ಶಿವಮೊಗ್ಗ: ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಸಿಲ್ಲಿ ಎಂದು ಕರೆದಿದ್ದಾರೆ. ಇವರು ಸಿಲ್ಲಿ ಮಂತ್ರಿ. ಕೂಡಲೇ ಶರಣ ಪ್ರಕಾಶ್ ಪಾಟೀಲ್ ರಾಜೀನಾಮೆ ಪಡೆಯಬೇಕು. ಮುಖ್ಯಮಂತ್ರಿಯವರು ಅವರು ಕೂಡಲೇ ಮಂತ್ರಿ ಮಂಡಲದಿಂದ ಕೈ ಬಿಡಬೇಕು ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಸಂದರ್ಭದಲ್ಲಿ ಡಿಕೆ ಶಿವಕುಮಾರ್, ಪ್ರಿಯಾಂಕಾ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ಘೋಷಣೆ ಕೂಗಿಲ್ಲ ಅಂದರು. ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು. ಡಿಕೆಶಿವಕುಮಾರ್ ಭಂಡ, ರಾಜೀನಾಮೆ ಕೊಡಲ್ಲ. ಕೊನೆ ಪಕ್ಷ ದೇಶದ್ರೋಹಿಗಳಿಗೆ ಬೆಂಬಲ ಕೊಟ್ಟಿದಕ್ಕಾದರೂ ಬಹಿರಂಗ ಕ್ಷಮೆಯಾಚಿಸಬೇಕು. ಎಫ್ಎಸ್ಎಲ್ ವರದಿ ಬಂದಿದೆ ಅದರಲ್ಲಿ ಘೋಷಣೆ ಕೂಗಿರುವುದು ಸತ್ಯವಾಗಿದೆ ಎಂದರು.
ಮಂಕಾಳ ವೈದ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಭಯೋತ್ಪಾದಕ ಚಟುವಟಿಕೆ ವಿರುದ್ಧ ಬಿಜೆಪಿಯಿದೆ. ರಾಷ್ಟ್ರದ್ರೋಹಿ ಚಟುವಟಿಕೆಗಳನ್ನು ನಾವು ಎದುರಿಸುತ್ತೇವೆ. ರಸ್ತೆ, ದೀಪ, ಚರಂಡಿ ಮಾಡಲು ಬಿಜೆಪಿ ಆಡಳಿತಕ್ಕೆ ಬರಲ್ಲ. ಧರ್ಮ, ದೇಶ ಉಳಿಸಲು ಅಧಿಕಾರಕ್ಕೆ ಬಂದಿರುವುದು. ಬರೀ ಆಡಳಿತ ನಡೆಸಲು ಅಧಿಕಾರಕ್ಕೆ ಬಂದಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಮೆಚ್ಚಿಸಲು ಹೇಳಿಕೆ ಕೊಟ್ಟಿರಬಹುದು ಎಂದರು.
ಹೆಬ್ಬಾರ್ ಹೇಳಿಕೆಗೆ ತಿರುಗೆಟು ಈಶ್ವರಪ್ಪ, ನಾನು ಹೆಬ್ಬಾರ್, ಎಸ್ ಟಿ ಸೋಮಶೇಖರ್ ದುಡ್ಡು ತಗೆದುಕೊಂಡಿದ್ದಾರೆಂದು ಹೇಳಿಲ್ಲ. ಬಿಜೆಪಿ ಬಿಟ್ಟು ವೋಟ್ ಮಾಡಿದಕ್ಕೆ ಎಷ್ಟು ಕೊಟ್ಟಿರಬಹುದೆಂದು ಹೇಳಿದ್ದೆ. ಕಳ್ಳನ ಮನಸ್ಸು ಹುಳ್ಳಗೆ ಎಂದಹಾಗಾಗಿದೆ. ಈಶ್ವರಪ್ಪ ಕ್ಲೀನ್ ಚಿಟ್ ತಗೊಂಡು ಬಂದಿದ್ದಾರೆಂದು ರಾಜ್ಯದ ಜನರಿಗೆ ಗೊತ್ತಿದೆ ಎಂದರು.
ಲೋಕಸಭಾ ಮೊದಲ ಪಟ್ಟಿ ಬಿಡುಗಡೆ ವಿಚಾರಕ್ಕೆ ಮಾತನಾಡಿ, ಮೊದಲ ಪಟ್ಟಿಯಲ್ಲಿ ಮಹಿಳೆಯರಿಗೆ, ಯುವಕರಿಗೆ ಆದ್ಯತೆ ನೀಡಲಾಗಿದೆ. ಮುಂದಿನ ವಾರದಲ್ಲಿ ಕರ್ನಾಟಕದ ಪಟ್ಟಿ ಸಹ ಬಿಡುಗಡೆ ಆಗುತ್ತದೆ ಎಂದರು.