ದಾವಣಗೆರೆ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ಕಾನೂನು ಎಲ್ಲರಿಗೂ ಒಂದೇ.ಸೇಡಿನ ರಾಜಕಾರಣ ಯಾವತ್ತು ಬಿಜೆಪಿ ಪಕ್ಷ ಮಾಡಿಲ್ಲ.ಕಾಂಗ್ರೆಸ್ ಪಕ್ಷದವರು ಸುಖಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಸಿ ಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಕೆಶಿ ಬಗ್ಗೆ ಅನುಕಂಪ ಇದೆ.ಡಿಕೆಶಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುತ್ತಾರೆ, ದೊಡ್ಡ ಲೀಡರ್ ಆಗುತ್ತಾರೆ ಎಂದು ಕಾಂಗ್ರೆಸ್ ನಾಯಕರೇ ಸಿಲುಕಿಸಿದ್ದಾರೆ.
ಡಿಕೆಶಿ ಬಂಧನವಾದರು ಎಂದು ಯಾರೂ ಕೂಡ ಕಾನೂನು ಕೈ ಗೆ ತೆಗೆದುಕೊಳ್ಳಬಾರದು.ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾದ್ರೆ ಅದು ನಮ್ಮ ತೆರಿಗೆ ಹಣ ನಷ್ಟವಾಗುತ್ತದೆ..ಡಿಕೆಶಿ ಬಂಧನವನ್ನು ಜಾತಿ ರಾಜಕಾರಣ ಮಾಡಬಾರದು ಎಂದು ಮನವಿ ಮಾಡಿದರು.
ಬಿಜೆಪಿ ಇದುವರೆಗೂ ಯಾವ ತನಿಖಾ ಸಂಸ್ಥೆಯನ್ನು ಕೈಯಲ್ಲಿ ಇಟ್ಟುಕೊಂಡಿಲ್ಲ.
ಬಿಜೆಪಿಯವರ ಕುತಂತ್ರದಿಂದ ತನಿಖೆಗೆಳಗಾಗಿದ್ದೇವೆ ಎನ್ನುವ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಕ್ಕೆ ರೇಣುಕಾಚಾರ್ಯ ಅವರು ಪ್ರತಿಕ್ರಿಯಿಸಿ ನೋಡಮ್ಮ ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್ ರವರೆ. ನಿಮ್ಮ ಪಕ್ಷದವರೇ ನಿಮ್ಮನ್ನು ತುಳಿಯುತ್ತಿದ್ದಾರೆ. ಲೋಕಸಭಾ ಚುನಾವಣೆ ಸೋತ ನಂತರ ನಿಮ್ಮ ವಿರುದ್ದ ಹೋರಾಟ ಮಾಡಿದ್ದು ಗೊತ್ತಿಲ್ವಾ.ಮಹಿಳಾ ಆಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದು ನಿಮ್ಮ ಕಾಂಗ್ರೆಸ್ ಪಕ್ಷ .ಕಾಂಗ್ರೆಸ್ ನಿಮ್ಮ ವಿರುದ್ದ ಷಡ್ಯಂತ್ರ ನಡೆಸುವ ಕೆಲಸ ಮಾಡುತ್ತಿದೆ.ಬಿಜೆಪಿ ಸ್ವತಂತ್ರವಾಗಿ ಜನಾದೇಶದಿಂದ ಅಧಿಕಾರಕ್ಕೆ ಬಂದಿದ್ದೇವೆ.ಅದ್ರೆ ಕಾಂಗ್ರೆಸ್ ,ಜೆಡಿಎಸ್ ಸಮ್ಮಿಶ್ರ ಮಾಡಿ ಅಧಿಕಾರಕ್ಕೆ ಬಂದಿತ್ತು.
ನಾವು ಯಾವುದೇ ಚುನಾವಣೆಯನ್ನಾದೂ ಎದುರಿಸಲು ಸಿದ್ದ.ಕಾಂಗ್ರೆಸ್ - ಜೆಡಿಎಸ್ ನವರು ಬೇಕಾದಾಗ ಅಪ್ಪಿಕೊಳ್ಳುತ್ತಾರೆ.ಬೇಡಾವೆಂದಾಗ ದೂರ ಮಾಡುತ್ತಾರೆ.
ಕಾಂಗ್ರೆಸ್ ನವರಿಗೆ ಹೋರಾಟ ಮಾಡಲು ಬರೋಲ್ಲ.ಟ್ರೈನಿಂಗ್ ಬೇಕಾದ್ರೆ ನಮ್ಮ ಬಳಿ ಬನ್ನಿ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನವರ ಹೋರಾಟ ಎಂದರೆ ಬಾಡೂಟ, 500 ಕೊಟ್ಟು ಜನರನ್ನು ಕರೆದಂತು ಹೋರಾಟ ಮಾಡುತ್ತಾರೆ.ಕಾಂಗ್ರೆಸ್ ವಿರುದ್ದ ರೇಣುಕಾಚಾರ್ಯ ವ್ಯಂಗ್ಯವಾಗಿ ಟೀಕಿಸಿದರು.