ಕಲಬುರಗಿ : ರಾಜ್ಯ ಬಿಜೆಪಿ ಸರ್ಕಾರವು ಆರ್ಯ ಈಡಿಗ ಸಮಾಜದ ಬೇಡಿಕೆಗಳ ಸ್ಪಂದಿಸುವಲ್ಲಿ ಕಡೆಗಣಿಸಿದೆ ಇದರಿಂದ ನಮಗೆ ಬಹಳಷ್ಟು ಅಸಮಾಧಾನವಿದೆ ಎಂದು ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕ ಆರ್ಯ ಈಡಿಗ ಸಮಾಜ ವತಿಯಿಂದ ಗುರುವಾರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಆರ್ಯ ಈಡಿಗ ಸಮಾಜ ನಿಗಮ ಸ್ಥಾಪಿಸಿ ಐನೂರು ಕೋಟಿ ಬಜೆಟ್ ನೀಡುವಂತೆ ಕೇಳಿದೆವು, ಆದರೆ ನಿಗಮಕ್ಕೆ ಯಾವುದೇ ಹಣ ನೀಡಲಿಲ್ಲ .ಇದರಿಂದ ನಮಗೆ ಸಾಕಷ್ಟು ಅಸಮಾಧಾನವಾಗಿದೆ ನಮ್ಮ ಕುಲಕಸುಬು ಶೇಂದಿ ಮಾರಾಟ ಮಾಡುವುದಾಗಿದ್ದು, ಸರ್ಕಾರ ಮಾತ್ರ ಸಮಸ್ಯೆಗೆ ಸ್ಪಂದಿಸಿಲ್ಲ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೂಡ ನಾನು ಬಿಜೆಪಿ ಉಪಾಧ್ಯಕ್ಷನಾಗಿದ್ದರೂ ಕೂಡ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ನಾನು ಸಹಿಸುವುದಿಲ್ಲ ಎಂದು ಹೇಳಿದರು.
ನಮ್ಮ ಸಮಾಜದ ಬೇಡಿಕೆಗಳನ್ನು ಮೇ 11 ರ ಒಳಗೆ ಈಡೇರಿಸಬೇಕು.ಬಿಸಿಲಿನ ತಾಪ ಏರಿದಂತೆ ನಮ್ಮ ನಮ್ಮ ಹೋರಾಟ ತೀವ್ರಗೊಳ್ಳುವುದು.ನಮ್ಮ ಆರ್ಯ ಈಡಿಗ ಸಮಾಜದ ಬೇಡಿಕೆಗಳು ಬಿಜೆಪಿ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಸಮಾಜವು ಅತ್ಯಂತ ಕಷ್ಟದಲ್ಲಿದೆ ಎಂದರು.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಆರ್ಯ ಈಡಿಗ ಸಮಾಜದ ಮುಖಂಡರು ತಮ್ಮ ಕುಲಕಸುಬನ್ನು ಪ್ರಾರಂಭಿಸುವಂತೆ ಒತ್ತಾಯಿಸಿ ಹಾರಕೂಡಚನ್ನಬಸವ ಶಿವಯೋಗಿಗಳ ಕಲ್ಯಾಣ ಮಂಟಪದಿಂದ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನಡೆಸಿದ ಪಾದಯಾತ್ರೆಯಲ್ಲಿ ಆರ್ಯ ಈಡಿಗ ಸಮಾಜದ ಪೂಜ್ಯ ಡಾ.ಪ್ರಣವಾನಂದ ಸ್ವಾಮೀಜಿ, ಸಮಾಜದ ಮುಖಂಡರಾದ ಚಂದ್ರಶೇಖರ್, ರಾಜೇಶ್ ಗುತ್ತೇದಾರ್, ಮಹೇಶ್, ಉದ್ದದ ಬಸ್ಸಯ್ಯ, ಗುತ್ತಿನಾರ್ ಭೀಮಯ್ಯ ಇನ್ನಿತರರು ಭಾಗವಹಿಸಿದ್ದರು.