Advertisement
ಅವರು ಗುರುವಾರ ಇಲ್ಲಿ ಸುದ್ದಿ ಗಾರರ ಜತೆ ಮಾತನಾಡಿ, ಮೋದಿ ಜನರ ಕೈಗೆ ಸಿಗುವುದಿಲ್ಲ. ನಮಗೆ ದೇಶ ಮುಖ್ಯ. ಜತೆಗೆ ಕ್ಷೇತ್ರದ ಅಭಿವೃದ್ಧಿಯೂ ಮುಖ್ಯ. ನಾನು ಸಚಿವ, ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯ ಜನ ನೋಡಿದ್ದಾರೆ. ಅದೇ ಮಾದರಿಯಲ್ಲಿ ಎರಡೂ ಜಿಲ್ಲೆಯ ಅಭಿವೃದ್ಧಿಯ ಭರವಸೆ ನೀಡುತ್ತೇನೆ. ಕೇಂದ್ರ ಹಾಗೂ ರಾಜ್ಯದ ಅನುದಾನ ತರಿಸುತ್ತೇನೆ. ಕೆಲಸ ಮಾಡುವವರು ಯಾರು, ಮಾಡದವರು ಯಾರು, ಸ್ಥಳೀಯರು ಯಾರು, ಬೆಂಗಳೂರು ವಿಳಾಸ ನೀಡಿದವರು ಯಾರು ಎಂದು ಜನ ಗಮನಿಸುತ್ತಾರೆ ಎಂದರು.
ಮರಳಿನ ಸಮಸ್ಯೆಗೆ ಮೂಲ ಕಾರಣವೇ ಕೇಂದ್ರ. ಕರಾವಳಿ ವಲಯ ದಲ್ಲಿ ನಿಷೇಧಿಸಿದೆ, ಕುಂದಾಪುರವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಿಸಲಾಗಿದೆ, ನದಿಯಾಳದಿಂದ ಮರಳು ತೆಗೆಯುವುದನ್ನೂ ನಿಷೇಧಿಸ ಲಾಗಿದೆ. ಇದೆಲ್ಲದರ ವಿರುದ್ಧ ಸಂಸದರು ಕೇಂದ್ರದ ಗಮನ ಸೆಳೆದು ಸಮಸ್ಯೆ ನಿವಾರಿಸಬೇಕಿತ್ತು. ಜನ ವಿರೋಧಿ ಕಾನೂನು ಬಂದಾಗ ಅದನ್ನು ಬದಲಾ ಯಿಸುವುದು ಕೂಡ ಸಂಸದರ ಕೆಲಸ. ನಾನು ಸಚಿವನಾಗಿದ್ದಾಗ 7.38 ಲಕ್ಷ ಟನ್ ಮರಳಿಗೆ ಅನುಮತಿ ದೊರೆತಿತ್ತು. ಚುನಾವಣೆ ಮುಗಿದ ಕೂಡಲೇ ಮರಳುಗಾರಿಕೆಗೆ ದೊರೆತ ಅನುಮತಿ ಯಂತೆ ಜನರಿಗೆ ಮರಳು ದೊರಕಿಸಲು ಪ್ರಯತ್ನಿಸುತ್ತೇನೆ ಎಂದರು. ಮೀನುಗಾರರ ಪ್ರಶ್ನೆಗೆ ಉತ್ತರವಿಲ್ಲ
ಮೀನುಗಾರರ ನಾಪತ್ತೆ ಕುರಿತು ಕೇಂದ್ರ ಉತ್ತರಿಸುತ್ತಿಲ್ಲ. ಅವರ ಬೋಟನ್ನು ನೌಕಾದಳವೇ ಹೊಡೆದುರು ಳಿಸಿದೆ ಎಂಬ ಅನುಮಾನ ನಮಗಿದೆ. ಆದರೆ ಇದಕ್ಕೆ ರಕ್ಷಣಾ ಇಲಾಖೆ, ಸಚಿವರು ಉತ್ತರಿಸುತ್ತಿಲ್ಲ. ಇಷ್ಟು ದಿನಗಳಾದರೂ ಪತ್ತೆ ಮಾಡದಿರುವುದು ಅಕ್ಷಮ್ಯ ಅಪರಾಧ, ಮೀನುಗಾರರಿಗೆ ಬಗೆಯುವ ದ್ರೋಹ ಎಂದರು.
Related Articles
ಮೈತ್ರಿ ಕುರಿತು ಎಲ್ಲೂ ಕಾರ್ಯ ಕರ್ತರು ಆಕ್ಷೇಪಿಸಿಲ್ಲ. 50-60 ಸಭೆಗಳನ್ನು ಮಾಡಿದ್ದೇವೆ. ಗೋ ಬ್ಯಾಕ್ ಶೋಭಾ ಅಭಿಯಾನ ಮಾಡಿದವರು, ಕಾಂಗ್ರೆಸ್, ಜೆಡಿಎಸ್ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಶಾಸಕರ ಮೇಲೆ ಅಸಮಾಧಾನ ಇರುವವರ ಮತಗಳು ನನಗೆ ದೊರೆತು ನಾನು ಗೆಲುವು ಸಾಧಿಸಲಿದ್ದೇನೆ ಎಂದರು.
Advertisement
ರಫೇಲ್ ಡೀಲ್ ಸಾಕ್ಷಿ ಕುರಿತು ಸುಪ್ರೀಂಕೋರ್ಟ್ ಆದೇಶ ನೀಡಿರು ವುದು ದೇಶದಲ್ಲಿ ಪ್ರಜಾಪ್ರಭುತ್ವದ ಸೌಂದರ್ಯವನ್ನು ತೋರಿಸುತ್ತದೆ ಎಂದರು.ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ, ಹೆರಿಯಣ್ಣ, ದೇವಕಿ ಸಣ್ಣಯ್ಯ, ವಿನೋದ್ ಕ್ರಾಸ್ತಾ, ಚಂದ್ರಶೇಖರ ಶೆಟ್ಟಿ, ಜೆಡಿಎಸ್‌ನ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ, ಹುಸೇನ್ ಹೈಕಾಡಿ ಮೊದಲಾದವರು ಇದ್ದರು. ಪ್ರಮೋದಿಗೆ ಓಟು ಪತ್ರಕರ್ತರು: ಮೋದಿ ಹವಾ ಇದೆಯೇ?
ಪ್ರಮೋದ್: ನನ್ನ ಹೆಸರಿನಲ್ಲಿಯೇ ಮೋದಿ ಇದೆ. ಪ್ರ”ಮೋದಿ’ಗೆ ಓಟು ಕೊಡಿ ಎಂದೇ ನಾನು ಕೇಳುತ್ತಿರುವುದು.