Advertisement

ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ… ನಾವು ಆ ರೀತಿ ರಾಜಕಾರಣ ಮಾಡಲ್ಲ: ಜಿ. ಪರಮೇಶ್ವರ್

08:53 AM Oct 05, 2024 | Team Udayavani |

ಹುಬ್ಬಳ್ಳಿ: ಮುಡಾ ವಿಚಾರದಲ್ಲಿ ಬಿಜೆಪಿ ಅನವಶ್ಯಕವಾಗಿ ರಾಜಕೀಯ ಮಾಡುತ್ತಿದೆ. ಪ್ರಧಾನಿ ಅಂಥವರು ವಿವಿಧ ರಾಜ್ಯಗಳ ಚುನಾವಣಾ ರ್‍ಯಾಲಿಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ನಮಗೂ ಸಹ ಇವರ ರೀತಿ ರಾಜಕಾರಣ ಮಾಡಲು ಬರುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹರಿಹಾಯ್ದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ತನಿಖೆ ನಡೆಯುತ್ತಿದೆ. ಇದನ್ನು ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಪ್ರಧಾನಿಯವರು ಈ ವಿಷಯವನ್ನು ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪಿಸುತ್ತಾರೆ. ಇದು ರಾಜಕಾರಣ ಅಲ್ಲದೇ ಮತ್ತಿನ್ನೇನು. ನಮಗೂ ರಾಜಕಾರಣ ಮಾಡಲು ಬರುತ್ತದೆ. ನಮ್ಮ ಕಾಂಗ್ರೆಸ್ ಸರ್ಕಾರ ಅದಕ್ಕೆ ಸಮರ್ಥ ಉತ್ತರ ಕೊಡುತ್ತದೆ ಎಂದು ಕುಟುಕಿದರು.

ನಾವು ಯಾರ ಮೇಲೂ ಸೇಡಿನ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿಯವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಮುಡಾ ವಿಚಾರವಾಗಿ ಈಗಾಗಲೇ ತನಿಖೆ ನಡೆದಿದೆ. ಪ್ರತಿ ಪಕ್ಷದವರು ಸರ್ಕಾರಕ್ಕೆ ಸಲಹೆ, ಸೂಚನೆ ಕೊಡಬೇಕು. ಅದನ್ನು ಮೀರಿ ಅವರು ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಸೈಟ್ ವಾಪಸ್ ವಿಚಾರವಾಗಿ ವಿಪಕ್ಷ ನಾಯಕ ಆರ್. ಅಶೋಕ ಮೊದಲು ರಾಜೀನಾಮೆ ಕೊಡಲಿ. ಆ ನಂತರ ಉಳಿದವರ ರಾಜೀನಾಮೆ ಪ್ರಶ್ನೆ ಬರುತ್ತದೆ ಎಂದರು.

ಬೆಂಗಳೂರಿನಲ್ಲಿ ಪಾಕಿಸ್ತಾನದವರು ಅಕ್ರಮವಾಗಿ ನೆಲೆಸಿದ್ದನ್ನು ಪತ್ತೆ ಹಚ್ಚಿ ಬಂಧಿಸಿರುವುದು ಕರ್ನಾಟಕದ ಪೋಲಿಸರು. ಆದರೆ, ಕೇಂದ್ರದ ಸಿಬಿಐ ಸೇರಿದಂತೆ ಎಲ್ಲಾ ಎಜೆನ್ಸಿಗಳು ದೇಶದಲ್ಲಿ ಪಾಕಿಸ್ತಾನದವರ ಇರುವಿಕೆ ಪತ್ತೆ ಹಚ್ಚುವಲ್ಲಿ ವಿಫಲವಾಗಿವೆ ಎಂದರು.

Advertisement

ಜಾತಿ ಗಣತಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ. ನಂತರ ತೀರ್ಮಾನ ಮಾಡಲಾಗುವುದು. ಪಿಎಸ್‌ಐ ಅಭ್ಯರ್ಥಿಗಳ ವಿವಾದ ನ್ಯಾಯಾಲಯದಲ್ಲಿದೆ. ಹೀಗಾಗಿ ಕಗ್ಗಂಟಾಗಿದೆ. ಶೀಘ್ರವೇ ಇದು ಪರಿಹಾರವಾಗಲಿದೆ. ಹುಬ್ಬಳ್ಳಿಯ ಮೇಲ್ಸೇತುವೆ ಅವಘಡದಲ್ಲಿ ಎಎಸ್‌ಐ ಅಧಿಕಾರಿ ಸಾವಿನ ಬಗ್ಗೆ ಮಾಹಿತಿ ಇಲ್ಲ. ತಿಳಿದುಕೊಳ್ಳುವೆ ಎಂದರು.

ಇದನ್ನೂ ಓದಿ: Revange: ತಂದೆ ಹಂತಕನನ್ನು 22 ವರ್ಷ ಕಾದು ಕೊಂದು ಸೇಡು ತೀರಿಸಿಕೊಂಡ!

Advertisement

Udayavani is now on Telegram. Click here to join our channel and stay updated with the latest news.

Next