Advertisement

ರಾಜ್ಯದಲ್ಲಿ 22 ಸ್ಥಾನ ಗೆಲ್ಲುವ ಬಗ್ಗೆ ಬಿಜೆಪಿಯಲ್ಲಿ ತಳಮಳ

01:08 AM Apr 26, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ 22 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವುದಾಗಿ ರಾಜ್ಯ ಬಿಜೆಪಿ ಪ್ರಮುಖ ನಾಯಕರು ಹೇಳುತ್ತಿದ್ದರೂ ವಾಸ್ತವ ದಲ್ಲಿ ಅಷ್ಟೂ ಸ್ಥಾನ ಗೆಲ್ಲುವ ಸಾಧ್ಯತೆ ಬಗ್ಗೆ ನಾಯಕರಲ್ಲೇ ವಿಶ್ವಾಸವಿಲ್ಲದಿರುವುದು ಕಮಲ ಪಾಳಯದಲ್ಲಿ ತಳಮಳ ಸೃಷ್ಟಿಗೆ ಕಾರಣವಾಗಿದೆ.

Advertisement

ರಾಜ್ಯದಲ್ಲಿ ಎರಡು ಹಂತದ ಮತದಾನಕ್ಕೂ ಮೊದಲು ಪಕ್ಷದ ಆಂತರಿಕ ಸಮೀಕ್ಷೆ ವರದಿಗೂ ಮತದಾನೋತ್ತರ ಮಾಹಿತಿಯೂ ತಾಳೆಯಾ ದಂತಿದ್ದು, ಈ ಬಗ್ಗೆ ಪಕ್ಷದ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಸ್ಥಾನಗಳ ಸಂಖ್ಯೆ 18, 20, 21, 22 ಎಂದೆಲ್ಲ ಬಿಜೆಪಿ ನಾಯಕರು ಅನೌ ಪಚಾರಿಕವಾಗಿ ಹೇಳಲಾರಂಭಿಸಿದ್ದು, ನಾಯಕರಲ್ಲಿ ವಿಶ್ವಾಸಾರ್ಹತೆ ಇಲ್ಲದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ಹಿನ್ನೆಲೆ ಯಲ್ಲಿ ಗುರುವಾರ ಬಿಜೆಪಿ ಕಚೇರಿಗೆ ಸಾಕಷ್ಟು ಮುಖಂಡರು, ನಾಯಕರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಪಕ್ಷ ಗೆಲ್ಲುವ ಲೋಕಸಭಾ ಸ್ಥಾನಗಳ ಬಗ್ಗೆಯೇ ವ್ಯಾಪಕ ಚರ್ಚೆ ನಡೆದಿತ್ತು. ಈ ವೇಳೆ 22 ಸ್ಥಾನ ಗೆಲ್ಲುವ ಬಗ್ಗೆ ಬಹಳಷ್ಟು ನಾಯಕರಲ್ಲಿ ವಿಶ್ವಾಸವಿದ್ದಂತಿರಲಿಲ್ಲ.

ಮುಂಬೈ ಕರ್ನಾಟಕ ಭಾಗದ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಆದರೆ ಉಳಿದ ಭಾಗಗಳಲ್ಲಿ ನಿರೀಕ್ಷಿತ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವಲ್ಲಿ ತುಸು ಹಿನ್ನಡೆಯಾಗ ಬಹುದು. ದೇಶದಲ್ಲಿ ಉತ್ತರ ಪ್ರದೇಶ, ಬಿಹಾರ ಹೊರತುಪಡಿಸಿದರೆ ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅಲೆ ದೊಡ್ಡ ಮಟ್ಟದಲ್ಲಿದೆ. ಹಾಗಾಗಿ ಮೋದಿ ಅಲೆಯಿಂದ ಮತದಾರರು ಕೈಹಿಡಿದರೆ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆಯಲಿದೆ. ಒಟ್ಟು 22 ಸ್ಥಾನ ಗೆಲ್ಲುವ ಗುರಿಯಿದ್ದರೂ ಮೋದಿ ಅಲೆಯಿಂದಾಗಿ 20 ಸ್ಥಾನ ತಲುಪುವ ವಿಶ್ವಾಸ ವಂತೂ ಇದೆ ಎಂದು ಬಿಜೆಪಿ ಕೋರ್‌ ಕಮಿಟಿ ಪ್ರಮುಖ ನಾಯಕರೊಬ್ಬರು ತಿಳಿಸಿದರು.

ಬೆಂಗಳೂರು ಸೇರಿ ಹಳೇ ಮೈಸೂರು ಭಾಗದಲ್ಲಿ ಈ ಬಾರಿ ನಿರೀಕ್ಷಿತ ಸ್ಥಾನ ಗೆಲ್ಲುವ ಬಗ್ಗೆ ತುಸು ಗೊಂದಲವಿದೆ. ಕೆಲವೆಡೆ ಅನಿರೀಕ್ಷಿತ ಫ‌ಲಿತಾಂಶದ ಮಾತುಗಳು ಇವೆ. ಇಷ್ಟಾದರೂ ಕಳೆದ ಲೋಕಸಭಾ ಚುನಾವಣೆಗಿಂತಲೂ ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಮತ ಗಳಿಕೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ವಿಶ್ವಾಸ ಖಂಡಿತ ಇದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

Advertisement

ತೀವ್ರ ಸ್ಪರ್ಧೆಯಿರುವ ಕ್ಷೇತ್ರಗಳೂ ಇವೆ: 22 ಲೋಕಸಭಾ ಸ್ಥಾನ ಗೆಲ್ಲುವ ಗುರಿ ಇದೆ. ಹಾಗೆಂದು ಎಲ್ಲವೂ ಗೆಲ್ಲುವ ಕ್ಷೇತ್ರಗಳೇ ಎಂದ ರ್ಥವಲ್ಲ. ತೀವ್ರ ಸ್ಪರ್ಧೆ ನಡೆದಿರುವ ಕ್ಷೇತ್ರಗಳು, ಬಿಜೆಪಿ ಅಭ್ಯರ್ಥಿ ಗೆಲ್ಲುವ ಸೋಲುವ ಸಾಧ್ಯತೆ ಶೇ.50ರಷ್ಟಿರುವ ಕ್ಷೇತ್ರಗಳು, ಸದ್ಯ ಬಿಜೆಪಿ ಸಂಸದರಿರುವ ಕ್ಷೇತ್ರಗಳು, ಪ್ರಧಾನಿ ಮೋದಿ ಪ್ರಚಾರ ಸಭೆ ನಡೆಸಿರುವ ಕ್ಷೇತ್ರಗಳೂ ಇವೆ. ಹಾಗಾಗಿ ಹೆಚ್ಚು ಸ್ಥಾನ ಪಕ್ಷ ಗೆಲ್ಲಲಿದೆ. ಆದರೆ ಇಷ್ಟೇ ಸಂಖ್ಯೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ನಾಯಕರೊಬ್ಬರು ತಿಳಿಸಿದರು.

20- 21 ಸ್ಥಾನ ಗೆಲ್ಲುವ ವಿಶ್ವಾಸ: ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲೂ ಬಿಜೆಪಿ ಪಡೆಯುವ ಸ್ಥಾನಗಳ ಬಗ್ಗೆ ಚರ್ಚೆಯಾಯಿತು. ಮತದಾನೋತ್ತರ ಲೆಕ್ಕಾಚಾರ, ಮತದಾನ ಪ್ರಮಾಣ, ಕೊನೆಯ ಕ್ಷಣದ ಬೆಳವಣಿಗೆಗಳು ಇತರೆ ಅಂಶಗಳನ್ನು ಆಧರಿಸಿ 20ರಿಂದ 21 ಸ್ಥಾನ ಗೆಲ್ಲುವ ಸಾಧ್ಯತೆ ಹೆಚ್ಚು ಎಂಬ ಬಗ್ಗೆ ಮಾತುಕತೆ ನಡೆಯಿತು. ಪ್ರತಿ ಚುನಾವಣೆಯಲ್ಲಿ ಗುರಿ ಇಟ್ಟುಕೊಳ್ಳುವುದು ಸಹಜ. ಅದನ್ನು ತಲುಪಲು ಪ್ರಾಮಾಣಿಕ ಪ್ರಯತ್ನವನ್ನೂ ನಡೆಸುವುದು ಕರ್ತವ್ಯ. ಅದರಂತೆ ಕಾರ್ಯ ನಿರ್ವಹಿಸಿದ್ದೇವೆ. ಎಷ್ಟೇ ಸ್ಥಾನ ಗೆದ್ದರೂ ಜನಾದೇಶವನ್ನು ಒಪ್ಪಲೇಬೇಕು. ಹಾಗಾಗಿ ಒಂದೆರಡು ಸ್ಥಾನ ಹೆಚ್ಚು ಕಡಿಮೆಯಾಗುವುದು ಸಹಜ ಎಂದು ರಾಜ್ಯ ಬಿಜೆಪಿ ಪದಾಧಿಕಾರಿಯೊಬ್ಬರು ಹೇಳಿದರು.

17- 18 ಸ್ಥಾನ ಖಚಿತ: ಸದ್ಯ ಬಿಜೆಪಿಯ 15 ಸಂಸದರಿದ್ದು, ಎಲ್ಲರೂ ಸ್ಪರ್ಧಿಸಿದ್ದಾರೆ. ಇಷ್ಟೂ ಸ್ಥಾನಗಳನ್ನು ಉಳಿಸಿಕೊಳ್ಳುವ ಜತೆಗೆ ಹೆಚ್ಚುವರಿಯಾಗಿ ಮೂರ್‍ನಾಲ್ಕು ಸ್ಥಾನ ಗೆಲ್ಲುವ ಖಚಿತ ವಿಶ್ವಾಸವಿದೆ. ಹಾಗೆಂದು ಈ ನಿರೀಕ್ಷೆಯೇ ಅಂತಿಮವಲ್ಲ. ಮೋದಿ ಅಲೆ ಜೋರಾಗಿರುವುದರಿಂದ ಹಲವು ಕ್ಷೇತ್ರಗಳಲ್ಲಿ ಮತದಾನ ಪ್ರಮಾಣವೂ ಏರಿಕೆಯಾಗಿದ್ದು, ಅದು ಬಿಜೆಪಿಗೆ ವರದಾನವಾಗುವ ನಂಬಿಕೆ ಇದೆ ಎಂದು ನಾಯಕರೊಬ್ಬರು ವಿವರ ನೀಡಿದರು.

ಆಂತರಿಕ ಸಮೀಕ್ಷೆಯಲ್ಲೇ ಸುಳಿವು

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಪೂರ್ವದಲ್ಲಿ ನಡೆದ ಪಕ್ಷದ ಆಂತರಿಕ ಸಮೀಕ್ಷಾ ವರದಿಯಲ್ಲೂ ನಿರೀಕ್ಷಿತ ಗುರಿ ತಲುಪುವುದು ಕಷ್ಟ ಸಾಧ್ಯ ಎಂಬ ಬಗ್ಗೆ ಸುಳಿವು ಸಿಕ್ಕಿತ್ತು. ಬಿಜೆಪಿ ಸಂಸದರು ಇರುವ ಹಾಲಿ 15 ಕ್ಷೇತ್ರಗಳ ಪೈಕಿ ಮೂರ್‍ನಾಲ್ಕು ಕ್ಷೇತ್ರಗಳಲ್ಲಿ ಸಂಸದರ ಪುನರಾಯ್ಕೆ ಕಷ್ಟವಾದರೂ, ಹೊಸದಾಗಿ ಮೂರ್‍ನಾಲ್ಕು ಕ್ಷೇತ್ರಗಳು ಕೈಹಿಡುವ ಸಾಧ್ಯತೆಯಿದೆ ಎಂದು ಸಮೀಕ್ಷೆ ವರದಿಯಲ್ಲಿತ್ತು. ಹಾಗಾಗಿ ಏಳೆಂಟು ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲ್ಲುವ ಅವಕಾಶವಿದ್ದು ಅಷ್ಟೂ ಕ್ಷೇತ್ರಗಳಲ್ಲಿ ಗೆದ್ದರೆ ಮಾತ್ರ 22ರ ಗುರಿ ತಲುಪಬಹುದು ಎಂದು ನಾಯಕರು ಲೆಕ್ಕಾಚಾರ ನಡೆಸಿದ್ದರು. ಆದರೆ, ಮತದಾನದ ನಂತರದ ಮಾಹಿತಿಗಳು ನಿರೀಕ್ಷೆಯಷ್ಟು ಸ್ಥಾನ ಪಡೆಯಲು ಸಾಧ್ಯವಾ ಎಂಬ ಅನುಮಾನ ಹುಟ್ಟುಹಾಕಿದೆ ಎಂದು ಹೇಳಲಾಗಿದೆ.
-ಎಂ. ಕೀರ್ತಿಪ್ರಸಾದ್‌
Advertisement

Udayavani is now on Telegram. Click here to join our channel and stay updated with the latest news.

Next