Advertisement

ರಾಜಕೀಯ ಪಕ್ಷಗಳ ಆದಾಯ ಹೆಚ್ಚಳ

01:08 AM Jan 11, 2020 | mahesh |

ಹೊಸದಿಲ್ಲಿ: ದೇಶದ ಅಭಿವೃದ್ಧಿ ದರ ಸಹಿತ ವಿವಿಧ ವಲಯಗಳ ವ್ಯಾಪಾರ ವಹಿವಾಟು ಕುಸಿಯುತ್ತಿದ್ದರೆ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಆದಾಯ ಗಣನೀಯವಾಗಿ ಏರಿದೆ. ಕೇವಲ ಒಂದು ವರ್ಷದ ಅವಧಿಯಲ್ಲಿ ಬಿಜೆಪಿಗೆ ಬರೋಬ್ಬರಿ 1,383 ಕೋಟಿ ರೂ. ಹರಿದು ಬಂದಿದೆ. ಈ ಮೂಲಕ ವರ್ಷದೊಳಗೆ ದುಪ್ಪಟ್ಟು ಆದಾಯ ಸಂಗ್ರಹಿಸಿದೆ. ಇನ್ನು ಕಾಂಗ್ರೆಸ್‌ ನಾಲ್ಕು ಪಟ್ಟು ಹೆಚ್ಚು ಆದಾಯ ಪಡೆದಿದೆ.

Advertisement

ಚುನಾವಣ ಆಯೋಗಕ್ಕೆ 2017-18 ರಲ್ಲಿ 1,027 ಕೋಟಿ ರೂ. ಆದಾಯ ತೋರಿಸಿದ್ದ ಬಿಜೆಪಿ, 2018-19ರಲ್ಲಿ 2,410 ಕೋಟಿ ರೂ. ಇದೆ ಎಂದು ಘೋಷಿಸಿಕೊಂಡಿದೆ. ಒಂದು ವರ್ಷದ ಅವಧಿಯಲ್ಲಿ ಶೇ.134ರಷ್ಟು ಅಂದರೆ 1,383 ಕೋಟಿ ರೂ. ಆದಾಯ ವೃದ್ಧಿಸಿಕೊಂಡಿದೆ. ಈ ಪೈಕಿ ಚುನಾವಣ ಬಾಂಡ್‌ ಮೂಲಕ 1,450 ಕೋಟಿ ರೂ. ಸಂಗ್ರಹಿಸಿದೆ. 2017-18ರಲ್ಲಿ ಚುನಾವಣ ಬಾಂಡ್‌ನಿಂದ 210 ಕೋಟಿ ರೂ. ಹರಿದು ಬಂದಿತ್ತು. 2018-19ರಲ್ಲಿ ಬಿಜೆಪಿ 1,005 ಕೋಟಿ ರೂ. ಹಾಗೂ 2017-18ರಲ್ಲಿ 758 ಕೋಟಿ ರೂ. ವ್ಯಯಿಸಿದೆ.

ಕಾಂಗ್ರೆಸ್‌ಗೆ 2018-19ರಲ್ಲಿ 918 ಕೋಟಿ ರೂ. ಆದಾಯ ಬಂದಿದೆ. ಕಳೆದ ವರ್ಷ ಒಟ್ಟಾರೆ 199 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. 470 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಚುನಾವಣ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಚುನಾವಣ ಬಾಂಡ್‌ ಮೂಲಕ 383 ಕೋಟಿ ರೂ. ಸಂಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next