Advertisement
ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನು ಮನವೊಲಿಸಿ ನಾಮಪತ್ರ ವಾಪಸ್ ಪಡೆಯಲು ರಣತಂತ್ರ ನಡೆಸಿದ್ದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಮುಖಂಡರು ಪುರಸಭೆ ಕಚೇರಿ ಎದುರು ಸೋಮವಾರ ಕಾದುಕುಳಿತ್ತಿದ್ದರು.
Related Articles
Advertisement
ಒಳ ಬಿಡದ್ದಕ್ಕೆ ಆಕ್ರೋಶ: ಪುರಸಭೆ ಕಚೇರಿ ಒಳಗೆ ಬಿಜೆಪಿ ಮುಖಂಡರನ್ನು ಬಿಡದೇ ಅಡ್ಡಗಟ್ಟಿ ನಿಲ್ಲಿಸಿದ್ದಕ್ಕೆ ತೀವ್ರವಾಗಿ ಕೋಪಗೊಂಡ ಬಿಜೆಪಿ ಮುಖಂಡರು ಪೊಲೀಸರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಸಿದರು. ಚುನಾವಣಾಧಿಕಾರಿಗಳು ಸೂಚನೆ ನೀಡಿರುವುದರಿಂದ ಬಂದೋಬಸ್ತ್ ನೀಡಲಾಗಿದೆ. ಚುನಾವಣಾಧಿಕಾರಿಗಳು ಹೇಳಿದರೆ ಬಿಡುವುದಾಗಿ ಸಬ್‌ಇನ್ಸ್‌ಪೆಕ್ಟರ್ ಹೇಳಿದಾಗ ಚುನಾವಣಾಧಿಕಾರಿಗಳನ್ನೇ ಕರೆಯಿಸಿ ಎಂದು ಗಲಾಟೆ ಮಾಡಿದರು.
ನಂತರ ಅಲ್ಲಿದ್ದ ಪೊಲೀಸರನ್ನು ಚುನಾವಣಾಧಿಕಾರಿಗಳನ್ನು ಕಚೇರಿಯಿಂದ ಹೊರಗೆ ಬಂದು ಬಿಜೆಪಿ ಮುಖಂಡರಿಗೆ ಸಮಜಾಯಿಷಿ ನೀಡುವಂತೆ ಹೇಳಿಕಳುಹಿಸಿದರು. ಆದರೆ, ಚುನಾವಣಾಧಿಕಾರಿಗಳು ಬರುವುದಿಲ್ಲ ಎಂದು ತಿಳಿಸಿದ್ದರಿಂದ ಬಿಜೆಪಿ ಮುಖಂಡರು ತೀವ್ರವಾಗಿ ಆಕ್ರೋಶಗೊಂಡು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.
ಸ್ವತಃ ಸಬ್ ಇನ್ಸ್‌ಪೆಕ್ಟರ್ ಮುರಳಿ ಚುನಾವಣಾಧಿಕಾರಿಗಳಿಗೆ ಬಿಜೆಪಿ ಮುಖಂಡರ ಆಕ್ರೋಶವನ್ನು ತಿಳಿಸಿ ಕರೆದುಕೊಂಡು ಮಾತುಕತೆ ನಡೆಸಲು ಕರೆತಂದರು. 1ರಿಂದ 10ರವರೆಗಿನ ಚುನಾವಣಾಧಿಕಾರಿ ಚಂದ್ರಮರಕಲ ಅಗಮಿಸಿ ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಅಭ್ಯರ್ಥಿಗಳು ಬರದೇ ಇದ್ದರೂ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ನಾಮಪತ್ರ ವಾಪಸ್ ಪಡೆಯಲಾಗಿದೆ ಎಂದು ಬಿಜೆಪಿ ಮುಖಂಡರು ದೂರಿದಾಗ ಚುನಾವಣಾಧಿಕಾರಿಗಳೊಂದಿಗೆ ವಾಗ್ವಾ ದವೇ ನಡೆಯಿತು. ನಂತರ ಬಿಜೆಪಿ ಮುಖಂಡರನ್ನು ಸಮಾಧಾನಪಡಿಸಿದ ಜಿಲ್ಲಾಧ್ಯಕ್ಷ ಬಿ.ಪಿ. ವೆಂಕಟಮುನಿಯಪ್ಪ, ನಗರಾಧ್ಯಕ್ಷ ಶಶಿಕುಮಾರ್, ಜಿಪಂ ಸದಸ್ಯ ಬಿ.ವಿ.ಮಹೇಶ್ ಅವರನ್ನು ನಾಮ ಪತ್ರಗಳನ್ನು ವಾಪಸ್ ಪಡೆದಿರುವ ಬಗ್ಗೆ ದಾಖಲೆ ಪರಿಶೀಲನೆ ನಡೆಸಲು ಕಚೇರಿಗೆ ಕರೆದುಕೊಂಡು ಹೋದ ನಂತರ ಗಲಾಟೆ ತಹಬದಿಗೆ ಬಂತು. ಬಿಜೆಪಿ ತಾಲೂಕು ಅಧ್ಯಕ್ಷ ಎ.ಹನುಮಪ್ಪ, ನಗರಾಧ್ಯಕ್ಷ ಶಶಿಕು ಮಾರ್, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಬಿ.ಹೊಸರಾಯಪ್ಪ, ಜಿಪಂ ಸದಸ್ಯ ಬಿ.ವಿ.ಮಹೇಶ್, ತಾಪಂ ಸದಸ್ಯ ಪಿ.ಅಮರೇಶ್, ಮುಖಂಡ ಮಾದ ಮಂಗಲ ಎಂ.ಪಿ.ಶ್ರೀನಿವಾಸಗೌಡ, ವೇಲುಮುರು ಗನ್, ನಾಗಪ್ರಕಾಶ್, ನಾರಾಯಣಸ್ವಾಮಿ ಇದ್ದರು.
ಕಾಂಗ್ರೆಸ್‌ನ ಮತ್ತೂಬ್ಬ ಅಭ್ಯರ್ಥಿ ರಾಕೇಶ್‌ಗೌಡ ಅವಿರೋಧ ಆಯ್ಕೆ:
ಬಂಗಾರಪೇಟೆ ವಾರ್ಡ್ ನಂ.6ರ ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಿ.ಹೃದಯರಾಜ್ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ರಾಕೇಶ್‌ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದು, ಇದರೊಂದಿಗೆ 27 ವಾರ್ಡ್‌ಗಳಲ್ಲಿ ಎರಡು ಕ್ಷೇತ್ರಗಳು ಅವಿರೋಧವಾಗಿ ಆಯ್ಕೆಯಾದಂತಾಗಿದೆ.
ಪುರಸಭೆಯ ವಾರ್ಡ್ ನಂ 6 ಸೇಟ್ಕಾಂಪೌಂಡ್-3ನೇ ವಾರ್ಡ್ ಬಿಸಿಎಂ ಬಿಗೆ ಮೀಸಲಿರಿಸಿದ್ದು, ಹೃದಯರಾಜ್ ಹಾಗೂ ರಾಕೇಶ್‌ಗೌಡ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಹಾಗೂ ಜೆಡಿಎಸ್‌ಗೆ ಅಭ್ಯರ್ಥಿಗಳ ಕೊರತೆಯಿಂದ ನಾಮಪತ್ರವೇ ಸಲ್ಲಿಸಿರಲಿಲ್ಲ. ಈ ಕ್ಷೇತ್ರದಲ್ಲಿ ಜಿ.ಹೃದಯರಾಜ್‌ಗೆ ಕಾಂಗ್ರೆಸ್ ಟಿಕೆಟ್ ನೀಡುವ ಬಗ್ಗೆ ಭರವಸೆ ನೀಡಲಾಗಿತ್ತು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷರಾಗಿರುವ ಎಸ್.ರಾಕೇಶ್‌ಗೌಡರಿಗೆ ಟಿಕೆಟ್ ಅನ್ನು ಅಂತಿಮ ಕ್ಷಣದಲ್ಲಿ ನೀಡಲಾಗಿತ್ತು. ಇದರಿಂದ ಬೇಸತ್ತ ಜಿ.ಹೃದಯರಾಜ್ ಪಕ್ಷೇತರರಾಗಿ ಸ್ಪರ್ಧಿಸಿದ್ದರು.
ಪುರಸಭೆಯ ಸೇಟ್ಕಾಂಪೌಂಡ್-3 ವಾರ್ಡ್ ನಂ. 6ರಲ್ಲಿ ಕಾಂಗ್ರೆಸ್ ಟಿಕೆಟ್ ನೀಡುವ ಬಗ್ಗೆ ಗೊಂದಲ ಸೃಷ್ಟಿಯಾಗಿತ್ತು.
ಸಂಸದ ಕೆ.ಎಚ್.ಮುನಿಯಪ್ಪ ತಮ್ಮ ಹಿಂಬಾಲಕರಿಗೆ ಟಿಕೆಟ್ ನೀಡುವ ಭರವಸೆಯಲ್ಲಿ ಎಸ್.ರಾಕೇಶ್‌ಗೌಡರಿಗೆ ಟಿಕೆಟ್ ನೀಡುವಂತೆ ಸೂಚನೆ ನೀಡಿದ್ದರಿಂದ ಬೇಸತ್ತ ಸ್ಥಳೀಯ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ರಾಕೇಶ್‌ಗೌಡರ ವಿರುದ್ಧ ಮುನಿಸಿಕೊಂಡಿದ್ದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಸಮಾಧಾನ ಪಡಿಸಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಜಿ.ಹೃದಯರಾಜ್ ನಾಮಪತ್ರ ವಾಪಸ್ ಪಡೆದರು. ಪಕ್ಷದ ಅಭ್ಯರ್ಥಿ ರಾಕೇಶಗೌಡ ಅವಿರೋಧ ಆಯ್ಕೆ ಸುಗಮವಾಯಿತು.