Advertisement

ಗಣಿಧಣಿಯನ್ನು ಪ್ರಚಾರ ಕಣದಿಂದ ಹಿಂದೆ ಸರಿಸುವಲ್ಲಿ ಯಶಸ್ವಿಯಾದ ಬಿಜೆಪಿ!

04:15 PM Apr 28, 2018 | Team Udayavani |

ಬೆಂಗಳೂರು: ಅಕ್ರಮ ಗಣಿಗಾರಿಕೆಯಿಂದ ಕಳಂಕಿತರಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಪ್ರಚಾರ ಕಣದಿಂದ ಹಿಂದಕ್ಕೆ ಕಳುಹಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. 

Advertisement

ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದ ಜನಾರ್ದನ ರೆಡ್ಡಿ ಅವರ ವಿಚಾರ ರಾಷ್ಟ್ರೀಯ ಮಾಧ್ಯಮಗಳಲ್ಲೂ ಚರ್ಚೆಯಾಗಿ  ಬಿಜೆಪಿಗೆ ಭಾರಿ ತಲೆನೋವು ತಂದಿಟ್ಟಿತ್ತು. ಕಾಂಗ್ರೆಸ್‌ ಕೂಡ ಇದೇ ವಿಚಾರವನ್ನು ಬಿಜೆಪಿ ವಿರುದ್ದ ಅಸ್ತ್ರವನ್ನಾಗಿ ಬಳಸಿತ್ತು. 

ಅಮಿತ್‌ ಶಾ ಅವರ ಸೂಚನೆ ಮೇರೆಗೆ ಜನಾರ್ದನ ರೆಡ್ಡಿ ಅವರು ಬೆಂಗಳೂರಿಗೆ ವಾಪಾಸಾಗಿದ್ದಾರೆ ಎಂದು ವರದಿಯಾಗಿದೆ. 

ರೆಡ್ಡಿ ಕಳೆದ ಒಂದು ವಾರದಿಂದ ಶ್ರೀರಾಮುಲು ಪರ ಭರ್ಜರಿ ಪ್ರಚಾರ ನಡೆಸಿದ್ದರು. ನಿನ್ನೆಯಿಂದ ಅವರು  ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ. 

ಅಮಿತ್‌ ಶಾ ಅವರು ಬಳ್ಳಾರಿ ರೋಡ್‌ ಶೋ ಕೈ ಬಿಟ್ಟು ರೆಡ್ಡಿಗೆ ಶಾಕ್‌ ನೀಡಿದ್ದರು. ನಾಳೆ ಚಿತ್ರದುರ್ಗದಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಶಾ ಅವರು ಪಾಲ್ಗೊಳ್ಳಲಿದ್ದು, ಆ ಕಾರ್ಯಕ್ರಮದಿಂದ ರೆಡ್ಡಿ ದೂರ ಉಳಿಯಲಿದ್ದಾರೆ ಎಂದು ತಿಳಿದು ಬಂದಿದೆ. 

Advertisement

ಅಮಿತ್‌ ಶಾ ರಾಜ್ಯದಲ್ಲಿ ಪ್ರಚಾರ ಆರಂಭಿಸುವ ಮುನ್ನ ‘ಜನಾರ್ದನ ರೆಡ್ಡಿಗೂ ನಮಗೂ ಯಾವುದೇ ಸಂಬಂಧ ಇಲ್ಲ’ ಎಂದಿದ್ದರು. ಆ ಬಳಿಕವೂ ರೆಡ್ಡಿ ಅವರು ಪ್ರಚಾರದಲ್ಲಿ ಭಾಗಿಯಾಗಿದ್ದರು. 

ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್‌ ಜಾವ್ಡೇಕರ್‌ ಅವರು ‘ಜನಾರ್ದನ ರೆಡ್ಡಿ ನಮ್ಮ ಸ್ಟಾರ್‌ ಪ್ರಚಾರಕ ಅಲ್ಲ. ಅವರು ಸ್ನೇಹಿತರ ಪರ ಪ್ರಚಾರ ನಡೆಸುತ್ತಾರೆ ಅಷ್ಟೇ’ ಎಂದಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next