Advertisement

ಬಿಜೆಪಿಯವರು ಅಹಂಕಾರದಲ್ಲಿ ಸರ್ಕಾರ ನಡೆಸುತ್ತಿದ್ದಾರೆ: ದಿನೇಶ್ ಗುಂಡೂರಾವ್

10:00 AM Oct 12, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯವರು ಅಹಂಕಾರದಲ್ಲಿ ಸರ್ಕಾರ ನಡೆಸುತ್ತಿದ್ದಾರೆ. ವಿಪಕ್ಷಗಳ ಅಧಿಕಾರ ಮೊಟಕು ಮಾಡುವುದು, ನಾವು ಹೇಳಿದ್ದೇ ಆಗಬೇಕು ಎಂಬ ದಾಷ್ಟ್ಯ ಅವರದ್ದು. ಕೇಂದ್ರದಲ್ಲೂ ಹಾಗೇ ಇದೆ, ರಾಜ್ಯದಲ್ಲೂ ಹಾಗೇ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಧಿವೇಶನ ಮೂರು ದಿನ ಯಾಕೆ ಕರೆದಿದ್ದಾರೆ. ರಾಜ್ಯದ ಪ್ರವಾಹ, ಬರದ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕು. ನೂರೆಂಟು ಸಮಸ್ಯೆ ಬಗ್ಗೆ ಚರ್ಚೆಯಾಗಬೇಕು. ಆದರೆ ಸರ್ಕಾರದ ನಡೆ ಬೇಸರತರಿಸುತ್ತಿದೆ. ಜನತಂತ್ರ ವ್ಯವಸ್ಥೆಯೇ ಕುಸಿಯುತ್ತಿದೆ ಎಂದು ಟೀಕಿಸಿದರು.

ಮಾಜಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಮೇಲೆ ಐಟಿ ದಾಳಿ ವಿಚಾರದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಸರ್ಕಾರ ಏಜೆನ್ಸಿಯನ್ನ ಬಳಸಿಕೊಂಡು ದಾಳಿ ಮಾಡಿಸಿದೆ. ಪ್ರತಿಪಕ್ಷಗಳನ್ನು ಮುಗಿಸುವ ಕೆಲಸ ನಡೆಯುತ್ತಿದೆ. ಜನ ಇದನ್ನ ಯಾವತ್ತೂ ಒಪ್ಪುವುದಿಲ್ಲ ಎಂದರು.  ಬಿಜೆಪಿಯಲ್ಲಿ ಎಷ್ಟು ಭ್ರಷ್ಟರಿದ್ದಾರೆ. ಅವರ ಮಂತ್ರಿಗಳ ಮೇಲೆ ಸಾಕಷ್ಟು ಆರೋಪಗಳಿವೆ. ರಿವೇಂಜ್ ಪಾಲಿಟಿಕ್ಸ್ ಶುರು ಮಾಡಿದ್ದಾರೆ ಎಂದು ಟೀಕೆ ಮಾಡಿದರು.

ದೇಶದ ಅರ್ಥ ವ್ಯವಸ್ಥೆ ಕುಸಿದಿದೆ. 5.8 ಪರ್ಸೆಂಟ್ ಜಿಡಿಪಿ ದರ ಇಳಿದಿದೆ. ಸುಳ್ಳು ವದಂತಿ ಹಬ್ಬಿಸಿ ಸರ್ಕಾರ ನಡೆಸುತ್ತಿದ್ದಾರೆ. ಪ್ರತಿಪಕ್ಷ ನಾಯಕರನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next