Advertisement
ಸಂಪುಟ ರಚನೆ ಕುರಿತು ಚರ್ಚಿಸುವುದಕ್ಕಾಗಿ ದಿಲ್ಲಿಗೆ ತೆರಳಲು ಬೊಮ್ಮಾಯಿ ಸಮಯ ಕೇಳಿ ದ್ದಾರೆ. ಹೊಸ ಮುಖಗಳಿಗೆ ಆದ್ಯತೆ ನೀಡಲು ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಸಚಿವಾಕಾಂಕ್ಷಿಗಳು ಈಗಾ ಗಲೇ ಲಾಬಿ ಆರಂಭಿಸಿದ್ದಾರೆ.
Related Articles
Advertisement
ಸಚಿವರಾಗಿದ್ದೂ ಸಕ್ರಿಯರಾಗಿರ ದಿದ್ದ ಎಂ.ಟಿ.ಬಿ. ನಾಗರಾಜ್, ಶ್ರೀಮಂತ ಪಾಟೀಲ್, ಕೆ. ಗೋಪಾಲಯ್ಯ, ನಾರಾಯಣ ಗೌಡ ಸಹಿತ ಕೆಲವರನ್ನು ಹೊರಗಿಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ವಲಸಿಗರಲ್ಲಿ ಯಾರನ್ನೂ ಕೈಬಿಡಬಾರದು ಎಂದು ಬೊಮ್ಮಾಯಿ ಮತ್ತು ಬಿಎಸ್‌ವೈ ಅವರು ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ವಲಸಿಗ ಮಾಜಿ ಸಚಿವರೆಲ್ಲ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ನಮ್ಮನ್ನು ಸಂಪುಟದಿಂದ ಹೊರಗಿಡುವುದಾಗಿ ಹೇಳಿಲ್ಲ. ಅಂಥ ಪ್ರಶ್ನೆ ಉದ್ಭವಿಸುವುದಿಲ್ಲ. ನಮಗೆ ವರಿಷ್ಠರ ಮೇಲೆ ನಂಬಿಕೆ ಇದೆ, ಆತಂಕ ಇಲ್ಲ ಎಂದು ಭೇಟಿಯ ಬಳಿಕ ಮಾಜಿ ಸಚಿವರು ಹೇಳಿದ್ದಾರೆ.
ಜತೆಗೆ, ಅರ್ಜಿ ಕುರಿತು ಆಕ್ಷೇಪಣೆ ಸಲ್ಲಿಸಲು ಸೂಚಿಸಿ ಪ್ರತಿವಾದಿಯಾಗಿರುವ ರಾಜ್ಯ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ದೇವಿ ಪ್ರಸಾದ್ ಅವರಿಗೂ ನೋಟಿಸ್ ಜಾರಿಗೊಳಿಸಿತು.