Advertisement

ಬಿಜೆಪಿ ಸರ್ಕಾರದ ಸಾಧನೆ ಜನರಿಗೆ ತಿಳಿಸಿ

01:10 PM Jan 25, 2022 | Team Udayavani |

ತುಮಕೂರು: ಪಕ್ಷದಲ್ಲಿ ಹುದ್ದೆ ಸ್ವೀಕರಿಸುವುದು ಪಕ್ಷದಲ್ಲಿ ಕೆಲಸ ಮಾಡುವ ಜವಾಬ್ದಾರಿ ಹೆಚ್ಚಿದಂತೆ.ಪಕ್ಷದ ಒಳ್ಳೆಯ ಕೆಲಸಗಳನ್ನು ಜನರಿಗೆ ತಿಳಿಸುವಕೆಲಸ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಬಿಜೆಪಿಸರ್ಕಾರದ ಜನ ಉಪಯೋಗಿ ಯೋಜನೆಗಳನ್ನುಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದುಕಾರ್ಯಕರ್ತರಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಮನವಿ ಮಾಡಿದರು.

Advertisement

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿಎಸ್ಸಿ ಮೋರ್ಚಾ ಅಧ್ಯಕ್ಷರ ಬೀಳ್ಕೊàಡುಗೆ ಮತ್ತು ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ಪಕ್ಷ ಸೇರ್ಪಡೆಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಓಂಕಾರ್‌ ಅವರಿಗೆ ಪಕ್ಷದ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಅವರು, ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾದ ಅಧ್ಯಕ್ಷರಾಗಿ ಓಂಕಾರ್‌ ಅಧಿಕಾರ ಸ್ವೀಕರಿಸಿದ್ದಾರೆ. ಅವರಿಗೆ ಪಕ್ಷದಲ್ಲಿ ಜವಾಬ್ದಾರಿ ಹೆಚ್ಚಿದೆ. ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರಅಂಬೇಡ್ಕರ್‌ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಕಾನ್‌ ಆಗಿ ಬಿಂಬಿಸಲಾಗಿದೆ. ಇದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಲಕ್ಷ್ಮೀಶ್‌ ಮಾತನಾಡಿ, ಪಕ್ಷದಸಿದ್ಧಾಂತವನ್ನು ಒಪ್ಪಿ, ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವವರನ್ನು ಗುರುತಿಸಿ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ಈ ಹಿಂದಿನಿಂದಲೂ ನಡೆಯುತ್ತಿದೆ. ಪ್ರಸ್ತುತ ಕ್ಯಾತ್ಸಂದ್ರದ ಮಾತೃಶ್ರೀ ಪತ್ತಿನ ಸಹಕಾರ ಸಂಘದ ಅಧ್ಯಕ್ಷಗುರುಪ್ರಸಾದ್‌ ಮತ್ತು ಅವರ ಬೆಂಬಲಿಗರು ಇಂದು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಆ ಭಾಗದಲ್ಲಿ ಪಕ್ಷ ಸಂಘಟನೆಗೆ ಬಲ ಬಂದಿದೆ ಎಂದರು.

ಪಕ್ಷಕ್ಕೆ ಮತ್ತಷ್ಟು ಶಕ್ತಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ನಂದೀಶ್‌ ಮಾತನಾಡಿ, ತುಮಕೂರು ಜಿಲ್ಲೆಯನ್ನು ಇನ್ನೂ ಹೆಚ್ಚು ಶಕ್ತಿಯುತ ಮಾಡಬೇಕೆಂಬಉದ್ದೇಶದಿಂದ ಎರಡು ಜಿಲ್ಲೆಯಾಗಿ ಮಾಡಲಾಗಿದೆ. ಇದರಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಇದೆ. ಕಾರ್ಯಕರ್ತರಿಗೆಹೆಚ್ಚು ಜವಾಬ್ದಾರಿಯನ್ನು ಕೊಟ್ಟರೆ ಮತ್ತಷ್ಟು ವಿಸ್ತರಿಸಲು ಸಾಕಷ್ಟು ಅವಕಾಶವಿದೆ. ಹೊಸ ಜಿಲ್ಲೆಯಾದಮಧುಗಿರಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರನ್ನು ನೋಡುವಂತಾಗಬೇಕು ಎಂದರು.

ಗೆಲುವಿಗೆ ಶ್ರಮಿಸುವೆ: ಎಸ್ಸಿ ಜಿಲ್ಲಾ ಮೋರ್ಚಾಅಧ್ಯಕ್ಷರಾಗಿ ನೇಮಕಗೊಂಡಿರುವ ಓಂಕಾರ್‌ಮಾತನಾಡಿ, ಮುಂಬರುವ ಜಿಲ್ಲಾ ಪಂಚಾಯಿತಿ,ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಎಲ್ಲ ಎಸ್ಸಿಕ್ಷೇತ್ರಗಳಲ್ಲಿಯೂ ಪ್ರವಾಸ ಮಾಡಿ, ಪಕ್ಷದಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಶಕ್ತಿ ಮೀರಿಪ್ರಯತ್ನಿಸಲಾಗುವುದು. ಹಾಗೆಯೇ ಮುಂಬರುವ 2023ರ ವಿಧಾನಸಭಾ ಚುನಾವಣೆಗಳಲ್ಲಿ ಎಲ್ಲ 11 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ, ಪ. ಜಾತಿಯಮತಗಳನ್ನು ಪಕ್ಷದ ಅಭ್ಯರ್ಥಿಗೆ ನೀಡುವಂತೆ ಮನವೊಲಿಸಲಾಗುವುದು ಎಂದರು.

Advertisement

ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ವೈ.ಎಚ್‌. ಹುಚ್ಚಯ್ಯ ಮಾತನಾಡಿ, ಇದುವರೆಗೂ ಜಿಲ್ಲಎಸ್ಸಿ ಮೋರ್ಚಾ ಅಧ್ಯಕ್ಷನಾಗಿದ್ದ ನನ್ನನ್ನು, ಜಿಲ್ಲಾಉಪಾಧ್ಯಕ್ಷರನ್ನಾಗಿ ಪಕ್ಷ ನೇಮಕ ಮಾಡಿದೆ.ಯುವಕರಿಗೆ ಎಸ್ಸಿ ಮೋರ್ಚಾ ಜವಾಬ್ದಾರಿ ನೀಡಿದೆ.ಅವರೊಂದಿಗೆ ಸೇರಿ ಜಿಲ್ಲೆಯಲ್ಲಿ ಪ್ರವಾಸ ಮಾಡಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸುತ್ತೇನೆ ಎಂದು ತಿಳಿಸಿದರು.

ಬಿಜೆಪಿ ಪಕ್ಷಕ್ಕೆ ಸೇರ್ಪಡೆ: ಸಚಿವ ಜೆ.ಸಿ.ಮಾಧುಸ್ವಾಮಿಅವರ ಸಮ್ಮುಖದಲ್ಲಿ ಗುರುಪ್ರಸಾದ್‌ ಮತ್ತುಬೆಂಬಲಿಗರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.ಪಕ್ಷದ ಉಪಾಧ್ಯಕ್ಷರಾದ ವೈ.ಎಚ್‌. ಹುಚ್ಚಯ್ಯ, ಎಸ್ಸಿ ಮೋರ್ಚಾದ ನೂತನ ಅಧ್ಯಕ್ಷರಾದ ಓಂಕಾರ್‌ಅವರನ್ನು ಅಭಿನಂದಿಸಲಾಯಿತು. ಪಕ್ಷದ ಮುಖಂಡ ನರಸಿಂಹಮೂರ್ತಿ, ಹನುಮಂತರಾಜು, ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ನಗರ ಅಧ್ಯಕ್ಷ ಶಬ್ಬೀರ್‌ ಅಹಮದ್‌, ವರದರಾಜು, ಅಂಜನ ಮೂರ್ತಿ, ಸಂದೀಪ್‌ಗೌಡ, ಯಶಸ್ಸ್ ಗೋಪಿ ಹಾಗೂ ಮತ್ತಿತರರರು ಇದ್ದರು.

ಪಕ್ಷ ಸಂಘಟನೆಗೆ ಸಕ್ರಿಯರಾಗಿ :ಶಾಸಕ:  ಬಿಜೆಪಿ ಸರ್ಕಾರ ಮಾಡಿದ ಒಳ್ಳೆಯ ಕೆಲಸಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು.ಪಕ್ಷ ಸಂಘಟನೆಗೆ ಸಕ್ರಿಯ ಕಾರ್ಯಕರ್ತರಅಗತ್ಯವಿದೆ. ವಿಸಿಟಿಂಗ್‌ ಕಾರ್ಡ್‌ ಕಾರ್ಯಕರ್ತರ ಅಗತ್ಯವಿಲ್ಲ. ಅಪಪ್ರಚಾರಗಳಿಗೆ ಜನರುಕಿವಿಗೊಡದಂತೆ ಎಚ್ಚರಿಕೆ ವಹಿಸಬೇಕಾಗಿದೆಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next