Advertisement

ಮೇಘಾಲಯ ಸಿಎಂ ಎದುರು ಮಾಜಿ ಉಗ್ರಗಾಮಿ ನಾಯಕನನ್ನು ಕಣಕ್ಕಿಳಿಸಿದ ಬಿಜೆಪಿ

05:53 PM Feb 02, 2023 | Team Udayavani |

ಶಿಲ್ಲಾಂಗ್ : ದಕ್ಷಿಣ ತುರಾ ಕ್ಷೇತ್ರದಲ್ಲಿ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ವಿರುದ್ಧ ಬಿಜೆಪಿ ತನ್ನ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಉಗ್ರಗಾಮಿ ನಾಯಕ ಬರ್ನಾರ್ಡ್ ಎನ್ ಮರಕ್ ಅವರನ್ನು ತನ್ನ ಅಧಿಕೃತ ಅಭ್ಯರ್ಥಿ ಎಂದು ಗುರುವಾರ ಘೋಷಿಸಿದೆ.

Advertisement

ಬಿಜೆಪಿಯು ಮೇಘಾಲಯ ವಿಧಾನಸಭೆಯ ಎಲ್ಲಾ 60 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಮತ್ತು ಗುರುವಾರ ತನ್ನ ಎಲ್ಲಾ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ.

ಕಳೆದ ತಿಂಗಳು ಕಾನ್ರಾಡ್ ಸಂಗ್ಮಾ ನೇತೃತ್ವದ ಆಡಳಿತಾರೂಢ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್‌ನಿಂದ ಬೇರ್ಪಟ್ಟು ರಾಜ್ಯ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿತ್ತು.

ಕಾನ್ರಾಡ್ ಸಂಗ್ಮಾ ವಿರುದ್ಧ ದನಿಯೆತ್ತಿದ್ದ ಬರ್ನಾರ್ಡ್ ಮರಾಕ್ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು, ತುರಾದಲ್ಲಿರುವ ಅವರ ಫಾರ್ಮ್‌ಹೌಸ್‌ನಲ್ಲಿ ಅನೈತಿಕ ಕಳ್ಳಸಾಗಣೆ ಮತ್ತು ವೇಶ್ಯಾಗೃಹವನ್ನು ನಡೆಸುತ್ತಿರುವ ಆರೋಪ ಹೊರಿಸಲಾಗಿತ್ತು. ಗಾರೋ ಬುಡಕಟ್ಟು ಜನಾಂಗದವರಿಗೆ ಪ್ರತ್ಯೇಕ ರಾಜ್ಯವನ್ನು ರೂಪಿಸಲು ಸಶಸ್ತ್ರ ಉಗ್ರಗಾಮಿ ಗುಂಪು ಅಚಿಕ್ ರಾಷ್ಟ್ರೀಯ ಸ್ವಯಂಸೇವಕ ಮಂಡಳಿ (ANVC) ಗೆ ಸೇರಿದ್ದರು. 2014 ರಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಅವರ ಗುಂಪು ANVC (B) ಅನ್ನು ವಿಸರ್ಜಿಸಿದ್ದರು. ತುರಾ ಜಿಲ್ಲಾ ಪರಿಷತ್ ಸದಸ್ಯರೂ ಆಗಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡಿರುವವರಲ್ಲಿ ಪಕ್ಷದ ಇಬ್ಬರು ಹಾಲಿ ಶಾಸಕರಾದ ಸಂಬೋರ್ ಶುಲ್ಲೈ ಮತ್ತು ಎ ಎಲ್ ಹೆಕ್ ಅವರು ನಗರದ ದಕ್ಷಿಣ ಶಿಲ್ಲಾಂಗ್ ಮತ್ತು ಪಿಂಥೋರುಖ್ರಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.

Advertisement

ಮಾಜಿ ಸ್ಪೀಕರ್‌ಗಳಾದ ಕಾಂಗ್ರೆಸ್‌ನ ಇ ಡಿ ಮರಕ್ ಮತ್ತು ಎನ್‌ಪಿಪಿಯ ಮಾರ್ಟಿನ್ ಡ್ಯಾಂಗೋ ಅವರ ಹೆಸರುಗಳು ಕ್ರಮವಾಗಿ ಖಾರ್ಕುಟ್ಟಾ ಮತ್ತು ರಾಣಿಕೋರ್‌ನಿಂದ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಕಳೆದ ಕೆಲವು ತಿಂಗಳ ಹಿಂದೆ ಬೇರೆ ಪಕ್ಷಗಳನ್ನು ತೊರೆದು ಬಿಜೆಪಿ ಸೇರಿದ ಹಾಲಿ ಶಾಸಕರಿಗೂ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇವರಲ್ಲಿ ಎಚ್‌ಎಂ ಶಾಂಗ್‌ಪ್ಲಿಯಾಂಗ್, ಫೆರ್ಲಿನ್ ಸಂಗ್ಮಾ, ಬೆನೆಡಿಕ್ಟ್ ಮರಾಕ್ ಮತ್ತು ಸ್ಯಾಮ್ಯುಯೆಲ್ ಎಂ ಸಂಗ್ಮಾ ಅವರು ಕ್ರಮವಾಗಿ ಮೌಸಿನ್‌ರಾಮ್, ಸೆಲ್ಸೆಲ್ಲಾ, ರಾಕ್ಸಾಮ್ಗ್ರೆ ಮತ್ತು ಬಾಗ್ಮಾರಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next