ಪದಾಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಧ್ವನಿ ಹೊರಹಾಕಿದ್ದಾರೆ.
Advertisement
ಕಳೆದ ಕೆಲ ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ಡಾ|ಸಿದ್ದಲಿಂಗಪ್ಪಾ ಪಾಟೀಲ ಪರಿವಾರದವರು ಪಕ್ಷದಸಿದ್ದಾಂತಗಳ ವಿರುದ್ಧಕೆಲಸ ಮಾಡುತ್ತಿದ್ದಾರೆ ಎಂದು ಕೆಲ ಕಾರ್ಯಕರ್ತರು, ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲಾ ಕಡೆಗಳಲ್ಲಿ ಇಂದಿಗೂ ಜನರ ಸಂಪರ್ಕ ಉಳಿಸಿಕೊಂಡಿದ್ದಾರೆ. ರಾಜಕೀಯ ಗುದ್ದಾಟದಲ್ಲಿ ಬಿಜೆಪಿ ಸೇರ್ಪಡೆಗೊಂಡಿರುವ ಡಾ| ಸಿದ್ದಲಿಂಗಪ್ಪ
ಪಾಟೀಲ ಈ ಕ್ಷೇತ್ರದ ಬಿಜೆಪಿ ಮುಂದಿನ ಉಮೇದುವಾರರು ಎಂಬತೆ ಗುರುತಿಸಿಕೊಂಡರು. ಇವರ ಆಗಮನದಿಂದ ಅನೇಕರು ವಿರೋಧ
ವ್ಯಕ್ತಪಡಿಸಿದರು. ಇನ್ನೂ ಅನೇಕರು ಸ್ವಾಗತ ಮಾಡಿಕೊಂಡಿದರು. ಎಲ್ಲ ಬಲಗಳು ಹೊಂದಿರುವ ಪಾಟೀಲ ಪರಿವಾರ ಬಿಜೆಪಿಗೆ ಬಂದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಆನೆ ಬಲ ಬಂತು ಎಂದು ಅನೇಕ ಪದಾಧಿಕಾರಿಗಳೂ ಹರ್ಷ ವ್ಯಕ್ಯಪಡಿಸಿ ನಿರಂತರ ಅವರ ಸಂಪರ್ಕ ಸಾಧಿಸುವ ಕೆಲಸ ಮಾಡಿದರು. ಆದರೆ, ಇದೀಗ ಎಲ್ಲವೂ ಸರಿ ಇಲ್ಲ ಅಂತ ಪದಾಧಿಕಾರಿಗಳೇ ಗೋಳು ಹೇಳಿಕೊಳ್ಳಲು ಪ್ರಾರಂಭಿಸಿದ್ದಾರೆ.
Related Articles
Advertisement
ಅಧ್ಯಕ್ಷರ ಜೊತೆ ಮಾತುಕತೆ: ಶುಕ್ರವಾರ ಆರಂಭಗೊಂಡಿರುವ ರಾಜೀನಾಮೆ ನೀಡುವ ಕಾರ್ಯ ಶನಿವಾರ ಕೂಡ ಮುಂದುವರೆದಿದೆ. ಈಕುರಿತು ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಅವರ ಜೊತೆಗೆ ಚರ್ಚೆ ನಡೆಸಿದ್ದಾರೆ. ಪಕ್ಷಕ್ಕೆಹೊಸದಾಗಿಬಂದವರಿಗೆಪಕ್ಷದ ಸಿದ್ಧಾಂತಗಳು ತಿಳಿಸಿ ಎಂದು ಕೆಲವರು ಹೇಳಿದ್ದರೆ, ಪಕ್ಷದ ಹೆಸರಿಗೆಧಕ್ಕೆ ತರುವವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ. ಈ ಮಧ್ಯೆ ಪದಾಧಿಕಾರಿಗಳ ಮನವೊಲಿಸುವ ಕಾರ್ಯ ಜಿಲ್ಲಾಧ್ಯಕ್ಷರು ನಡೆಸಿದ್ದು, ಮುಂದಿನಕೆಲ ದಿನಗಳಲ್ಲಿ ಎಲ್ಲವೂ ಸರಿ ಮಾಡುವ ಭರವಸೆ ನೀಡಿದ್ದಾರೆ. ಯಾರೂ ಪಕ್ಷದ ಹೆಸರಿಗೆ ಧಕ್ಕೆ ತರುವ ಕಾರ್ಯ ಮಾಡಬೇಡಿ ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಅದ್ಧೂರಿ ಕಾರ್ಯಕ್ರಮ ನೋಡಿ ಸಹಿಸದ ಮುಖಂಡರು ಇಂತಹ ಚಟುವಟಿಕೆಗಳಿಗೆ ಬುನಾದಿ ಹಾಕಿದ್ದಾರೆಂದು ಪಕ್ಷದವರೆ ಮಾತಾಡಿಕೊಳ್ಳುತ್ತಿದ್ದು, ಇದಕ್ಕೆ ಪಕ್ಷದ ವರಿಷ್ಠರೆ ಉತ್ತರ ನೀಡಬೇಕಿದೆ. ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿರುವ ಸದಸ್ಯರ ಜೊತೆಗೆ ಮಾತುಕತೆ ನಡೆಸಿದ್ದು, ಎಲ್ಲವೂ ಬಗೆಹರಿಯುತ್ತದೆ.ಯಾವ ಪದಾಧಿಕಾರಿ ಗಳು ಪಕ್ಷ ತೊರೆಯುತ್ತಿಲ್ಲ. ಎಲ್ಲ ಗೊಂದಲಗಳಿಗೆ ಪರಿಹಾರ ಇದ್ದು, ಪಕ್ಷದ ಆಂತರಿಕ ವಿಷಯಗಳನ್ನು ಬಹಿರಂಗವಾಗಿ ಚರ್ಚೆ ಮಾಡುವುದು ತಪ್ಪಾಗುತ್ತದೆ.
-ಶಿವಾನಂದ ಮಂಠಾಳಕರ್,
ಬಿಜೆಪಿ ಜಿಲ್ಲಾಧ್ಯಕ್ಷರು -ದುರ್ಯೋಧನ ಹೂಗಾರ