Advertisement

Chhattisgarh;ವಿಷ್ಣುದೇವ ಸಾಯಿ ಪ್ರಮಾಣವಚನ ಸ್ವೀಕಾರ:ಪ್ರಧಾನಿ ಮೋದಿ ಭಾಗಿ; Watch

04:25 PM Dec 13, 2023 | Vishnudas Patil |

ರಾಯ್ ಪುರ್ : ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ನಾಯಕ ವಿಷ್ಣು ದೇವ ಸಾಯಿ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ಬುಧವಾರ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದರು.

Advertisement

ಉಪ ಮುಖ್ಯಮಂತ್ರಿಗಳಾಗಿ ಅರುಣ್ ಸಾವೋ, ವಿಜಯ್ ಶರ್ಮ ಪ್ರಮಾಣ ವಚನ ಸ್ವೀಕಾರ ಮಾಡಿದರು. ಸಮಾರಂಭದಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಸೇರಿ ಪ್ರಮುಖ ನಾಯಕರು ಹಾಜರಿದ್ದರು.

ಸಾವಿರಾರು ಮಂದಿ ಬಿಜೆಪಿ ಮುಖಂಡರು ಮತ್ತು ಬಿಜೆಪಿ ಕಾರ್ಯಕರ್ತರು ವೇದಿಕೆಯ ಮುಂದೆ ಆಸೀನರಾಗಿದ್ದರು. ಬಿಜೆಪಿ , ನರೇಂದ್ರ ಮೋದಿ ಮತ್ತು ವಿಷ್ಣು ದೇವ ಅವರ ಪರ ಜೈಕಾರಗಳನ್ನು ಮೊಳಗಿಸಿದರು. ಸಮಾರಂಭಕ್ಕೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next