Advertisement

BJP ಸರಕಾರ ನನ್ನ ವಿರುದ್ಧದ ಸುಳ್ಳು ಕೇಸ್‌ಗಳನ್ನು ವಾಪಸ್ ಪಡೆಯಲಿಲ್ಲ:ಗಾಲಿ ರೆಡ್ಡಿ ಆಕ್ರೋಶ

09:06 PM Nov 30, 2023 | Team Udayavani |

ಗಂಗಾವತಿ: ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಗೆ ಸಂಪೂರ್ಣ ಬಹುಮತವಿಲ್ಲದಿದ್ದರೂ ಕಷ್ಟಪಟ್ಟು ಅಧಿಕಾರ ಕೊಡಿಸಿದೆ. ನನ್ನ ಸಂಕಷ್ಟ ಕಾಲದಲ್ಲಿ ಬಿಜೆಪಿ ಹೈಕಮಾಂಡ್ ನನ್ನ ನೆರವಿಗೆ ಬರಲಿಲ್ಲ. ಕೇಸ್‌ಗಳನ್ನು ವಾಪಸ್ ಪಡೆಯಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಪ್ರಸ್ತುತ ಡಿ.ಕೆ. ಶಿವಕುಮಾರ್ ಅವರ ಬೆನ್ನಿಗೆ ನಿಂತು ಬಹುತೇಕ ಕೇಸ್‌ಗಳನ್ನು ವಾಪಸ್ ಮಾಡಿಸುತ್ತಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

Advertisement

ನಗರದಲ್ಲಿ ಆಯೋಜಿಸಿದ್ದ ಶ್ರೀಕನಕದಾಸರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ರಾಜಕೀಯ ಸ್ವಾರ್ಥ ಹಾಗೂ ಮುಖ್ಯಮಂತ್ರಿಯಾಗುವ ಆಸೆಯಿಂದ ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿ ಅಧಿಕಾರ ಪಡೆದಿದ್ದಾರೆ. ಅವರಿಗೂ ಗೊತ್ತು, ನಾನು ಏನೂ ತಪ್ಪು ಮಾಡಿಲ್ಲ ಎಂದು. ನಾನು ಸೋನಿಯಾ ಗಾಂಧಿಯವರಿಗೆ ತಲೆ ಬಾಗಿಸಲಿಲ್ಲ ಎಂಬ ಕಾರಣಕ್ಕೆ ಏನೂ ತಪ್ಪು ಮಾಡದಿದ್ದರೂ ಜೈಲಿಗೆ ಹೋಗಬೇಕಾಯಿತು. ನಂತರ ನನ್ನಿಂದ ಉಪಕಾರ ಪಡೆದು ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ಬಂದ ಬಿಜೆಪಿ , ವ್ಯಕ್ತಿಗಳು ಹಾಗೂ ಹೈಕಮಾಂಡ್ ನನ್ನ ವಿರುದ್ಧ ರಾಜ್ಯ ಸರಕಾರ ದಾಖಲಿಸಿದ್ದ ಕೇಸ್‌ಗಳನ್ನು ವಾಪಸ್ ಪಡೆಯಲಿಲ್ಲ ಎಂದು ತೀವ್ರ ಅಸಮಾಧಾನ ಹೊರ ಹಾಕಿದರು.

ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದು ನಿಷ್ಠರಾಗಿದ್ದಾರೆ. ಆದ್ದರಿಂದ ಅವರ ಮೇಲಿನ ಕೇಸ್ ಗಳನ್ನು ಸರಕಾರ ವಾಪಸ್ ಪಡೆದಿದೆ. ಕಾಂಗ್ರೆಸ್ ಪಕ್ಷ ದುಡಿದ ವ್ಯಕ್ತಿಗೆ ನೀಡಿದ ಗೌರವಾಗಿದೆ. ಈ ಬುದ್ಧಿ ಆಗ ನಮ್ಮ ಬಿಜೆಪಿಯವರಿಗೆ ಬರಲಿಲ್ಲ. ನಾನು ಹೇಗಾದರೂ ಜೈಲಿಗೆ ಹೋಗುವುದು ಅವರಿಗೆ ಬೇಕಿತ್ತು. ನನ್ನ ಜತೆ ದೇವರ ಆಶೀರ್ವಾದ ಹಾಗೂ ಜನತೆಯ ಸಹಕಾರದಿಂದ ಪುನಃ ಗಂಗಾವತಿ ಮತದಾರ ರಾಜಕೀಯ ಮರುಜೀವ ನೀಡಿದ್ದು, ಇವರ ಋಣ ತೀರಿಸುವ ಕಾರ್ಯ ಮಾಡುತ್ತೇನೆ. ಮುಂದೆಂದೂ ಬಿಜೆಪಿ ಸೇರುವ ಪ್ರಶ್ನೇಯೇ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next