Advertisement

BJP; ಹೊಸಮುಖ ಡಾ.ಬಸವರಾಜ ಕ್ಯಾವಟರ್ ಅವರಿಗೆ ಕೊಪ್ಪಳ ಎಂಪಿ ಟಿಕೆಟ್

08:17 PM Mar 13, 2024 | Team Udayavani |

ಕೊಪ್ಪಳ: ಬಿಜೆಪಿ ಹೈಕಮಾಂಡ್ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಹೊಸ ಮುಖ ಡಾ.ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ.

Advertisement

ಕಳೆದ ಎರಡು ಅವಧಿಗೆ ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಈ ಬಾರಿಯೂ ಸಹ ಸಂಗಣ್ಣ ಅವರು ಟಿಕೆಟ್ ನಿರೀಕ್ಷೆಯಲ್ಲಿದ್ದರು. ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಲಿದೆ ಎನ್ನುವ ಸುದ್ದಿಗಳು ರಾಜಕೀಯ ವಲಯದಲ್ಲಿ ಹರಿದಾಡಿದ್ದವು. ಕೊನೆಗೂ ಅವರಿಗೆ ಈ ಬಾರಿ ಟಿಕೆಟ್ ತಪ್ಪಿದೆ.

2019 ರಲ್ಲೇ ಡಾ.ಬಸವರಾಜ ಕೆ ಅವರು ಎಂಪಿ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರು. ಆಗ ಕೈ ತಪ್ಪಿತ್ತು. ಈ ಬಾರಿ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಡಾ.ಬಸವರಾಜ ಹೊಸ ಮುಖವಾಗಿದ್ದರೂ ಸಹ ಅವರ ಕುಟುಂಬವು ರಾಜಕಾರಣದಲ್ಲಿದ್ದು, ಅವರ ತಂದೆ ಕೆ.ಶರಣಪ್ಪ ಅವರು ಜೆಡಿಎಸ್‌ನಿಂದ ಹಿಂದೊಮ್ಮೆ ಶಾಸಕರಾಗಿದ್ದರು. ಈಗ ಬಿಜೆಪಿಯಲ್ಲಿದ್ದಾರೆ. ಹಾಲಿ ಸಂಸದ ಸಂಗಣ್ಣ ಕರಡಿ ಅವರ ನಡೆಯನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next