Advertisement

ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ: ಚವಾಣ್‌

12:18 PM May 29, 2019 | Team Udayavani |

ಮುಂಬಯಿ: ಬಿಜೆಪಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಶಾಸಕರನ್ನು ಆಡಳಿತ ಪಕ್ಷದೊಂದಿಗೆ ಸೇರಿಸಲು ಪ್ರಯತ್ನಿಸುತ್ತಿದೆ. ಆದರೆ ಅದರ ಪ್ರಯತ್ನದಲ್ಲಿ ಅದು ಯಶಸ್ವಿಯಾಗುವುದಿಲ್ಲ ಎಂದು ಮಂಗಳವಾರ ಮಹಾರಾಷ್ಟ್ರ ಕಾಂಗ್ರೆಸ್‌ ಮುಖ್ಯಸ್ಥ ಅಶೋಕ್‌ ಚವಾಣ್‌ ಹೇಳಿದ್ದಾರೆ.

Advertisement

ಪಕ್ಷದ ಹಿರಿಯ ನಾಯಕ ರಾಧಾ ಕೃಷ್ಣ ವಿಖೆ ಪಾಟೀಲ್‌ ಅವರು ಇತರ ಕೆಲವು ಕಾಂಗ್ರೆಸ್‌ ಶಾಸಕರೊಂದಿಗೆ ಬಿಜೆಪಿಗೆ ಸೇರಲು ಸಿದ್ಧರಾಗಿರುವ ಸಂಬಂಧ ವರದಿಗಾರರ ಪ್ರಶ್ನೆಯೊಂ ದಕ್ಕೆ ಪ್ರತಿಕ್ರಿಯೆಯಾಗಿ ಚವಾಣ್‌ ಈ ಹೇಳಿಕೆ ನೀಡಿದ್ದಾರೆ. ರಾಧಾಕೃಷ್ಣ ವಿಖೆ ಪಾಟೀಲ್‌ ಅವರ ಪುತ್ರ ಸುಜಯ್‌ ವಿಖೆ ಪಾಟೀಲ್‌ ಅವರು ಕಳೆದ ಮಾರ್ಚ್‌ನಲ್ಲಿ ಬಿಜೆಪಿಯಲ್ಲಿ ಸೇರಿಕೊಂಡಾಗಿನಿಂದ ಮಾಜಿ ಸಚಿವ ವಿಖೆ ಪಾಟೀಲ್‌ ಕೂಡ ಕೇಸರಿ ಪಡೆಯನ್ನು ಪ್ರವೇಶಿಸಲಿ¨ªಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ.

ತಾಂತ್ರಿಕವಾಗಿ, ಅವರು (ವಿಖೆ ಪಾಟೀಲ…) ಇನ್ನೂ ಕಾಂಗ್ರೆಸ್‌ನ ಸದಸ್ಯರಾಗಿ¨ªಾರೆ. ಅವರು ಆಡಳಿತ ಪಕ್ಷದೊಂದಿಗೆ ಸೇರಿಕೊಳ್ಳುವ ಸಾಧ್ಯತೆಯಿದೆ. ಆದರೆ, ಅವರೊಂದಿಗೆ ನಮ್ಮ ಶಾಸಕರು ಕೂಡ ಬಿಜೆಪಿಗೆ ಸೇರಿಕೊಳ್ಳುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಚವಾಣ್‌ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಿಜೆಪಿ ಕಾಂಗ್ರೆಸ್‌ ಅಥವಾ ಎನ್‌ಸಿಪಿ ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸುತ್ತಿದೆ, ಆದರೆ ಅದು ಸಂಭವಿಸಲಿದೆ ಎಂದು ನಾನು ಭಾವಿಸುವುದಿಲ್ಲ. ನಾವು ಎಚ್ಚರವಾ ಗಿದ್ದೇವೆ ಎಂದವರು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಮಹಾ ಮೈತ್ರಿ ಕೂಟದ ಮೈತ್ರಿ ಘಟಕಗಳ ಸಭೆಯ ಬಳಿಕ ಕಾಂಗ್ರೆಸ್‌ ಮುಖಂಡ ಚವಾಣ್‌ ಈ ಹೇಳಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next