Advertisement

ಸರಕಾರಗಳ ಪತನಕ್ಕೆ 6,300 ಕೋ. ರೂ.: ಅರವಿಂದ ಕೇಜ್ರಿವಾಲ್‌

11:17 AM Aug 28, 2022 | Team Udayavani |

ಹೊಸದಿಲ್ಲಿ: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಬಿಜೆಪಿ ವಿರುದ್ಧದ ವಾಗ್ಧಾಳಿ ಮುಂದುವರಿಸಿದ್ದಾರೆ. ಶನಿವಾರ ಅಸೆಂಬ್ಲಿ ಯಲ್ಲಿ ಮಾತನಾಡಿ, “ದೇಶಾದ್ಯಂತ ಬೇರೆ ಬೇರೆ ಪಕ್ಷಗಳ ಸರಕಾರಗಳನ್ನು ಉರುಳಿ ಸಲು ಬಿಜೆಪಿ 6,300 ಕೋಟಿ ರೂ. ವೆಚ್ಚ ಮಾಡಿದೆ. ಇಷ್ಟು ಹಣ ವೆಚ್ಚ ಮಾಡದೇ ಇರುತ್ತಿದ್ದರೆ, ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಬೇಕಾದ ಪರಿಸ್ಥಿತಿ ಉದ್ಭವವೇ ಆಗುತ್ತಿರಲಿಲ್ಲ’ ಎಂದಿದ್ದಾರೆ.

Advertisement

ಮಜ್ಜಿಗೆ, ಮೊಸರು, ಜೇನುತುಪ್ಪ, ಗೋದಿ, ಅಕ್ಕಿ ಮೇಲಿನ ಜಿಎಸ್‌ಟಿಯಿಂದ ಸರಕಾರಕ್ಕೆ ವಾರ್ಷಿಕ 7,500 ಕೋಟಿ ರೂ. ಆದಾಯವಿದೆ ಎಂದಿದ್ದಾರೆ ಕೇಜ್ರಿವಾಲ್‌. ಇದೇ ವೇಳೆ, ದಿಲ್ಲಿಯ ಬಿಜೆಪಿ ಶಾಸಕರು ಅಣಕು ವಿಧಾನಸಭೆ ಅಧಿವೇಶನ ನಡೆಸಿ ಆಪ್‌ ವಿರುದ್ಧ ವಾಗ್ಧಾಳಿ ನಡೆಸಿ ದ್ದಾರೆ. ಮದ್ಯ ಹಗರಣ ಸಂಬಂಧ ಡಿಸಿಎಂ ಸಿಸೋಡಿಯಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಮತ್ತೊಂದು ಸಂಘರ್ಷ?: ಈ ಎಲ್ಲ ಬೆಳವಣಿಗೆ ನಡುವೆಯೇ, ಕೇಜ್ರಿವಾಲ್‌ ಬದಲಿಗೆ ಅವರ ಸಿಬಂದಿ ಸಹಿ ಹಾಕಿದ್ದ ದಿಲ್ಲಿ ಸರಕಾರದ 47 ಕಡತಗಳನ್ನು ಲೆಫ್ಟಿನೆಂಟ್‌ ಗವರ್ನರ್‌ ವಾಪಸ್‌ ಕಳುಹಿಸಿದ್ದಾರೆ. ಇವುಗಳಲ್ಲಿ ಶಿಕ್ಷಣ, ವಕ್ಫ್ ಮತ್ತಿತರ ಇಲಾಖೆಗಳ ಕಡತಗಳೂ ಸೇರಿವೆ. ಇದು ಕೇಜ್ರಿವಾಲ್‌ ಸರಕಾರ ಮತ್ತು ಎಲ್‌ಜಿ ನಡುವೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಧ್ಯತೆಯಿದೆ. ನಿಮ್ಮ ಸಹಿ ಇಲ್ಲದಿರುವ ಕಡತಗಳನ್ನು ರವಾನಿಸಲಾಗುತ್ತಿದೆ ಎಂದು ಎಲ್‌ಜಿ ಕಚೇರಿಯು ಕೇಜ್ರಿವಾಲ್‌ಗೆ ಪತ್ರ ಬರೆದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next