Advertisement

ಬಿಜೆಪಿ ನಾಲ್ಕು ಆಂತರಿಕ ಸಮೀಕ್ಷೆ; 12 ಕ್ಷೇತ್ರಗಳಲ್ಲಿ ಗೆಲುವು, ಆ ಕ್ಷೇತ್ರಗಳು ಯಾವುದು?

09:42 AM Dec 04, 2019 | Nagendra Trasi |

ಬೆಂಗಳೂರು: ಡಿಸೆಂಬರ್ 5ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಲ್ಕು ಆಂತರಿಕ ಸಮೀಕ್ಷೆಗಳನ್ನು ನಡೆಸಿದ್ದು,  ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂಬುದು ಬಹಿರಂಗವಾಗಿದೆ.

Advertisement

ಭಾರತೀಯ ಜನತಾ ಪಕ್ಷ ನಡೆಸಿದ ಮೊದಲ ಸಮೀಕ್ಷೆಯಲ್ಲಿ 9 ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ. 2ನೇ ಸಮೀಕ್ಷೆಯಲ್ಲಿ 13 ಕ್ಷೇತ್ರಗಳಲ್ಲಿ ಗೆಲುವು, 3ನೇ ಸಮೀಕ್ಷೆಯಲ್ಲಿ 11 ಕ್ಷೇತ್ರಗಳಲ್ಲಿ, 4ನೇ ಸಮೀಕ್ಷೆಯಲ್ಲಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ.

ಬಿಜೆಪಿ ನಡೆಸಿರುವ ನಾಲ್ಕು ಆಂತರಿಕ ಸಮೀಕ್ಷೆಯಲ್ಲಿ ವಿಜಯನಗರ, ಗೋಕಾಕ್, ಹೊಸಪೇಟೆ, ಕಾಗವಾಡ, ಯಲ್ಲಾಪುರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದೆ. ಆದರೆ ಕೆಆರ್ ಪೇಟೆಯಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆ ಶೇ.50:50 ಎಂದು ಸಮೀಕ್ಷೆ ತಿಳಿಸಿದೆ.

ಮಹಾಲಕ್ಷ್ಮೀ ಲೇಔಟ್ ನಲ್ಲಿಯೂ ಬಿಜೆಪಿ ಗೆಲುವಿನ ನಿರೀಕ್ಷೆಯಲ್ಲಿದೆ. ಕೆಆರ್ ಪೇಟೆಯಲ್ಲಿ ಬಿಎಸ್ ವೈ ಪುತ್ರ ಬಿವೈ ವಿಜಯೇಂದ್ರ ಮೇಲೆ ಬಿಜೆಪಿ ವಿಶ್ವಾಸ ಇಟ್ಟಿರುವುದಾಗಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next