Advertisement

ಬಿಜೆಪಿ ಜನರ ನಡುವೆ ಅಂತರ ಹೆಚ್ಚಿಸುವ ಕೆಲಸ ಮಾಡುತ್ತಿದೆ : ಯು. ಟಿ. ಖಾದರ್

05:48 PM Nov 13, 2021 | Team Udayavani |

ಕಾಪು: ಕಾಂಗ್ರೆಸ್ ಪಕ್ಷ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಬಿಜೆಪಿಯು ಅಲ್ಪಸಂಖ್ಯಾತರನ್ನು ಮತ್ತು ಬಹುಸಂಖ್ಯಾತರ ನಡುವೆ ಅಂತರವನ್ನು ಹೆಚ್ಚಿಸುವ ಮೂಲಕ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಬಿಜೆಪಿಯ ಒಡೆದು ಆಳುವ ನೀತಿಗೆ ಆರ್‌ಎಸ್‌ಎಸ್ ಮತ್ತು ಎಸ್‌ಡಿಪಿಐ ಕೂಡಾ ಸಾಥ್ ನೀಡುತ್ತಿದೆ ಎಂದು ಮಾಜಿ ಸಚಿವ / ಮಂಗಳೂರು ದಕ್ಷಿಣ ಶಾಸಕ ಯು. ಟಿ. ಖಾದರ್ ಹೇಳಿದರು.

Advertisement

ಕಾಪುವಿನ ರಾಜೀವ ಭವನದಲ್ಲಿ ಶನಿವಾರ ಜರಗಿದ ಕಾಪು ಬ್ಲಾಕ್ ಅಲ್ಪಸಂಖ್ಯಾತರ ಘಟಕ ಮತ್ತು ಗ್ರಾಮೀಣ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಪಕ್ಷ ಸಂಘಟನೆಯ ವೇಳೆ ಕೆಲವೊಂದು ಮನಸ್ತಾಪಗಳು, ಸಣ್ಣ ಪುಟ್ಟ ಗೊಂದಲಗಳು ಬರುವುದು ಸಹಜ. ಆದರೆ ಅದನ್ನು ದೊಡ್ಡದು ಮಾಡದೆ, ಅದಕ್ಕೆ ತತ್‌ಕ್ಷಣವೇ ಅದಕ್ಕೆ ಪರಿಹಾರ ಕಂಡುಕೊಂಡು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ ಅದನ್ನೇ ಕಾಯುತ್ತಿರುವ ಕಾಂಗ್ರೆಸ್ ವಿರೋಧಗಳು ಕಾರ್ಯಕರ್ತರ ಮಧ್ಯೆ ಅಂತರವನ್ನು ನಿರ್ಮಿಸಿ, ಅದರ ಲಾಭ ಪಡೆದುಕೊಳ್ಳುತ್ತಾರೆ. ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆಯನ್ನು ನಡೆಸುವುದರ ಜೊತೆಗೆ ಮುಂದಿನ ಬಾರಿ ಮತ್ತೆ ಕಾಪುವಿನಲ್ಲಿ ವಿನಯ ಕುಮಾರ್ ಸೊರಕೆ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡುವ ಪ್ರತಿಜ್ಞೆ ಕೈಗೊಳ್ಳುವಂತೆ ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕಾಪುವಿನಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಪಕ್ಷ ಸಂಘಟನೆಯ ಜೊತೆಗೆ ಕಾರ್ಯಕರ್ತರ ಜೋಡಣೆಯೂ ಅಗತ್ಯವಾಗಿದ್ದು, ಅದಕ್ಕಾಗಿ ಕಾಪು ಬ್ಲಾಕ್ ಕಾಂಗ್ರೆಸ್‌ನ ಎಲ್ಲಾ ವಿಭಾಗಗಳನ್ನೂ ಬಲಿಷ್ಟಗೊಳಿಸುವ ಕೆಲಸ ನಡೆಯುತ್ತಿದೆ. ವಿವಿಧ ಉಪ ವಿಭಾಗಗಳನ್ನು ಕಟ್ಟಿಕೊಂಡು, ಯುವಕರನ್ನು ಪಕ್ಷಕ್ಕೆ ಆಕರ್ಷಿಸುತ್ತಾ, ಮುಂದಿನ ಪುರಸಭೆ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳಿಗೆ ಪಕ್ಷವನ್ನು ಮತ್ತಷ್ಟು ಬಲಯುತವಾಗಿಸುವ ಕೆಲಸಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದರು.

Advertisement

ಇದನ್ನೂ ಓದಿ: ಸಾಲಿಗ್ರಾಮ: ಸರಕಾರಿ  ಶಾಲೆ ವಿದ್ಯಾರ್ಥಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಡಿ.ಡಿ.ಪಿ.ಐ

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಪು ಬ್ಲಾಕ್ ಅಲ್ಪಸಂಖ್ಯಾತ ಘಟಕದ ನಿರ್ಗಮನ ಅಧ್ಯಕ್ಷ ಎಚ್. ಅಬ್ದುಲ್ಲಾ ಅವರು ನೂತನ ಅಧ್ಯಕ್ಷ ಶರ್ಫುದ್ದೀನ್ ಶೇಖ್ ಅವರಿಗೆ ಪಕ್ಷದ ಧ್ವಜವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷ ಶರ್ಫುದ್ದೀನ್ ಶೇಖ್ ಬ್ಲಾಕ್ ಮಟ್ಟದ ಪದಾಧಿಕಾರಿಗಳು ಮತ್ತು ಗ್ರಾಮೀಣ ವಿಭಾಗದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಮತ್ತು ಅಧಿಕಾರ ಪತ್ರ ಹಸ್ತಾಂತರಿಸಿದರು.

ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೆಕಳ ಹಾಜಬ್ಬ, ಸಮಾಜ ಸೇವಕರಾದ ಫಾರೂಕ್ ಚಂದ್ರನಗರ, ಅಪದ್ಭಾಂಧವ ಆಸಿಫ್ ಪಡುಬಿದ್ರಿ, ರೋಷನ್ ಡಿ ಸೋಜ ಬೆಳ್ಮಣ್‌ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸ್ಮಾಯಿಲ್ ಆತ್ರಾಡಿ, ಪಕ್ಷದ ಮುಖಂಡರಾದ ಡಾ| ರಾಜಶೇಖರ್ ಕೋಟ್ಯಾನ್, ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಎಂ. ಪಿ. ಮೊಯ್ದಿನಬ್ಬ, ಅಬ್ದುಲ್ ಅಜೀಜ್ ಹೆಜ್ಮಾಡಿ, ಪ್ರಭಾ ಬಿ. ಶೆಟ್ಟಿ, ಐಡಾ ಗಿಬ್ಬಾ ಡಿ ಸೋಜ, ವಿನಯ ಬಲ್ಲಾಳ್, ಮಹಮ್ಮದ್ ಸಾಧಿಕ್, ಸೌರಭ್ ಬಳ್ಳಾಲ್, ಕಾಪು ದಿವಾಕರ ಶೆಟ್ಟಿ, ಯು. ಸಿ. ಶೇಕಬ್ಬ, ಗೋಪಾಲ ಪೂಜಾರಿ, ಸರಸು ಬಂಗೇರ, ಶಿವಾಜಿ ಸುವರ್ಣ, ವಿಲ್ಸನ್ ರೋಡ್ರಿಗಸ್, ಹರೀಶ್ ನಾಯಕ್, ಗೀತಾ ವಾಗ್ಳೆ, ರಮೀಜ್ ಹುಸೈನ್, ಮೆಲ್ವಿನ್ ಡಿ ಸೋಜಾ, ಡೇವಿಡ್ ಡಿ ಸೋಜಾ, ಜೀತೇಂದ್ರ ಪುರ್ಟಾಡೋ ಮೊದಲಾದವರು ಉಪಸ್ತಿತರಿದ್ದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಕ್ ಸ್ವಾಗತಿಸಿದರು. ಅಶ್ವಿನಿ ಬಂಗೇರ ವಂದಿಸಿದರು. ಅಮೀರ್ ಮೊಹಮ್ಮದ್ ಕಾರ್ಯಕ್ರಮ ನಿರೂಪಿಸಿದರು

Advertisement

Udayavani is now on Telegram. Click here to join our channel and stay updated with the latest news.

Next