ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಬಹುಮತ ಕೊಟ್ಟು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಸರಕಾರ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಅಧಿಕಾರ ಕಳೆದುಕೊಂಡ ಮೇಲೆ ಬಿಜೆಪಿಯವರು ನೀರಿನಿಂದ ಹೊರಬಂದ ಮೀನಿನಂತಾಗಿದ್ದಾರೆ. ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡ್ತಿದ್ದಾರೆ. ಕಾಂಗ್ರೆಸ್ ಶಾಸಕರ ಮನೆಮನೆಗೆ ಹೋಗಿ ಆಮಿಷ ತೋರಿಸುತ್ತಿದ್ದಾರೆ ಮಾಜಿ ಸಚಿವರೊಬ್ಬರು, ಯಡಿಯೂರಪ್ಪ ಅವರ ಕುಟುಂಬದವರೊಬ್ಬರು ತಲಾ 50 ಕೋಟಿ ಕೊಡುವ ಆಮಿಷವೊಡ್ಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಅವರು ಸಹ ಸರಕಾರ ಬೀಳಿಸುತ್ತೇವೆ, ಬೀಳಿಸಿದರೆ ತಪ್ಪೇನು ಅಂದಿದ್ದಾರೆ. ಈಶ್ವರಪ್ಪ ಅವರಿಗೆ ಪ್ರಜಾಪ್ರಭುತ್ವ ಗೊತ್ತಿಲ್ಲ. ಅವರು ಸಂವಿಧಾನ ಓದಿಲ್ಲ. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾಗ ಯಡಿಯೂರಪ್ಪ ವಿರುದ್ದ ರಾಜ್ಯಪಾಲರಿಗೆ ದೂರು ಕೊಟ್ಟಿದ್ದರು. ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಈಶ್ವರಪ್ಪ ಕೊಡುಗೆಯೇನು? ಈಶ್ವರಪ್ಪ ಅವರನ್ನು ನಂಬಿ ಒಬ್ಬನಾದರೂ ಶಾಸಕ ಬಿಜೆಪಿಗೆ ಬಂದಿದ್ದಾನಾ? ಈಶ್ವರಪ್ಪ ಅವರಿಗೆ ಅಂತಹ ಶಕ್ತಿ, ಸಾಮರ್ಥ್ಯ ಇಲ್ಲ. ಅಪ್ರಬುದ್ದ ರಾಜಕಾರಣಿಗಳಲ್ಲಿ ಈಶ್ವರಪ್ಪ ಒಬ್ಬರು. ಬೇಜವಾಬ್ದಾರಿ ಮಾತನಾಡುವ ಈಶ್ವರಪ್ಪ ಅವರಿಂದ ಪಕ್ಷಕ್ಕೆ ನಷ್ಟ. ಹೀಗಾಗಿಯೇ ಈಶ್ವರಪ್ಪ ಅವರನ್ನು ಪಕ್ಷ ಎಲ್ಲಾ ಹುದ್ದೆಯಿಂದ ದೂರ ಇಟ್ಟಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಈಶ್ವರಪ್ಪ ಅವರಿಗಿಲ್ಲ ಎಂದರು.
ಇದನ್ನೂ ಓದಿ:Bollywood: ಭೈರಪ್ಪ ಅವರ ʼಪರ್ವʼ ಕಾದಂಬರಿ ಕಥೆಗೆ ವಿವೇಕ್ ಅಗ್ನಿಹೋತ್ರಿ ಆ್ಯಕ್ಷನ್ ಕಟ್
ನೀರಾವರಿ ಸಚಿವರಾಗಿದ್ದರು ಒಂದೇ ಒಂದು ದಿನ ಕಾವೇರಿ ಸಮಸ್ಯೆ ಬಗ್ಗೆ ಮಾತನಾಡುವ ಪ್ರೌಢಿಮೆ ಇಲ್ಲ. ಬಾಯಿಗೆ ಬಂದಹಾಗೆ ಮಾತನಾಡುವುದೆ ಅವರ ಪ್ರತಿಭೆ. ಎಲ್ಲರನ್ನು ಏಕವಚನದಲ್ಲಿ ಮಾತನಾಡುವುದು, ಬಹುವಚನ ಎನ್ನುವುದು ಗೊತ್ತೆ ಇಲ್ಲ. ಈಶ್ವರಪ್ಪ ಅವರ ಮಾತಿಗೆ ಅಷ್ಟು ಮನ್ನಣೆ ಇಲ್ಲ. ಅವರದ್ದು ಹರುಕುಬಾಯಿ ಎಂಬುದು ಜಗಜ್ಜಾಹೀರು. ಎಲ್ಲಾ ಇಲಾಖೆಗಳಲ್ಲು ಗುಡಿಸಿ ಗುಂಡಾಂತರ ಮಾಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಟೀಕಿಸಿದರು.
ಯಡಿಯೂರಪ್ಪ ಅವರು ಜೈಲಿಗೆ ಹೋದಾಗ ನನ್ನಂತವನು ಆಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ ಅಂದಿದ್ದರು. ಶಿವಮೊಗ್ಗದ ಅಭಿವೃದ್ಧಿ ಮಾಡಿದ್ದ ಯಡಿಯೂರಪ್ಪ ಅವರು ಶಿವಮೊಗ್ಗದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಶೂನ್ಯ. ಕೇವಲ ಹಣ ಸಂಪಾದನೆ ಮಾಡಿದ್ದೀರಿ ಅಷ್ಟೇ. ಈಶ್ವರಪ್ಪ ಒಬ್ಬ ಮೂರ್ಖಾ ರಾಜಕಾರಣಿ. ಅವರ ಆಸ್ಪತ್ರೆಯಲ್ಲೆ ತಲೆಗೆ, ಬಾಯಿಗೆ ಟ್ರೀಂಟ್ ಮೆಂಟ್ ಪಡೆಯಲಿ. ಯಡಿಯೂರಪ್ಪ ನವರ ವಿರುದ್ಧ ಸಂಚು ಮಾಡಿದ ರಾಜಕಾರಣಿ ಈಶ್ವರಪ್ಪ ಎಂದರು.
ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತಾಡುವಾಗ ತಮ್ಮ ಭ್ರಷ್ಟಾಚಾರವನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಸ್ಮಾರ್ಟ್ ಸಿಟಿ ಶಿವಮೊಗ್ಗಕ್ಕೆ ತಂದಿದ್ದು ಯಡಿಯೂರಪ್ಪ, ಈಶ್ವರಪ್ಪ ಅಲ್ಲ. ಸ್ಮಾರ್ಟ್ ಸಿಟಿಗೆ ಈಶ್ವರಪ್ಪನವರ ಕೊಡುಗೆ ಸೊನ್ನೆ. ಈಶ್ವರಪ್ಪ ನವರ ಮಾತಿಗೆ ತೂಕ ಇಲ್ಲ ಎಂದು ಆಯನೂರು ಮಂಜುನಾಥ್ ಹೇಳಿದರು.