ಕೋಲಾರ: ಜಿದ್ದಾಜಿದ್ದಿನಿಂದ ಕೂಡಿದ್ದ ತಾಲೂಕಿನ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನರಸಾಪುರ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಮುಖಂಡ ನವೀನ್ ತನ್ನ ಬೆಂಬಲಿತ ಸದಸ್ಯರಿಗೆ ಬಂದೋಬಸ್ತ್ ನೀಡಲು ಖಾಸಗಿ ಬೌನ್ಸರ್‌ಗಳನ್ನು ಬಳಸಿಕೊಂಡಿದ್ದು, ಟೀಕೆಗೆ ಗುರಿಯಾಯಿತು.
ಚುನಾವಣೆಯಲ್ಲಿ ತನ್ನ ಸಹೋದರ ಸುಮನ್ ಚಂದ್ರರನ್ನು ಗೆಲ್ಲಿಸಿಕೊಳ್ಳುವ ಉದ್ದೇಶದಿಂದ ಬೆಂಬಲಿತ ಸದಸ್ಯರಿಗೆ ಬೌನ್ಸರ್‌ಗಳ ಪಹರೆ ನೆರವು ತೆಗೆದುಕೊಂಡಿದ್ದರು. ಚುನಾವಣೆ ಸಂದರ್ಭದಲ್ಲಿ ಬೌನ್ಸರ್‌ಗಳು ಗ್ರಾಪಂ ಕಚೇರಿ ಪ್ರವೇಶಿಸಲು ಪ್ರಯತ್ನಿ ಸುವುದನ್ನು ಇತರೇ ಸದಸ್ಯರು ವಿರೋಧಿಸಿದರು. ಇದರಿಂದ ಪೊಲೀಸರು ಬೌನ್ಸರ್‌ಗಳಿಗೆ ಚುನಾವಣೆ ಕೇಂದ್ರಕ್ಕೆ ಒಳಹೋಗಲು ಅನುಮತಿ ನಿರಾಕರಿಸಿ ಲಾಠಿ ಬೀಸಲು ಮುಂದಾದರು.
ಇದನ್ನೂ ಓದಿ :ಅಡಿಕೆ ಆರೋಗ್ಯಕ್ಕೆ ಪೂರಕ ಎಂಬ ಸಂಶೋಧನೆ ಪ್ರಗತಿಯಲ್ಲಿದೆ: ಆರಗ ಜ್ಞಾನೇಂದ್ರ
ವರ್ತೂರು ಕಡೆ ಹೋದ ಸದಸ್ಯರನ್ನ ಕೊನೆ ಕ್ಷಣದಲ್ಲಿ ಸೆಳೆಯಲು ಗಲಾಟೆ ಮಾಡಲು ಕೇಂದ್ರದ ಬಳಿ ಹತ್ತಾರು ಜನರು ಜಮಾಯಿಸಿದ್ದರು. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸುಮಿತ್ರಾ, ಉಪಾಧ್ಯಕ್ಷರಾಗಿ ಸುಮನ್ ಚಂದ್ರು ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿ ಬಿಇಒ ನಾಗರಾಜಗೌಡ ಅವರ ಸಮ್ಮುಖದಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 17 ಸದಸ್ಯರು ಭಾಗಿಯಾಗಿ ದ್ದರು, ಬಿಜೆಪಿ ಮುಖಂಡ ನವೀನ್ ಬೆಂಬಲಿತ ಅಧ್ಯಕ್ಷಸ್ಥಾನದ ಸದಸ್ಯೆ ಸುಮಿತ್ರಾ ಅವರು 11 ಮತಗಳು, ಉಪಾಧ್ಯಕ್ಷ್ಯ ಸ್ಥಾನದ ಸದಸ್ಯ ಸುಮನ್ ಚಂದ್ರು ಪರವಾಗಿ 11 ಮತಗಳನ್ನ ಪಡೆಯುವ ಮೂಲಕ ಜಯಶೀಲರಾಗಿದ್ದಾರೆಂದು ಘೋಷಿಸಿದರು. ಕೋಲಾರ ಗ್ರಾಮಾಂತರ ಪೊಲೀಸರು, ವೇಮಗಲ್ ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.