿತು ನ್ಯಾಯಾಲಯದ ತೀರ್ಪು ಬಂದ ಬಳಿಕ ಕಾಂಗ್ರೆಸ್ ಸ್ಪಷ್ಟ ನಿಲುವು ತಳೆಯಲಿದೆ. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಮೌನ ವಹಿಸಿಲ್ಲ. ಕಾಂಗ್ರೆಸ್ ಕಾನೂನು ಘಟಕದವರೇ ವಾದ ಮಂಡಿಸುತ್ತಿದ್ದಾರೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಾಗ ಸುಮ್ಮನಿರಲಾಗದು ಎಂದೇ ಈಶ್ವರಪ್ಪ ವಿರುದ್ಧ ಧರಣಿ ಮಾಡಲಾಗುತ್ತಿದೆ. ಒಂದೊಮ್ಮೆ ಕಾಂಗ್ರೆಸ್ ಹೇಳಿಕೆ ನೀಡಿರುತ್ತಿದ್ದರೆ ಬಿಜೆಪಿ ಸುಮ್ಮನಿರುತ್ತಿತ್ತಾ ಎಂದು ಪ್ರಶ್ನಿಸಿದರು.
Related Articles
Advertisement