Advertisement

ಅಭಿವೃದ್ಧಿಗೆ ಅನುದಾನ ನೀಡದ ಬಿಜೆಪಿ ಸರ್ಕಾರ; ಶಾಸಕ ನಾಗನಗೌಡ ಕಂದಕೂರ

06:48 PM Jan 12, 2021 | Team Udayavani |

ಯಾದಗಿರಿ: ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಸೂಕ್ತ ಅನುದಾನ ನೀಡುತ್ತಿಲ್ಲ ಎಂದು ಶಾಸಕ ನಾಗನಗೌಡ ಕಂದಕೂರ ಅಸಮಾಧಾನ ವ್ಯಕ್ತಪಡಿಸಿದರು. ಮತಕ್ಷೇತ್ರದ ಅಲ್ಲಿಪೂರ ಗ್ರಾಪಂ ವ್ಯಾಪ್ತಿಯ ಹೋರುಂಚಾ-ಜಕನಕಲ್‌ ತಾಂಡಾದಲ್ಲಿ ಹಮ್ಮಿಕೊಂಡಿದ್ದ ಲೋಕೋಪಯೋಗಿ ಇಲಾಖೆಯ ಹಲವು ತಾಂಡಾಗಳಿಗೆ ಹಾಗೂ ಗ್ರಾಮಗಳಿಗೆ 4 ಕೋಟಿ ರೂ. ವೆಚ್ಚದ ಕೂಡು ರಸ್ತೆಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

Advertisement

ತಾವು ಶಾಸಕನಾಗಿ ಆಯ್ಕೆಯಾದ 30 ತಿಂಗಳಲ್ಲಿ ಗುರುಮಠಕಲ್‌ ಮತಕ್ಷೇತ್ರದ ಎಲ್ಲಾ ಗ್ರಾಮಗಳು ಹಾಗೂ ತಾಂಡಾಗಳ ಜನರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ರಾಜ್ಯದಲ್ಲಿ ಆಕಸ್ಮಿಕವಾಗಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಅವಧಿಯಲ್ಲಿ ಕ್ಷೇತ್ರಕ್ಕೆ ನಿಮ್ಮೆಲ್ಲರ ಬೇಡಿಕೆಯಂತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿ ಕ್ಷೇತ್ರದಲ್ಲಿ ಬದಲಾವಣೆ ಪರ್ವ ಆರಂಭವಾಯಿತು ಎಂದರು.

ಹತ್ತಿಕುಣಿ ಜಿಪಂ ಸದಸ್ಯ ಶಿವಲಿಂಗಪ್ಪ ಪುಟಗಿ ಮತ್ತು ಜೆಡಿಎಸ್‌ ಪಕ್ಷದ ಮುಖಂಡ ಅಂಬರೀಶ ರಾಠೊಡ ಮಾತನಾಡಿದರು.

ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪ ಪಾಟೀಲ, ತಾಪಂ ಸದಸ್ಯೆ ಸಕ್ಕಿಬಾಯಿ ರಾಜು, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಶೇಖರಗೌಡ ಪಾಟೀಲ, ಇಂಜಿನಿಯರ್‌ ಶರಣಬಸಪ್ಪ, ಮುಖಂಡರಾದ ಸೂರ್ಯಕಾಂತ ಅಲ್ಲಿಪೂರ, ರಾಮಣ್ಣ ಕೊಟಗೇರಾ, ಗುರು ರಾಠೊಡ, ಶಾಂತಿಬಾಯಿ ಲಕ್ಷ¾ಣ, ಸಿದ್ದಣ್ಣ ಪೂಜಾರಿ ಹೋರುಂಚಾ, ಸಿದ್ದಪ್ಪ ಯರಗೋಳ, ಸಾಬಣ್ಣ ಹೋರುಂಚಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next