Advertisement

ಯುವಕನ ಮೇಲೆ ಕೊಲೆ ಪ್ರಯತ್ನ ತಪ್ಪಿಸ್ಥರ ವಿರುದ್ಧ ಕಾನೂನು ಜರುಗಿಸಿ: ಕೌಲನಹಳ್ಳಿ ಸೋಮಶೇಖರ್

07:19 PM Dec 18, 2021 | Team Udayavani |

ಪಿರಿಯಾಪಟ್ಟಣ: ತಾಲೂಕಿನ ರಾಣಿಗೇಟ್ ಹಾಡಿಯ ಬಸಪ್ಪ ಎಂಬ ಗಿರಿಜನ ಯುವಕನ ಮೇಲೆ ಗುಂಡು ಹಾರಿಸಿರುವುದು ಕಾನೂನು ಬಾಹಿರವಾಗಿದ್ದು ಶೀಘ್ರದಲ್ಲೆ ಅರಣ್ಯ ಇಲಾಖೆಯವರ ಮೇಲೆ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕು ಎಂದು ಪರಿಸರ ಹೋರಾಟಗಾರ ಬಿಜೆಪಿ ಮುಖಂಡ ಕೌಲನಹಳ್ಳಿ ಸೋಮಶೇಖರ್ ಆಗ್ರಹಿಸಿದ್ದಾರೆ.

Advertisement

ಪಿರಿಯಾಪಟ್ಟಣದ ರಾಣಿಗೇಟ್ ಹಾಡಿಯ ಬಸಪ್ಪ ಮನೆ ಮತ್ತು ಘಟನೆ ನಡೆದ ಸ್ಥಳಗಳನ್ನು ಹಾಡಿಯ ಮುಖಂಡರೊಂದಿಗೆ ಭೇಟಿ ನೀಡಿ ಹಾಡಿಯ ಜನರೊಂದಿಗೆ ಮಾತುಕತೆ ನಡೆಸಿದರು. ಯಾವುದೆ ಅರಣ್ಯ ಇಲಾಖೆಯ ಕಾನೂನಿನಲ್ಲಿ ಮತ್ತು ಅರಣ್ಯ ಇಲಾಖೆ ಮ್ಯಾನ್ಯುಯಲ್‌ನಲ್ಲಿ  ವಾಚರ್‌ಗಳು ಬಂದೂಕು ಬಳಸಲು ಅವಕಾಶ ನೀಡಿಲ್ಲ, ಶಸ್ತ್ರಕಾಯಿದೆ ಪ್ರಕಾರ ಅಕ್ರಮವಾಗಿ ಬಂದೂಕು ಚಲಾಯಿಸಿರುವುದು ಅಕ್ಷ್ಯಮ್ಮ ಅಪರಾಧವಾಗಿದೆ. ಮುಗ್ಧ ಗಿರಿಜನರನ್ನು ಬೆದರಿಸುವ ತಂತ್ರಗಾರಿಗೆ ಬ್ರೀಟಿಷರ ಕಾಲದಿಂದಲೂ ನಡೆದುಕೊಂಡು ಬಂದಿದೆ, ಇದೊಂದು ಅಮಾನವೀಯ ಪ್ರಕರಣ ಅರಣ್ಯ ಇಲಾಖೆ ಹೇಳುವಂತೆ ಗಂಧದ ಮರಕಳ್ಳತ ಮಾಡುತ್ತಿದ್ದರು ಎಂಬ ಆರೋಪ ಇದ್ದಾಗಿಯೂ ಗುಂಡುಹೊಡೆಯುವ ಅಧಿಕಾರ ವಾಚರ್‌ಗಳಿಗೆ ಇಲ್ಲವಾಗಿದೆ, ಬಂದೂಕು ಪರವಾನಗಿಯೂ ವಲಯ ಅರಣ್ಯಾಧಿಕಾರಿಗಳ ಹೆಸರಿನಲ್ಲಿ ನೀಡಲಾಗಿದ್ದು ಕೆಳಹಂತದ ನೌಕರರು ಬಂದೂಕು ಬಳೆಕೆ ಮಾಡುವಂತೆ ಯಾವುದೆ ಮ್ಯಾನ್ಯುವಲ್‌ನಲ್ಲಿ ತಿಳಿಸಲಾಗಿಲ್ಲ ಆದ್ದರಿಂದ ಶೀಘ್ರದಲ್ಲಿ ಕಾನೂನು ಮೀರಿ ಶೂಟ್ ಮಾಡಿರುವ ನೌಕರರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

 ಕಾನೂನು ಹೋರಾಟ :

ಹಾಡಿಯ ಜನರು ಪ್ರತಿಯಾಗಿ ನೀಡಿರುವ ದೂರನ್ನು ಸ್ವೀಕರಿಸದೆ ಮೀನಾ ಮೇಷ ಎಣಿಸುತ್ತಿರುವ ಪೊಲೀಸ್ ಇಲಾಖೆಗೆ ಬಂದೂಕು ಬಳಕೆಯಾಗಿರುವುದರಿಂದ ಜಿಲ್ಲಾಧಿಕಾರಿಗಳು ಸೂಕ್ತ ಸೂಚನೆ ನೀಡಿ ಅರಣ್ಯ ಇಲಾಖೆಯವರ ವಿರುದ್ಧವು ಎಫ್‌ಐಆರ್ ದಾಖಲಿಸಬೇಕು ಇಲ್ಲದಿದ್ದಲ್ಲಿ ಈ ಬಗ್ಗೆ ಕಾನೂನು ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next