Advertisement

ಕೋಮುಗಲಭೆ ಸೃಷ್ಟಿಸುತ್ತಿದೆ ಬಿಜೆಪಿ ಸರ್ಕಾರ; ಆನಂದ ನ್ಯಾಮಗೌಡ

06:25 PM Jan 31, 2023 | Team Udayavani |

ಜಮಖಂಡಿ: ಬಿಜೆಪಿಯವರು ಕೇವಲ ಸೈನಿಕರು, ಹಿಂದುಭಕ್ತರು ಎಂದು ಹೇಳಿಕೊಂಡು ಹಿಂದು ಮುಸ್ಲಿಂ ನಡುವೆ ಕೋಮುಗಲಭೆ ಸೃಷ್ಟಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಬಿಜೆಪಿ ರೈತರಿಗೆ ಸಾಲಮನ್ನಾ ಭರವಸೆ ನೀಡಿದ್ದನ್ನು ಮರೆತಿದೆ. ರೈತರ ಕಬ್ಬಿನ ಬೆಳೆಗೆ ಬೆಂಬಲ ಬೆಲೆ ನೀಡಿಲ್ಲ. ಸಾರ್ವಜನಿಕರಿಗೆ ಯಾವುದೇ ರಿಯಾಯತಿ ಯೋಜನೆ ಅನುಷ್ಠಾನಗೊಳಿಸಿಲ್ಲ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

Advertisement

ಶೂರ್ಪಾಲಿ ಗ್ರಾಮದಲ್ಲಿ ಜಮಖಂಡಿ ಮತಕ್ಷೇತ್ರದ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಕೈಗೆ ಕೈ ಜೋಡಿಸಿ ಪಾದಯಾತ್ರೆ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಕೈಗೆ ಕೈಜೋಡಿಸಿವೆವು ಪಾದಯಾತ್ರೆ ಮೂಲಕ ಜನರ ಬಳಿಗೆ ಹೋಗುತ್ತಿದ್ದೇವೆ. ಬಿಜೆಪಿ ವೈಫಲ್ಯ ಜತೆಗೆ ಕಾಂಗ್ರೆಸ್‌ ಯೋಜನೆ ಸಹಿತ ಮತಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಅರಿವು ಮೂಡಿಸಲಾಗುತ್ತಿದೆ. ನನ್ನ ಶಾಸಕ ಅವಧಿಯಲ್ಲಿ ಒಂದು ಸಾವಿರ ಕೋಟಿ ಮತ್ತು ಹಿಂದಿನ ಅವ ಯಲ್ಲಿ ನಮ್ಮ ತಂದೆಯವರ ಅವಧಿಯಲ್ಲಿ 600 ಕೋಟಿ ಸೇರಿದಂತೆ ನಾಲ್ಕು ವರ್ಷ ಅವಧಿಯಲ್ಲಿ 1600 ಕೋಟಿ ಮತಕ್ಷೇತ್ರದ ಅಭಿವೃದ್ಧಿ ಅನುದಾನ ತರಲಾಗಿದೆ ಎಂದರು.

9 ಕೋಟಿ ವೆಚ್ಚದಲ್ಲಿ ಶೂರ್ಪಾಲಿ ಗ್ರಾಮದ ರಸ್ತೆ ಮಾಡಲಾಗಿದೆ. ಶುದ್ದೀಕರಣ ನೀರಿನ ಘಟಕ ನಿರ್ಮಿಸಲಾಗಿದೆ. ವಿದ್ಯುತ್‌ 110 ಕೆವಿ ಕಾಮಗಾರಿ 1.40 ಕೋಟಿ ವೆಚ್ಚದ ಟೆಂಡರ್‌ ಕರೆಯಲಾಗಿದೆ. ಮುಂದಿನ ದಿನದಲ್ಲಿ ನಮ್ಮ ಸರಕಾರ ಅ ಕಾರಕ್ಕೆ ಬಂದರೇ ಪತ್ರಿಮನೆಗೆ ಉಚಿತ 200 ಯುನಿಟ್‌ ವಿದ್ಯುತ್‌ ನೀಡಲಾಗುವದು.

ಮನೆ ಯಜಮಾನಿಗೆ ಮಾಸಿಕ 2 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ. 10 ಕೆ.ಜಿ ಅಕ್ಕಿ ನೀಡಲಾಗುತ್ತದೆ. ಅಂದಿನ ಅವಧಿಯಲ್ಲಿ 165 ಭರವಸೆಯಲ್ಲಿ 158 ಭರವಸೆ ಕಾಂಗ್ರೆಸ್‌ ಈಡೇರಿಸಿದೆ. ಶಾಲಾಮಕ್ಕಳಿಗೆ ಚಾಕ್‌ಪೀಸ್‌ ಖರೀದಿಸಲು ಸರಕಾರದಲ್ಲಿ ಅನುದಾನವಿಲ್ಲ. ಕಾಂಗ್ರೆಸ್‌ ಸರಕಾರ ಶಿಕ್ಷಣ ಕ್ಷೇತ್ರಕ್ಕೆ, ವಿದ್ಯಾರ್ಥಿ ವೇತನಕ್ಕೆ 75 ಸಾವಿರ ಕೋಟಿ ಖರ್ಚು ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಬಿಜೆಪಿ ಅನ್ಯಾಯ ಮಾಡುತ್ತಿದೆ. ಪಂಚಮಸಾಲಿ. ಮರಾಠಾ ಸಮಾಜಕ್ಕೆ ಮೀಸಲಾತಿ ನೀಡುತ್ತಿಲ್ಲ.

Advertisement

ನ್ಯಾಯವಾದಿ ಎನ್‌.ಎಸ್‌.ದೇವರವರ ಮಾತನಾಡಿದರು. ವೇದಿಕೆಯಲ್ಲಿ ಎನ್‌ .ಎ.ಅಧ್ಯಾಪಕ, ಶ್ಯಾಮರಾವ ಘಾಟಗೆ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಜಿಲ್ಲಾ ಕಿಸಾನ ಉಪಾಧ್ಯಕ್ಷ ಪ್ರಕಾಶ ಕನ್ನಬೂರ, ಅಭಯಕುಮಾರ ನಾಂದ್ರೇಕರ, ಅನ್ವರ ಮೋಮಿನ, ಭೀಮಶಿ ನಡುವಿನಮನಿ, ಬಸವರಾಜ ನ್ಯಾಮಗೌಡ, ಭಾಸ್ಕರ ಬಡಿಗೇರ, ಎ.ಆರ್‌.ಶಿಂಧೆ, ಈರಪ್ಪ ಕರಬಸನ್ನವರ, ಅರ್ಜುನ ದಳವಾಯಿ, ಸಿದ್ದು ಮೀಸಿ, ಈಶ್ವರ ವಾಳೆನ್ನವರ, ರಫೀಕ ಬಾರಿಗಡ್ಡಿ, ಭೀಮಸಿ ಕದಂ, ರೆಹಮಾನ ಜಮಖಂಡಿ, ಪರಮಾನಂದ ಗವರೋಜಿ, ಬಸವರಾಜ ಹರಕಂಗಿ ಸಹಿತ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next