Advertisement

ಬಿಜೆಪಿ ಮುಸ್ಲಿಂ ವಿರೋಧಿಯಲ್ಲ: ವಿಜಯಶಂಕರ್‌ ಅಭಿಮತ

12:14 PM Sep 07, 2017 | Team Udayavani |

ಪಿರಿಯಾಪಟ್ಟಣ: ಬಿಜೆಪಿ ಮುಸ್ಲಿಂ ವಿರೋಧಿಯಲ್ಲ, ಭಯೋತ್ಪಾದಕ, ರಾಷ್ಟ್ರದ್ರೋಹಿ ಮುಸ್ಲಿಂ ಸಂಘಟನೆಗಳ ವಿರೋಧಿ ಎಂದು ಮಾಜಿ ಸಚಿವ ರಾಜ್ಯ ಮೋರ್ಚಾ ಅಧ್ಯಕ್ಷರಾದ ಸಿ.ಎಚ್‌.ವಿಜಯಶಂಕರ್‌ ತಿಳಿಸಿದರು.

Advertisement

ಪಟ್ಟಣದಲ್ಲಿ ಬಿಜೆಪಿ ಯುವಮೋರ್ಚಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್‌ ರ್ಯಾಲಿ ಉದ್ದೇಶಿಸಿ ಮಾತನಾಡಿದರು. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಹಿಂದೂ ಬಾಂಧವರ ಹತ್ಯೆಯಲ್ಲಿ ಮುಸ್ಲಿಂ ಭಯೋತ್ಪಾದಕ ಸಂಘಟನೆಗಳ ಪಾತ್ರವಿರುವುದು ಖಚಿತಗೊಂಡಿದ್ದರೂ  ಅವುಗಳನ್ನು ನಿಷೇಧಿಸುವಲ್ಲಿ ರಾಜ್ಯ ಸರ್ಕಾರ ವಿಫ‌ಲವಾಗಿದೆ ಎಂದು ದೂರಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇದಕ್ಕೆಲ್ಲಾ ಸರಿಯಾದ ಪ್ರತ್ಯುತ್ತರವನ್ನು ರಾಜ್ಯದ ಜನತೆ ನೀಡಲಿದ್ದು ಕಾಂಗ್ರೆಸ್‌ ಸರ್ಕಾರವನ್ನು ತಿರಸ್ಕರಿಸುತ್ತಾರೆ. ಬೈಕ್‌ ರ್ಯಾಲಿಗೆ ಅವಕಾಶ ನೀಡದೆ ರಾಜ್ಯದಲ್ಲಿ ಕೋಮು ಸೌಹಾರ್ದತೆ ಕದಕುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಕಾರ್ಯಕರ್ತರನ್ನು ಬಂಧಿಸುತ್ತಿರುವುದು ವಿಷಾದಕರ ಎಂದು ದೂರಿದರು. 

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪಿ.ಟಿ.ಲಕ್ಷಿನಾರಾಯಣ್‌, ಮಂಗಳೂರು ಚಲೋ ಬೈಕ್‌ ರ್ಯಾಲಿಗೆ ಪಟ್ಟಣದಿಂದ 150 ಬೈಕ್‌ ನಲ್ಲಿ ರ್ಯಾಲಿ ಹೊರಡಲು ತೀರ್ಮಾನಿಸಲಾಗಿತ್ತು. ಆದರೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಹೇರಿ ಇದನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿರುವುದು ಹೇಯಕರ ಎಂದು ತಿಳಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಜೆ.ರವಿ, ರಾಜಾದ್ಯಂತ ನಡೆದಿರುವ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ತಾಲೂಕಿನ ಬಿಜೆಪಿ ನಿಷ್ಠಾವಂತ ಮಾಗಳಿ ರವಿ ಯವರೂ ಹತ್ಯೆಯಾಗಿದ್ದು ಇದುವರೆಗೂ ಯಾವುದೇ ಮಾಹಿತಿ ಬಹಿರಂಗಪಡಿಸದೆ ಅವರ ಕುಟುಂಬಕ್ಕೆ ಅನ್ಯಾಯ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಹೋರಾಟ ಮಾಡುವ ಬಗ್ಗೆ ಎಚ್ಚರಿಕೆ ನೀಡಿದರು.

Advertisement

ಮಾಜಿ ಸಚಿವ ಮತ್ತು ಕಾರ್ಯಕರ್ತರ ಬಂಧನ: ಪಟ್ಟಣದ ಪಕ್ಷದ ಕಚೇರಿಯಿಂದ ಮಂಗಳೂರು ಚಲೋ ಬೈಕ್‌ ರ್ಯಾಲಿಗೆ ಚಾಲನೆ ನೀಡಲು ಆಗಮಿಸಿದ್ದ ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ರನ್ನು ಆರಕ್ಷಕ ವೃತ್ತ ನಿರೀಕ್ಷಕ ಸಿದ್ದಯ್ಯ ಮತ್ತು ತಂಡ ತಡೆದು ಬಂಧಿಸಿದರು.

ಈ ವೇಳೆ ತಾಲೂಕು ಅಧ್ಯಕ್ಷ ಪಿ.ಜೆ.ರವಿ, ಪ್ರಧಾನ ಕಾರ್ಯದರ್ಶಿ ಕಿರಣ್‌ಜೈರಾಮೇಗೌಡ, ಮಲ್ಲೇಶ್‌ ಬೆಟ್ಟದಪುರ, ತಾಲೂಕು ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ವಿಕ್ರಂರಾಜ್‌, ಕೃಷ್ಣಪ್ರಸಾದ್‌, ಬೆಮ್ಮತ್ತಿ ಚಂದ್ರು, ಆಶಾ ಬಾಳೆಕಟ್ಟೆ, ನಿಜಾಮುದ್ದೀನ್‌ ಸೇರಿದಂತೆ  ಸುಮಾರು 40ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. 

Advertisement

Udayavani is now on Telegram. Click here to join our channel and stay updated with the latest news.

Next