ಹೊಸದಿಲ್ಲಿ: ಲೋಕಸಭೆ ಮತ್ತು ವಿಧಾ ನಸಭೆ ಚುನಾವಣೆಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ.33ರಷ್ಟು ಮೀಸಲಾತಿ ಯಲ್ಲಿ ಒಬಿಸಿ ಮಹಿಳೆಯರಿಗೆ ಒಳಮೀಸಲಾತಿ ಕಲ್ಪಿಸಬೇಕು ಎಂಬ ಕಾಂಗ್ರೆಸ್ ಆಗ್ರಹಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ತಿರುಗೇಟು ನೀಡಿದ್ದಾರೆ. “ದೇಶಕ್ಕೆ ಮೊದಲ ಒಬಿಸಿ ಪ್ರಧಾನಿ ನೀಡಿರುವುದು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ’ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ಮಸೂದೆಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ 128ನೇ ಸಂವಿಧಾನ ತಿದ್ದುಪಡಿಗೆ ಮೇಲ್ಮನೆಯಲ್ಲಿ ಸರ್ವಾನುಮತದಿಂದ ಬೆಂಬಲ ಸೂಚಿಸಬೇಕು’ ಎಂದು ಮನವಿ ಮಾಡಿ¨ªಾರೆ.
“ಕಾಂಗ್ರೆಸ್ ಅಧಿಕಾರದಲ್ಲಿ¨ªಾಗ ಒಬಿಸಿ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದೀಗ ಒಬಿಸಿಗಳ ಬಗ್ಗೆ ಮಾತನಾಡು ತ್ತಿದೆ. ದೇಶಕ್ಕೆ ಮೊದಲ ಒಬಿಸಿ ಪ್ರಧಾನಿ ನೀಡಿದ್ದು ಬಿಜೆಪಿ ಎಂಬುದನ್ನು ನೆನಪಿನ ಲ್ಲಿಟ್ಟುಕೊಳ್ಳಬೇಕು. ಲೋಕಸಭೆಯಲ್ಲಿ ಬಿಜೆಪಿ ಸಂಸದರ ಪೈಕಿ 85 ಮಂದಿ ಒಬಿಸಿಗೆ ಸೇರಿದವರು. ಜತೆಗೆ ದೇಶದಲ್ಲಿ ಶೇ.27ರಷ್ಟು ಬಿಜೆಪಿ ಶಾಸಕರು ಮತ್ತು ಶೇ.40ರಷ್ಟು ಬಿಜೆಪಿ ಎಂಎಲ್‌ಸಿಗಳು ಒಬಿಸಿಗೆ ಸೇರಿದವರಾಗಿದ್ದಾರೆ’ ಎಂದು ಜೆ.ಪಿ.ನಡ್ಡಾ ತಿಳಿಸಿದ್ದಾರೆ.
ಜುಮ್ಲಾ ಪ್ರಯತ್ನ: ಇದೊಂದು ಚುನಾ ವಣೆಯ ನಿಟ್ಟಿನಲ್ಲಿ ಜುಮ್ಲಾ ಪ್ರಯತ್ನ ಎಂದು ವಿಪಕ್ಷ ನಾಯಕ ಮಲ್ಲಿಕಾ ರ್ಜುನ ಖರ್ಗೆ ಆರೋಪಿಸಿದ್ದಾರೆ. ಕೇಂದ್ರ ಸರಕಾರದ ಈ ಹಿಂದೆ ಹಲವು ವಾಗ್ಧಾನಗಳನ್ನು ಜಾರಿ ಮಾಡಿತ್ತು. ಅವು ಗಳನ್ನು ಇನ್ನೂ ಈಡೇರಿಸಲಾಗಿಲ್ಲ ಎಂದು ಆರೋಪಿಸಿದರು. ಅದರ ಪಟ್ಟಿಗೆ ಈ ಮಸೂದೆಯೂ ಸೇರ್ಪಡೆಯಾಗಲಿದೆ ಎಂದರು.
ಆಸಕ್ತಿ ಇರಲಿಲ್ಲ: ಮಸೂದೆ ಅಂಗೀಕರಿ ಸುವ ನಿಟ್ಟಿನಲ್ಲಿ ಹಿಂದಿನ ಸರಕಾರಗಳಿಗೆ ಇಚ್ಛಾಶಕ್ತಿಯೇ ಇರಲಿಲ್ಲ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಟೀಕಿಸಿದ್ದಾರೆ. ಈಗ ಬೆಂಬಲ ಸೂಚಿಸುವ ಎಸ್‌ಪಿ ಮತ್ತು ಆರ್‌ಜೆಡಿ ನಾಯಕರು ನಾಲ್ಕು ಬಾರಿ ಮಸೂದೆಯನ್ನು ಅಂಗೀಕರಿಸುವ ಪ್ರಯತ್ನಗಳನ್ನು ತಡೆದಿದ್ದವು ಎಂದು ಆರೋಪಿಸಿದ್ದಾರೆ.
ಎಸ್‌ಪಿ ಬೆಂಬಲ: ಮಸೂದೆಗೆ ಎಸ್‌ಪಿ ಬೆಂಬಲ ಸೂಚಿಸುತ್ತದೆ ಎಂದು ಹೇಳಿದ ಸಂಸದೆ ಜಯಾ ಬಚ್ಚನ್, ಹಿಂದುಳಿದ ವರ್ಗದ ಮಹಿಳೆಯರು ಮತ್ತು ಮುಸ್ಲಿಂ ಅಲ್ಪಸಂಖ್ಯಾಕರಿಗೆ ಶೇ.15 ರಿಂದ 20 ರಷ್ಟು ಸ್ಥಾನ ಮೀಸಲಿರಿಸಬೇಕು ಎಂದು ನಮ್ಮ ಪಕ್ಷದ ಬೇಡಿಕೆ ಎಂದಿದ್ದಾರೆ. ನಮ್ಮ ಪಕ್ಷದ ನಿಲುವಿನ ಬಗ್ಗೆ ಸುಳ್ಳು ಮಾಹಿತಿ ನೀಡಲಾಗುತ್ತದೆ ಎಂದರು.