Advertisement

ಬಿಜೆಪಿ ಬರ ಪ್ರವಾಸ ಶುರು;ಒಗ್ಗಟ್ಟು ಪ್ರದರ್ಶನ;ದಲಿತನ ಮನೆಯಲ್ಲಿ ಉಪಹಾರ

12:22 PM May 18, 2017 | |

ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ನೇತೃತ್ವದಲ್ಲಿ  ರಾಜ್ಯ ಬಿಜೆಪಿ ನಾಯಕರು ಇಂದು ಗುರುವಾರದಿಂದ 36 ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. 

Advertisement

ಬೆಳಗ್ಗೆ ತುಮಕೂರು ಸಿದ್ಧಗಂಗಾ ಮಠದಲ್ಲಿ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದು ಯಡಿಯೂರಪ್ಪ ಅವರು ಪ್ರವಾಸ ಆರಂಭಿಸಿದರು. ಈ ವೇಳೆ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ ,ಕೇಂದ್ರ ಸಚಿವರಾದ ಅನಂತಕುಮಾರ್‌,ಡಿ.ವಿ.ಸದಾನಂದಗೌಡ, ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ ,ಸೊಗಡು ಶಿವಣ್ಣ ,ವಿ.ಶ್ರೀರಾಮುಲು ಸೇರಿದಂತೆ ಸಂಸದರು, ಶಾಸಕರು ಸಾಥ್‌ ನೀಡಿದ್ದಾರೆ.

ದಲಿತನ ಮನೆಯಲ್ಲಿ ಉಪಹಾರ 
ಮರಳೂರು ರಸ್ತೆಯಲ್ಲಿರುವ ದಲಿತ ಮಧು ಎನ್ನುವವರ ನಿವಾಸದಲ್ಲಿ ಯಡಿಯೂರಪ್ಪ ಸಹಿತ ಎಲ್ಲಾ ನಾಯಕರು ಜೊತೆಯಾಗಿ ಕುಳಿತು ಉಪಹಾರ ಸೇವಿಸಿದರು. 

ಇಲ್ಲೂ ಎರಡು ತಂಡ!
ತುಮಕೂರು ಪ್ರವಾಸದ ವೇಳೆ ಯಡಿಯೂರಪ್ಪ ಅವರು ಒಂದು ತಂಡದಲ್ಲಿದ್ದರೆ ಭಿನ್ನ ನಾಯಕ ಎನಿಸಿಕೊಂಡಿರುವ ಈಶ್ವರಪ್ಪ ಪ್ರತ್ಯೇಕವಾಗಿ ಪ್ರವಾಸ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. 

ಬಿಜೆಪಿ ಒಂದೇ ಪ್ರವಾಸದಲ್ಲಿ ಮೂರು ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಮುಂದಾಗಿದ್ದು ರಾಜ್ಯಾದ್ಯಂತ ಇರುವ ಬರ ಪರಿಸ್ಥಿತಿ ಅಧ್ಯಯನ ಮತ್ತು ಸರ್ಕಾರ ಕೈಗೊಂಡಿರುವ ಪರಿಹಾರ ಕಾಮಗಾರಿಗಳ ವಾಸ್ತವಿಕ ಚಿತ್ರಣ ತಿಳಿಯುವುದು, ಪಕ್ಷ ಸಂಘಟನೆ ಮತ್ತು ಆಂತರಿಕ ಬಿಕ್ಕಟ್ಟು ಶಮನ ಮಾಡಿ ಒಗ್ಗಟ್ಟು ಮೂಡಿಸುವುದು, ಕಾಂಗ್ರೆಸ್‌ನ ವೋಟ್‌ಬ್ಯಾಂಕ್‌ ಆಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕೇರಿಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನೂ ಆಲಿಸಿ ಬಿಜೆಪಿಯತ್ತ ಸೆಳೆದುಕೊಳ್ಳುವುದು ಉದ್ದೇಶವಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next