Advertisement
ದಾವಣಗೆರೆಯಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಈ ಚುನಾವಣೆಗಳಲ್ಲಿ ಗೆಲ್ಲುವ ನಿರ್ಣಯ ಕೈಗೊಳ್ಳಲಾಗಿದೆ. ಚುನಾವಣೆಗಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಬೂತ್ ಮಟ್ಟದಲ್ಲಿ ಪದವೀಧರ ಮತ್ತು ಶಿಕ್ಷಕರ ನೋಂದಣಿ ಮಾಡಬೇಕು ಎಂದು ತೀರ್ಮಾನಿಸಲಾಗಿದೆ.
Related Articles
Advertisement
ಅಧಿವೇಶನದ ಬಳಿಕ ರಾಜ್ಯ ಪ್ರವಾಸ:
ಅಧಿವೇಶನದ ಬಳಿಕ ರಾಜ್ಯಾದ್ಯಂತ ಪ್ರವಾಸ ಮಾಡುವ ಮೂಲಕ ಆಡಳಿತಕ್ಕೆ ಚುರುಕು ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಸ್ವಾತಂತ್ರ್ಯಾನಂತರ ಸುದೀರ್ಘ ಕಾಲ ದ್ವಂದ್ವ ರಾಜಕಾರಣ ಮಾಡಿದ ಕಾಂಗ್ರೆಸ್‌ನಿಂದ ದೇಶಕ್ಕೆ ಸಾಕಷ್ಟು ನಷ್ಟವಾಗಿದೆ ಎಂದು ವಾಗ್ಧಾಳಿ ನಡೆಸಿದರು.
ಈಶ್ವರಪ್ಪ ಅವರಿಗೆ ಹಿಂ. ವರ್ಗಗಳ ಹೊಣೆ :
ರಾಜ್ಯ ಕಾರ್ಯಕಾರಿಣಿಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವ ವಹಿಸಲಾಗಿದೆ.
ಮತ್ತೆ ನಮ್ಮದೇ ಸರಕಾರ: ನಳಿನ್ :
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿಶ್ವಾಸ ವ್ಯಕ್ತಪಡಿಸಿದರು. ಕಾರ್ಯಕಾರಿಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ – ರಾಜ್ಯ ಸರಕಾರಗಳ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಸಂಘಟನೆ ವಿಸ್ತರಿಸಲಾಗುವುದು ಎಂದರು.
ವಿಜಯ ಯಾತ್ರೆ ಸತತ: ಸಿಂಗ್ :
ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು. ಬಿಎಸ್‌ವೈ ಅಧಿಕಾರಾವಧಿಯಲ್ಲಿ ಪ್ರಾರಂಭವಾದ ವಿಜಯ ಯಾತ್ರೆ ಹಾಲಿ ಸಿಎಂ ಬೊಮ್ಮಾಯಿ ಅವಧಿಯಲ್ಲೂ ಮುಂದುವರಿಯಲಿದೆ ಎಂದರು.
ಪ್ರಮುಖ ನಿರ್ಣಯಗಳು :
- ಜಿ.ಪಂ., ತಾ.ಪಂ., ಪರಿಷತ್ ಚುನಾವಣೆಗೆ ಈಗಿನಿಂದಲೇ ಸಿದ್ಧತೆ.
- ಪಕ್ಷ ಸಂಘಟನೆಗಾಗಿ ನಾಯಕರು ನಾಲ್ಕು ತಂಡಗಳಾಗಿ ಪ್ರವಾಸ.
- ದೇಗುಲ ತೆರವು ತತ್‌ಕ್ಷಣ ಸ್ಥಗಿತ.
- ಹಿಂದುಳಿದ ಜಾತಿಗಳು ಒಬಿಸಿಗೆ; ಎಚ್ಚರಿಕೆಯಿಂದ ನಿಭಾವಣೆ.
- ಶೀಘ್ರ ಕಡತ ವಿಲೇವಾರಿಗಾಗಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ.
- ಅಂತಾರಾಜ್ಯ ಜಲವಿವಾದ ಶೀಘ್ರ ಇತ್ಯರ್ಥಕ್ಕೆ ಆದ್ಯತೆ.
- ರೈಲ್ವೇ, ರಾ. ಹೆದ್ದಾರಿ ಸಂಬಂಧಿ ಬೇಡಿಕೆ: ಕೇಂದ್ರದೊಂದಿಗೆ ಸಮಾಲೋಚನೆ.
- ಸರಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಪುಸ್ತಕಗಳಿಗೆ ಆದ್ಯತೆ.
- ಪಾರದರ್ಶಕ ಆಡಳಿತಕ್ಕೆ ಒತ್ತು.