Advertisement

ರಾಜ್ಯದಲ್ಲಿ ಬಿಜೆಪಿ ಸರಕಾರದ ಕೌಂಟ್‌ಡೌನ್‌ ಶುರು: ಡಿ.ಕೆ. ಶಿವಕುಮಾರ್‌

02:00 AM Dec 16, 2021 | Team Udayavani |

ವಿಧಾನ ಪರಿಷತ್‌ಗೆ ನಡೆದ ಚುನಾವಣೆಯ ಫ‌ಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್‌ಗೆ 11 ಸ್ಥಾನಗಳು ಲಭ್ಯವಾಗಿವೆ. ಈ ಬಗ್ಗೆ ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ 2023ರ ವಿಧಾನಸಭೆ ಚುನಾವಣೆಗೆ ಈ ಫ‌ಲಿತಾಂಶ ದಿಕ್ಸೂಚಿಯಾಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ.

Advertisement

 ಫಲಿತಾಂಶವನ್ನು ಹೇಗೆ ವಿಶ್ಲೇಷಿಸುತ್ತೀರಿ?
ಫಲಿತಾಂಶದಿಂದ ರಾಜ್ಯದ ಜನತೆ ಜತೆಗೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳೂ ಕಾಂಗ್ರೆಸನ್ನು ಬಯಸುತ್ತಿದ್ದಾರೆ ಎಂಬ ಸಂದೇಶ ರವಾನೆಯಾ ಗಿದೆ. 2023ರ ವಿಧಾನಸಭೆ ಚುನಾವಣೆಗೆ ಇದು ದಿಕ್ಸೂಚಿ. ಬಿಜೆಪಿ ಸರಕಾರದ ಕೌಂಟ್‌ಡೌನ್‌ ಆರಂಭವಾಗಿದೆ.

15 ಸ್ಥಾನಗಳಿಂದ 11ಕ್ಕೆ ಇಳಿದಿರುವುದು ಹಿನ್ನಡೆಯಲ್ಲವೇ?

ಹಾಗೆನ್ನಲಾಗದು. ನಾವು ವಿಪಕ್ಷದಲ್ಲಿದ್ದೇವೆ. ಬಿಜೆಪಿ ಆಡಳಿತ ಯಂತ್ರ ದುರುಪಯೋಗ ಮಾಡಿದೆ. ಅಷ್ಟಾದರೂ ನಮ್ಮ ಕಾರ್ಯಕರ್ತರು, ಮುಖಂಡರು ಹೋರಾಟ ಮಾಡಿದ್ದಾರೆ. 14 ಸ್ಥಾನದ ನಿರೀಕ್ಷೆ ಇತ್ತು; ಚಿಕ್ಕಮಗಳೂರಿನಲ್ಲಿ ನಾವು ಗೆದ್ದಂತೆಯೇ ಬಳ್ಳಾರಿ, ಕಲಬುರಗಿ, ಶಿವಮೊಗ್ಗ ಗೆಲ್ಲುವ ನಿರೀಕ್ಷೆಯಿತ್ತು. ನಮಗೆ ಸಂತೋಷವಾಗಿಲ್ಲ ಆದರೂ ಫಲಿತಾಂಶ ಸಮಾಧಾನ ತಂದಿದೆ.

ಕಾಂಗ್ರೆಸ್‌-ಬಿಜೆಪಿ ಒಳಒಪ್ಪಂದ ಮಾಡಿಕೊಂ ಡಿವೆ ಎಂದು ಎಚ್‌ಡಿಕೆ ಆರೋಪಿಸಿದ್ದಾರಲ್ಲಾ?
ಯಡಿಯೂರಪ್ಪ ಅವರು ಬಿಜೆಪಿಗೆ ಬಹು ಮತ ಬಂದರೂ ಜೆಡಿಎಸ್‌ ಅನ್ನು ನಿರ್ಲಕ್ಷé ಮಾಡುವು ದಿಲ್ಲ ಎಂದಿದ್ದಾರೆ. ಅದಕ್ಕೂ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಬೆಂಬಲದ ವಿಚಾರದಲ್ಲಿ ನೀಡಿದ್ದ ಹೇಳಿಕೆ ಗಳು ಯಾರು ಯಾರೊಂದಿಗೆ ಒಪ್ಪಂದ ಎಂಬು ದಕ್ಕೆ ಸಾಕ್ಷಿಯಾಗಿದೆ. ನಾನು ಆ ಬಗ್ಗೆ ಹೆಚ್ಚು ಮಾತನಾಡಲಾರೆ.

ಕಾಂಗ್ರೆಸ್‌ ಎಲ್ಲಿದೆ, ಬಣ ರಾಜಕೀಯದಿಂದ ನಲುಗುತ್ತಿದೆ ಎಂದು ಬಿಜೆಪಿ ನಾಯಕರು ಹೇಳುತ್ತಾರಲ್ಲಾ ?
ನಮ್ಮಲ್ಲಿ ಯಾವ ಬಣವೂ ಇಲ್ಲ. ಇರುವು ದೊಂದೇ ಬಣ ಕಾಂಗ್ರೆಸ್‌ ಬಣ. ಇಲ್ಲಿ ವ್ಯಕ್ತಿಪೂಜೆಗಿಂತ ಪಕ್ಷ ಪೂಜೆಗೆ ಆದ್ಯತೆ. ಕಾಂಗ್ರೆಸ್‌ ಎಲ್ಲಿದೆ ಎಂದು ಕೇಳುತ್ತಿದ್ದವರಿಗೆ ಪರಿಷತ್‌ ಚುನಾವಣೆ ಫಲಿತಾಂಶ ಉತ್ತರ ನೀಡಿದೆ. ಬಿಜೆಪಿ ಎಲ್ಲಿದೆ ಎಂದು ಮುಂದಿನ ದಿನಗಳಲ್ಲಿ ಹುಡುಕಬೇಕಾಗುತ್ತದೆ.

ಬಿಜೆಪಿ 6ರಿಂದ 11ಕ್ಕೆ ಸಂಖ್ಯಾಬಲ ಹೆಚ್ಚಿಸಿಕೊಂಡಿದೆಯಲ್ಲಾ?
ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಏನೆಲ್ಲಾ ಕಸರತ್ತು ಮಾಡಲಾಗಿದೆ ಎಂಬುದು ಗೊತ್ತಿದೆ. ಸಂಸದರು, ಡಜನ್‌ಗಟ್ಟಲೆ
ಶಾಸಕರು ಇರುವ ಬೆಳಗಾವಿ, ವಿಜಯಪುರ, ಧಾರವಾಡ ಕ್ಷೇತ್ರಗಳಲ್ಲಿ ಬಿಜೆಪಿ ಕಥೆ ಏನಾಗಿದೆ. ಮುಖ್ಯಮಂತ್ರಿಯವರ ತವರಿನಲ್ಲಿ ನಿರೀಕ್ಷೆಗೂ ಮೀರಿ ಮತದಾರರು ಕಾಂಗ್ರೆಸ್‌ ಬೆಂಬಲಿಸಿದ್ದಾರೆ. ಅದಕ್ಕೇ ನಾನು ಹೇಳಿದ್ದು, ಹಾನಗಲ್‌ನಲ್ಲಿ ಜನ ಬದಲಾವಣೆ ಬಯಸಿದ್ದರೆ ಪರಿಷತ್‌ ಚುನಾವಣೆಯಲ್ಲಿ ನಾಯಕರು ಬದಲಾವಣೆ ಬಯಸಿದ್ದಾರೆ. ಒಟ್ಟಾರೆ ಬದಲಾವಣೆ ಗಾಳಿ ಬೀಸುತ್ತಿದೆ.

Advertisement

ಬೆಳಗಾವಿಯಲ್ಲಿ ನೀವು ಬಿಜೆಪಿ ಅಭ್ಯರ್ಥಿ ಜತೆ ಒಪ್ಪಂದ ಮಾಡಿಕೊಂಡಿದ್ದೀರಂತೆ?
ಬಿಜೆಪಿಯನ್ನು ಸೋಲಿಸಿದವರು ಯಾರು ಎಂಬುದು ಜಗಜ್ಜಾಹೀರು. ಮುಖ್ಯಮಂತ್ರಿಯವರು ಲಖನ್‌ ಕಾಂಗ್ರೆಸ್‌ ರೆಬಲ್‌ ಕ್ಯಾಂಡಿಡೇಟ್‌ ಎಂದಿದ್ದರು. ಬೆಳಗಾವಿಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಎದುರು ಮತ್ತೂಂದು ಅಭ್ಯರ್ಥಿ ಇಳಿಸಿದರೂ ಕ್ರಮ ಕೈಗೊಳ್ಳುವ ಧೈರ್ಯ ಬಿಜೆಪಿ ತೋರಲಿಲ್ಲ. ಈಗ ಸೋತ ಮೇಲೂ ಕ್ರಮ ಇಲ್ಲ, ಬಿಜೆಪಿ ಎಷ್ಟು ದುರ್ಬಲ ಎಂಬುದಕ್ಕೆ ಇದೇ ಸಾಕ್ಷಿ.

ವಿಪಕ್ಷವಾಗಿ ಕಾಂಗ್ರೆಸ್‌ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆಯಾ?
ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ನಿರಂತರ ಬೀದಿಗಿಳಿದು ಹೋರಾಡಿದ್ದೇವೆ. ಕೊರೊನಾ ಸಂದರ್ಭ ನಮ್ಮ ಶಾಸಕರು ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಕೊರೊನಾದಿಂದ ಮೃತಪಟ್ಟವರಿಗೆ ಪರಿಹಾರ ವಿಚಾರದಲ್ಲಿಯೂ ಹೋರಾಟ ಮಾಡಿದ್ದೇವೆ. ಮೇಕೆದಾಟು ವಿಚಾರದಲ್ಲಿ ಸದ್ಯದಲ್ಲೇ ಪಾದಯಾತ್ರೆ ಮಾಡಲಿದ್ದೇವೆ.

ವಿಧಾನಮಂಡಲ ಅಧಿವೇಶನದಲ್ಲಿ ಕಾಂಗ್ರೆಸ್‌ ಕಾರ್ಯತಂತ್ರವೇನು?
ಇಲ್ಲಿ ಕಾರ್ಯತಂತ್ರ ಏನೂ ಇಲ್ಲ. ಪ್ರವಾಹ ಸಂತ್ರಸ್ತರಿಗೆ ನೆರವು, ಬೆಳೆನಷ್ಟದಿಂದ ತೊಂದರೆಗೊಳಗಾಗಿರುವ ರೈತರಿಗೆ ಪರಿಹಾರ, ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ, ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಸೇರಿ ಜನರ ಸಮಸ್ಯೆಗಳ ಬಗ್ಗೆ ಹೆಚ್ಚು ಒತ್ತು ನೀಡಲಿದ್ದೇವೆ. ಜತೆಗೆ ಬಿಟ್‌ ಕಾಯಿನ್‌, ಶೇ. 40 ಪರ್ಸೆಂಟೇಜ್‌ ಆರೋಪ ಪ್ರಸ್ತಾವಿಸಲಿದ್ದೇವೆ. ಗುತ್ತಿಗೆದಾರರ ಸಂಘವು ಪ್ರಧಾನಿಯವರಿಗೆ ಬರೆದಿರುವ ಪತ್ರ ಇಡೀ ದೇಶಕ್ಕೆ ಆಶ್ಚರ್ಯ ಮೂಡಿಸಿದೆ. ಅದೂ ಕೂಡ ನಮ್ಮ ಹೋರಾಟದ ಆದ್ಯತೆ ವಿಷಯಗಳಲ್ಲಿ ಒಂದು.

ಪಕ್ಷ ಸಂಘಟನೆಗೆ ಹೇಗೆ ನಡೆಯುತ್ತಿದೆ ?
ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಎರಡು ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಅಭಿಯಾನ ನಡೆಯುತ್ತಿದೆ. ಪ್ರತೀ ಬೂತ್‌ನಲ್ಲೂ ಡಿಜಿಟಲ್‌ ಯೂತ್‌ ನೇಮಕ ಮಾಡಿ ಸದ್ಯತ್ವ ನೋಂದಣಿ ಮಾಡಿಸಲು ಹೊಣೆಗಾರಿಕೆ ನೀಡಲಾಗಿದೆ. ಪ್ರತೀ ವಿಧಾನಸಭೆ ಕ್ಷೇತ್ರದ ಬ್ಲಾಕ್‌, ಬೂತ್‌ ಮಟ್ಟದಲ್ಲಿ ಪಕ್ಷ ಬಲ ವರ್ಧನೆಯಾಗುತ್ತಿದೆ. ಕಾರ್ಯಕರ್ತ ರಲ್ಲಿ ಮುಖಂಡರಲ್ಲಿ 2023ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು ಎಂಬ ಉತ್ಸಾಹ ಇದೆ.

ಕೆಪಿಸಿಸಿ ಪದಾಧಿಕಾರಿಗಳ ನೇಮಕ ವಿಚಾರದಲ್ಲಿ ವಿಳಂಬ ಯಾಕೆ?
ಪದಾಧಿಕಾರಿಗಳ ಪಟ್ಟಿ ಸಿದ್ಧವಾಗಿದೆ. ಯಾವುದೇ ಸಮಸ್ಯೆ ಇಲ್ಲ. ಚುನಾವಣೆ ಹಿನ್ನೆಲೆಯಲ್ಲಿ ತಡವಾಯಿತು. ದಿಲ್ಲಿಗೆ ಒಮ್ಮೆ ಹೋಗಿ ಬಂದು ಆದಷ್ಟು ಬೇಗ ಬಿಡುಗಡೆ ಮಾಡಲಾಗುವುದು.

ಬಸವರಾಜ ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯ ಮಂತ್ರಿಯಾಗಿದ್ದು, ಸಂಪುಟ ಸದಸ್ಯರೇ ಅವರ ಕುರ್ಚಿ ಆಯುಷ್ಯದ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಅಂಥ ವರ ಬಗ್ಗೆ ಕ್ರಮ ಕೈಗೊಳ್ಳುವ ಧೈರ್ಯ ತೋರುತ್ತಿಲ್ಲ. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಅವರ ಅಕ್ಕ-ಪಕ್ಕ ಇಟ್ಟು
ಕೊಂಡಿರುವವರೇ ಸಾಕು ಮುಳುಗಿಸಲು.
– ಡಿ.ಕೆ. ಶಿವಕುಮಾರ್‌

-ಎಸ್‌. ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next