Advertisement
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆ ಸ್ವಯಂಕೃತ ಅಪರಾಧದ ಫಲ. ವಿಭಿನ್ನ ಸಿದ್ಧಾಂತ, ವೈರುದ್ಯ ಮನಸ್ಥಿತಿಯ ಶಿವಸೇನೆ ಕಾಂಗ್ರೆಸ್, ಎನ್ ಸಿಪಿ ಜೊತೆ ಸೇರಿ ಸರ್ಕಾರ ಮಾಡಿದಾಗಲೇ ಇದು ಕೋಮಾದಲ್ಲಿರುವ ಸರ್ಕಾರ ಬಹಳ ದಿನ ನಡೆಯುವುದಿಲ್ಲ ಎಂಬುದು ಎಲ್ಲರೂ ತಿಳಿದಿತ್ತು. ಒಬ್ಬರ ಬಳಿ ಸ್ಟೇರಿಂಗ್, ಒಬ್ಬರ ಬಳಿ ಬ್ರೇಕ್, ಒಬ್ಬರ ಬಳಿ ಎಕ್ಸಲೇಟರ್ ಎಂಬಂತಾಗಿದ್ದ ಈ ಸರ್ಕಾರ ಈ ವರೆಗೆ ನಡೆದದ್ದೇ ದೊಡ್ಡದು ಎಂದರು.
Related Articles
Advertisement
ಬಿಜೆಪಿ ಪಕ್ಷ ಪ್ರತಿ ಶಾಸಕರಿಗೆ 50 ಕೋಟಿ ರೂ. ನೀಡಿದೆ ಎಂದು ಆರೋಪಿಸುವ ವಿಪಕ್ಷಗಳ ವರ್ತನೆ ಸರಿಯಲ್ಲ. ಅವರಾಗಿಯೇ ಹೊರಬಂದಿದ್ದಾರೆ. ಭವಿಷ್ಯದಲ್ಲಿ ಶಿವಸೇನೆ ಶಾಸಕರು ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸಿದರೆ ಮುಂದೇನು ಮಾಡಬೇಕು ಎಂಬ ತೀರ್ಮಾನಿಸುತ್ತಾರೆ. ಎರಡು ದಿನ ಕಾದು ನೋಡಿ, ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ಮಾಡಲ್ಲ ಎಂದರು.
ಮುಂದಿನ ಸಿಎಂ ನಾನೇ ಎಂದು ಹೆಚ್.ಡಿ.ಕುಮಾರಸ್ವಾಮಿ ಕನಸು ಕಾಣುವುದರಲ್ಲಿ ತಪ್ಪೇನಿಲ್ಲ. ರಾಜಕಾರಣ ಮಾಡುವವರು ಕನಸು ಕಾಣಲಿ, ದೇವರು ಅವರಿಗೆ ಒಳ್ಳೇದು ಮಾಡಲಿ ಎಂದು ಆಶಿಸಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆ ಕುರಿತು ಹಿರಿಯ ಸಚಿವ ಉಮೇಶ ಕತ್ತಿ ಹೇಳಿಕೆ ವಯಕ್ತಿಕ. 9 ಬಾರಿ ಚುನಾಯಿತರಾಗಿದ್ದಾರೆ. ಅವರಿಗೆ ಅವರದೇಯಾದ ಅನುಭವವಿದೆ. ಹೀಗಾಗಿ ಅವರ ವೈಯಕ್ತಿಕ ವಿಚಾರ ಪಕ್ಷ ಅಥವಾ ಸರ್ಕಾರದ್ದಲ್ಲ ನಿಲುವಲ್ಲ ಎಂದರು.