Advertisement

ರಾಜ್ಯಾದ್ಯಂತ ಬಿಜೆಪಿ ಹೋರಾಟ ಇಂದು 

06:00 AM Nov 21, 2018 | |

ಬೆಂಗಳೂರು: ರಾಜ್ಯದ ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸದೆ ಕಡೆಗಣಿಸಿರುವುದು ಹಾಗೂ ಹೋರಾಟ ನಿರತ ಮಹಿಳೆಗೆ ಮುಖ್ಯಮಂತ್ರಿಗಳು ಅಪಮಾನ ಮಾಡಿದ್ದನ್ನು ಖಂಡಿಸಿ ಬಿಜೆಪಿ ವತಿಯಿಂದ ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ .ಯಡಿಯೂರಪ್ಪ ಹೇಳಿದರು. 

Advertisement

ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟನಿರತ ರೈತ ಸಮುದಾಯದ ಬಗ್ಗೆ ಮುಖ್ಯಮಂತ್ರಿ ಅವಹೇಳನಕಾರಿಯಾಗಿ ಮಾತನಾಡಿರುವುದು ಅಕ್ಷಮ್ಯ. ಹೋರಾಟನಿರತ ಮಹಿಳೆ ನಾಲ್ಕು ವರ್ಷ ಎಲ್ಲಿ ಮಲಗಿದ್ದರು ಎಂದು ಕೇಳಿರುವುದು ನಾಡಿನ ಮಹಿಳಾ ಸಮೂಹಕ್ಕೆ ಮಾಡಿದ ಅಪಮಾನ. ಈ ಬಗ್ಗೆ ಕ್ಷಮೆಯನ್ನೂ ಯಾಚಿಸದೆ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಇದರ ವಿರುದ್ಧ ಬುಧವಾರ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಜೆಡಿಎಸ್‌ ಕೋರ್‌ ಕಮಿಟಿ ಎಂದರೆ ಅಪ್ಪ, ಮಕ್ಕಳು ಕುಟುಂಬದವರು. ಕುಮಾರಸ್ವಾಮಿಯವರಿಗೆ ಬಿಜೆಪಿ ಕೋರ್‌ ಕಮಿಟಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನೀನು ಎಲ್ಲಿ ಮಲಗಿದ್ದೀಯಾ ಎಂಬುದರ ಅರ್ಥವನ್ನು ಸಾಮಾನ್ಯ ನೀತಿವಂತ ನಾಗರಿಕನೂ
ಹೇಳುತ್ತಾನೆ. ಅದಕ್ಕೆ ದಿನವಿಡೀ ಕುಮಾರಸ್ವಾಮಿಯವರು ಸ್ಪಷ್ಟನೆ ನೀಡುತ್ತಾರೆ. ನಾಲಾಯಕ್‌ ಕೆಟ್ಟ ಪದವಲ್ಲ. ಹುದ್ದೆಗೆ ಲಾಯಕ್‌ ಅಲ್ಲ ಎಂದರ್ಥವಷ್ಟೆ. ಹೋರಾಟಗಾರ್ತಿ ಹೆಣ್ಣು ಮಗಳಿಗೆ ಹಾಗನ್ನಿಸಿದ್ದರೆ ಅಪರಾಧವೇ ಎಂದು ಪ್ರಶ್ನಿಸಿದರು. ಮಹಾರಾಷ್ಟ್ರ ಸರ್ಕಾರವು ಕಬ್ಬಿಗೆ 2,900ರೂ. ಎಫ್ಆರ್‌ಪಿ ಜತೆಗೆ 200 ರೂ. ಬೆಂಬಲ ಬೆಲೆ ನೀಡುತ್ತಿದೆ. ದೇವೇಗೌಡರು, ಎಚ್‌ .ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ಮಾತೆತ್ತಿದ್ದರೆ ಪ್ರಧಾನಿ ಮೋದಿಯವರನ್ನು ಟೀಕಿಸುತ್ತಾರೆ. ಗುಜರಾತ್‌ನಲ್ಲಿ ಕಬ್ಬಿಗೆ 3,225 ರೂ.ನಿಂದ 4,200 ರೂ.ವರೆಗೆ ಎಫ್ಆರ್‌ಪಿ ಕೊಡುತ್ತಿದ್ದು, ಅದನ್ನು ನೋಡಿ ಬಂದು ನಂತರ ಮಾತನಾಡಲಿ ಎಂದು ಕುಟುಕಿದರು.

ಹಾವೇರಿ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರ ಕುಟುಂಬದವರಿಗೆ ಉದ್ಯೋಗ ಕೊಡಿಸಿ ನೆಮ್ಮದಿಯ ಜೀವನ ಕಲ್ಪಿಸಿದ್ದೇನೆ. ಕೃಷಿ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್‌, ಭೂ ಚೇತನ ಯೋಜನೆ ಜಾರಿಗೊಳಿಸಿ ಪ್ರತ್ಯೇಕ ಕೃಷಿ ಬಜೆಟ್‌ ಮಂಡಿಸಿದ್ದೇನೆ. ರೈತರು,
ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಿ ಅಪ್ಪ ಮಕ್ಕಳು ರಾಜಕೀಯ ದೊಂಬರಾಟ ನಡೆಸಲು ಮುಂದಾಗಿರುವುದನ್ನು ಜನ ಸಹಿಸುವುದಿಲ್ಲ ಎಂದರು. 

ರೈತರ ಹೋರಾಟದ ಹಿಂದೆ ಬಿಜೆಪಿ ಪಿತೂರಿ ಇದೆ
ಎಂಬುದಾಗಿ ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ರಾಜಕೀಯ ದೊಂಬರಾಟ ಮಾಡಿಕೊಂಡು ಸಾಲ ಮನ್ನಾ ಹೆಸರಿನಲ್ಲಿ ಅಭಿವೃದಿಟಛಿ ಕಾರ್ಯವನ್ನು ಸ್ಥಗಿತಗೊಳಿಸಿ ಕಬ್ಬು ಬೆಳೆಗಾರರೊಂದಿಗೆ ಸಭೆಯನ್ನೂ ನಡೆಸದೆ ಹೆಣ್ಣು ಮಗಳ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ. ನೊಂದವರ ಪರವಾಗಿ ಪ್ರತಿಪಕ್ಷ ಇರುತ್ತದೆ ಎಂದು ಹೇಳಿದರು.

Advertisement

ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್‌, ಶಾಸಕರಾದ ಅರವಿಂದ ಲಿಂಬಾವಳಿ, ಎಸ್‌.ಆರ್‌.ವಿಶ್ವನಾಥ್‌, ಡಾ.ಸಿ.ಎನ್‌. ಅಶ್ವತ್ಥ ನಾರಾಯಣ, ಲೆಹರ್‌ ಸಿಂಗ್‌, ತೇಜಸ್ವಿನಿ ಗೌಡ, ಐಎಎಸ್‌ ನಿವೃತ್ತ ಅಧಿಕಾರಿ ಕೆ.ಶಿವರಾಮ್‌ ಉಪಸ್ಥಿತರಿದ್ದರು.

ಯಾರೇ ಆಗಿರಲಿ ಬಾಕಿ ಪಾವತಿಸಲಿ ಅಧಿವೇಶನದಲ್ಲಿ ಸಾಲ ಮನ್ನಾ, ರೈತರಿಗೆ ಮಾಡಿರುವ ದ್ರೋಹ, ಬರ ನಿರ್ವಹಣೆ
ವಿಚಾರಗಳ ಬಗ್ಗೆ ಚರ್ಚಿಸಲಾಗುವುದು. ಸಕ್ಕರೆ ಕಾರ್ಖಾನೆ ಮಾಲೀಕರು ಬಿಜೆಪಿ ಶಾಸಕರೇ ಆಗಿರಲಿ, ಯಾರೇ ಆಗಿರಲಿ ಕೂಡಲೇ ರೈತರಿಗೆ ಬಾಕಿ ಹಣ ಪಾವತಿ ಮಾಡಲಿ. ಇದರಲ್ಲಿ ಪಕ್ಷದ ವಿಚಾರವೇ ಇಲ್ಲ. ಎಲ್ಲ ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ನೆರವಿಗೆ ಬರಬೇಕು ಎಂದು ಯಡಿಯೂರಪ್ಪ ಹೇಳಿದರು. 

ವಿಧಾನಸಭೆ ಪ್ರತಿಪಕ್ಷ ಉಪನಾಯಕ ಗೋವಿಂದ ಕಾರಜೋಳ ಮಾತನಾಡಿ, 2013ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಬ್ಬು ಬೆಳೆಗಾರರಿಗೆ ಅನುಕೂಲಕ್ಕಾಗಿ ಎಸ್‌ಎಪಿ ಕಾನೂನು ಜಾರಿಗೊಳಿಸಲಾಗಿತ್ತು. ಆದರೆ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಆ ಕಾನೂನಿಗೆ ತಿದ್ದುಪಡಿ ತಂದು ಸಕ್ಕರೆ ಸಚಿವರ ಅಧ್ಯಕ್ಷತೆಯ ಸಮಿತಿ ಬದಲಿಗೆ ಕಬ್ಬು ನಿರ್ದೇಶನಾಲಯದ ಆಯುಕ್ತರ ಅಧ್ಯಕ್ಷರ ತಜ್ಞರ ಸಮಿತಿಗೆ ಅವಕಾಶ ಕಲ್ಪಿಸಿತು. ಆ ಸಮಿತಿ ಐದು ವರ್ಷದಲ್ಲಿ ಒಂದೂ ಸಭೆ ನಡೆಸಿಲ್ಲ, ಒಮ್ಮೆಯೂ ದರ ನಿಗದಿಪಡಿಸಿಲ್ಲ. ಕೂಡಲೇ ಹಳೆಯ ಕಾಯ್ದೆ ಜಾರಿಗೆ ಮುಂದಾಗಬೇಕೆಂದು ಒತ್ತಾಯಿಸಿದರು.

ಸರ್ಕಾರ ಕೈ ಕಟ್ಟಿ ಕುಳಿತಿಲ್ಲ
ಬೆಂಗಳೂರು: ಕಬ್ಬು ಬೆಳೆಗಾರರ ಬಾಕಿ ಪಾವತಿ ಸಂಬಂಧ ರಾಜ್ಯ ಸರ್ಕಾರ ಕೈ ಕಟ್ಟಿ ಕುಳಿತಿಲ್ಲ. 2 ಸಾವಿರ ಕೋಟಿ ರೂ. ಬಾಕಿ ಇದ್ದ ಮೊತ್ತ ಇದೀಗ 38 ಕೋಟಿ ರೂ. ಆಗಿದೆ ಎಂದು ಸಕ್ಕರೆ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಆವರು, ರೈತರಿಗೆ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಇನ್ನೂ ಹೆಚ್ಚಿನ ಹಣ ಬಾಕಿ ಇದೆ ಎಂಬ ಬಗ್ಗೆ ರೈತರು ಖಚಿತ ಮಾಹಿತಿ ನೀಡಿದರೆ ವಸೂಲಿ ಮಾಡಿಸಿಕೊಡಲಾಗುವುದು ಎಂದರು. ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ. ನಾನು ಯಾರ ಜತೆಯೂ ಸಂಪರ್ಕದಲ್ಲಿ ಇಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಬೇಡಿ. ಸೋಮವಾರ ಶುಗರ್‌ ಕಂಟ್ರೋಲ್‌ ಬೋರ್ಡ್‌ ಸಭೆ ನಡೆಸಿದ್ದೇನೆ. ಕಬ್ಬಿಗೆ
ಈಗ 2,750 ರೂ. ಕೇಂದ್ರ ನಿಗದಿ ಮಾಡಿದೆ. ರಾಜ್ಯ ಸರ್ಕಾರ ಈಗ ಕಬ್ಬಿನ ಇಳುವರಿ ಹಾಗೂ ಉಪ ಉತ್ಪನ್ನಗಳನ್ನು ಆಧರಿಸಿ ಸ್ಥಳೀಯ ದರವನ್ನು ನಿಗದಿ ಮಾಡುತ್ತದೆ. ಈ ಬಗ್ಗೆ ಈಗಾಗಲೇ ಪ್ರಸ್ತಾವನೆ ಸಿದ್ದಪಡಿಸಿದ್ದು, ಸಕ್ಕರೆ ಕಾರ್ಖಾನೆಗಳ ಅಭಿಪ್ರಾಯ ಕೇಳಿದ್ದೇವೆ ಎಂದು ತಿಳಿಸಿದರು.

29ಕ್ಕೆ ಕೋರ್‌ ಕಮಿಟಿ ಸಭೆ
ಬೆಂಗಳೂರು: ಇತ್ತೀಚೆಗೆ ನಡೆದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭೆ ಉಪಚುನಾವಣಾ ಫ‌ಲಿತಾಂಶ ಕುರಿತು ಅವಲೋಕನ ನಡೆಸಲು ಹಾಗೂ ಇತರ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ನ.29ರಂದು ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಲಿದೆ. ಮಂಗಳವಾರ ನಡೆದ ಸಭೆಯಲ್ಲಿ ಈ ಬಗ್ಗೆ ಮಾತುಕತೆ ನಡೆಯಿತು. ಅನಂತ ಕುಮಾರ್‌ ಅವರಿಗೆ ನ.29ರಂದು ಸಂಜೆ ಬಸವನಗುಡಿಯ ನ್ಯಾಷನಲ್‌ ಹೈಸ್ಕೂಲ್‌ ಮೈದಾನದಲ್ಲಿ ಸಾರ್ವಜನಿಕ ಶ್ರದಾಟಛಿಂಜಲಿ ಸಭೆ ನಡೆಸುವ ಬಗ್ಗೆಯೂ ಚರ್ಚಿಸಲಾಗಿದೆ.
ಎಲ್ಲ ಪಕ್ಷ ಹಾಗೂ ಕ್ಷೇತ್ರದವರನ್ನು ಒಟ್ಟುಗೂಡಿಸಿ ಶ್ರದ್ದಾಲಿ ಸಭೆ ಆಯೋಜಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next