Advertisement

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಯತ್ತ ಬಿಜೆಪಿ ಹೈಕಮಾಂಡ್ ಒಲವು!

10:12 PM Jul 25, 2019 | sudhir |

ಮಣಿಪಾಲ : ಕರ್ನಾಟಕದ ರಾಜಕೀಯ ಅತಂತ್ರತೆ ಇನ್ನಷ್ಟು ಕಾಲ ಮುಂದುವರಿಯುವ ಸಾಧ್ಯತೆಯಿದೆ. ಇದಕ್ಕೆ ಕಾರಣ ಬಿಜೆಪಿ ಹೈಕಮಾಂಡ್‌ ಕೈಗೊಂಡಿರುವ ಕಠಿನ ನಿಲುವು. ರಾಜ್ಯದ ಬಿಜೆಪಿ ನಾಯಕರಿಗೆ ತಕ್ಷಣವೇ ಸರಕಾರ ರಚಿಸುವ ಉತ್ಸಾಹ ಇದ್ದರೂ ಹೈಕಮಾಂಡ್‌ ಮಾತ್ರ ಅವರ ಉತ್ಸಾಹಕ್ಕೆ ತಣ್ಣೀರು ಎರಚಿದೆ.

Advertisement

ಪಕ್ಷದ ಅಧ್ಯಕ್ಷ ಅಮಿತ್‌ ಶಾ ಮತ್ತು ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದಾರೆ. ಸರಕಾರ ರಚಿಸಿದರೆ ಅವಧಿ ಪೂರ್ತಿಯಾಗುವ ತನಕ ಸ್ಥಿರವಾಗಿರಬೇಕೆನ್ನುವುದು ಅವರ ಇಚ್ಚೆ.

ಹೀಗಾಗಿ ಅತೃಪ್ತರ ಸಹಾಯ ಪಡೆದುಕೊಂಡು ಸರಕಾರ ರಚಿಸುವ ಬದಲು ಚುನಾವಣೆಗೆ ಹೋಗಿ ಸ್ಪಷ್ಟ ಬಹುಮತ ಪಡೆದುಕೊಳ್ಳುವುದೇ ಲೇಸು ಎಂದು ಅವರು ತೀರ್ಮಾನಿಸಿದ್ದಾರೆ. ಹೀಗಾಗಬೇಕಾದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಗುತ್ತದೆ. ಬಿಜೆಪಿ ಹೈಕಮಾಂಡ್‌ನ‌ ಸದ್ಯದ ನಡೆಗಳೆಲ್ಲ ಈ ಸಾಧ್ಯತೆಯತ್ತಲೇ ಹೆಚ್ಚಿನ ಒಲವು ಹೊಂದಿದೆ.

ರಾಷ್ಟ್ರಪತಿ ಆಳ್ವಿಕೆ ಹೇರಿಕೆಯ ಸಾಧ್ಯತೆಯನ್ನೇ ಬಿಜೆಪಿ ಹೈಕಮಾಂಡ್‌ ಆದ್ಯತೆಯಾಗಿ ಪರಿಗಣಿಸಿದೆ ಎಂದು ನಡ್ಡಾ ಅವರಿಗೆ ನಿಕಟರಾಗಿರುವ ಆರ್‌ಎಸ್‌ಎಸ್‌ ಮುಖಂಡರೊಬ್ಬರು ಖಾಸಗಿ ಸಂವಾದದಲ್ಲಿ ಹೇಳಿಕೊಂಡಿದ್ದಾರೆ. ಆರ್‌ಎಸ್‌ಎಸ್‌ ಕೂಡಾ ಅವಸರದಲ್ಲಿ ಸರಕಾರ ರಚಿಸುವುದು ಬೇಡ ಎಂದು ಹೇಳಿದೆ ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next