Advertisement
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿ, ಆರು ಕ್ಷೇತ್ರಗಳಿಗೆ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರವು ಬಂಡಾಯ ಹಾಗೂ ಬೇರೆ ಕಾರಣಗಳಿಗಾಗಿ ಹೆಚ್ಚು ಚರ್ಚೆಯಾಗುತ್ತಿದೆ. ಡಾ| ಧನಂಜಯ ಸರ್ಜಿ, ಭೋಜೇಗೌಡ ಅವರ ಪರವಾಗಿ ಈ ಭಾಗದ ಮುಖಂಡರು, ಕಾರ್ಯಕರ್ತರು ಕೆಲಸ ಮಾಡುತ್ತಿದ್ದು, ಯಾವುದೇ ಗೊಂದಲವಿಲ್ಲ. ಮೊದಲ ಪ್ರಾಶಸ್ತ್ಯದ ಅತೀ ಹೆಚ್ಚು ಮತವನ್ನು ಪಡೆದು ವಿಜಯಶಾಲಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನ ಗ್ಯಾರಂಟಿಗಳೆಲ್ಲಾ ಸಂಪೂರ್ಣ ವಿಫಲವಾಗಿದ್ದು, ಮುಖ್ಯಮಂತ್ರಿಯವರು ಭ್ರಮೆಯಲ್ಲಿದ್ದಾರೆ. ರಾಜ್ಯದ ಪ್ರಜ್ಞಾವಂತ ಮತ ದಾರರು ಪ್ರಧಾನಿ ನರೇಂದ್ರ ಮೋದಿಯನ್ನು ಮತ್ತೆ ಪ್ರಧಾನಿ ಆಗಿಸಲಿದ್ದಾರೆ. ನಾನು ಭವಿಷ್ಯ ನುಡಿ ನುಡಿಯುತ್ತಿದ್ದೇನೆ ಎಂದು ಭಾವಿಸಬೇಡಿ. ನಿಸ್ಸಂದೇಹವಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಅತೀ ಹೆಚ್ಚು ಸ್ಥಾನ ಗಳಿಸಿ ದಾಖಲೆ ಸೃಷ್ಟಿಸಲಿದೆ ಎಂದರು.
Related Articles
Advertisement
ಮಾಜಿ ಶಾಸಕರ ಬಂಡಾಯದ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿ. ಅವರಿಗೆ ಒಳ್ಳೆಯದು ಮಾಡಲಿ ಎಂದು ಪ್ರತಿಕ್ರಿಯಿಸಿದರು.ರಾಹುಲ್ ಗಾಂಧಿ ಒಂದು ಲಕ್ಷ ರೂಪಾಯಿ ಘೋಷಣೆ ವಿಷಯ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಹೆಚ್ಚು ದಿನ ಈ ಆಟಗಳು ನಡೆಯುವುದಿಲ್ಲ ಎಂದರು.
ದೇವಳದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ವಿಶ್ರಾಂತ ಹಿರಿಯ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಪ್ರದೀಪ್ ಜಿ.ಆರ್.ಉಪಾಧ್ಯಾಯ, ಪ್ರವೀಣ್ ಜಿ.ಆರ್ ಉಪಾಧ್ಯಾಯ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮತ್ತಿತರರು ಭಾಗವಹಿಸಿದ್ದರು.
ಶ್ರೀ ರಾಮ ಮಂದಿರದ ಪ್ರತಿಕೃತಿ ವೀಕ್ಷಿಸಿ ಮನಸೋತ ಬಿ.ವೈ. ವಿಜಯೇಂದ್ರದೇವಸ್ಥಾನದಲ್ಲಿ ಧರ್ಮ ಜಾಗೃತಿ, ಶ್ರೀ ರಾಮನ ಚಿಂತನೆ ಮತ್ತು ಆದರ್ಶಗಳನ್ನು ಜನರಿಗೆ ತಲುಪಿಸಲು ತುಮಕೂರಿನ ಶಿಕ್ಷಕ ವಿನಯ ರಾಮ್ ಅವರು ಸುಮಾರು 86 ಕೆಜಿ ಥರ್ಮಾಕೂಲ್ ಬಳಸಿ ನಿರ್ಮಿಸಿರುವ ಶ್ರೀ ರಾಮ ಮಂದಿರದ ಮಾದರಿ ಪ್ರದರ್ಶನ ವನ್ನು ಬಿ.ವೈ. ವಿಜಯೇಂದ್ರ ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.