Advertisement

LDF ; ಸುರೇಶ್ ಗೋಪಿಯವರನ್ನು ಹೊಗಳಿದ್ದ ತ್ರಿಶೂರ್ ಮೇಯರ್ ಬೆಂಬಲಕ್ಕೆ ನಿಂತ ಬಿಜೆಪಿ

07:41 PM Jul 07, 2024 | Team Udayavani |

ತ್ರಿಶೂರ್(ಕೇರಳ): ಕೇಂದ್ರ ಸಚಿವ, ಬಿಜೆಪಿ ಸಂಸದ ಸುರೇಶ್ ಗೋಪಿ ಅವರನ್ನು ಹೊಗಳಿ ಸಂಕಷ್ಟಕ್ಕೆ ಸಿಲುಕಿರುವ ತ್ರಿಶೂರ್ ಕಾರ್ಪೊರೇಷನ್ ಮೇಯರ್ ಎಂ.ಕೆ. ವರ್ಗೀಸ್ ಅವರ ಪರ ಕೇರಳ ಬಿಜೆಪಿ ನಿಂತಿದ್ದು, ರಾಜಕೀಯವನ್ನು ಲೆಕ್ಕಿಸದೆ ಅಭಿವೃದ್ಧಿಗಾಗಿ ಶ್ರಮಿಸುವ ಯಾರಿಗಾದರೂ ಪಕ್ಷ ಬೆಂಬಲ ನೀಡಲಿದೆ ಎಂದು ಹೇಳಿದೆ.

Advertisement

ಕೇಂದ್ರ ಸಚಿವರಾಗಿ ಗೋಪಿ ಅವರು ತ್ರಿಶೂರ್‌ನ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ವಾಸ್ತವ ವಿಚಾರ. ಸತ್ಯ ಹೇಳಿದ್ದಕ್ಕಾಗಿ ಮೇಯರ್‌ರನ್ನು ಏಕೆ ಗುರಿಮಾಡಲಾಗುತ್ತಿದೆ. ರಾಜಕೀಯ ವಿರೋಧಿಗಳು ಎಲ್ಲದರಲ್ಲೂ ರಾಜಕೀಯ ಬೆರೆಸುತ್ತಿದ್ದಾರೆ. ಅವರಿಗೆ ಬೇರೆ ಕೆಲವು ಹಿಡನ್ ಅಜೆಂಡಾ ಇದೆ. ಮೇಯರ್ ವಿರುದ್ಧ ಕೆಲವು ಸಮಸ್ಯೆಗಳನ್ನು ಹೊಂದಿರಬಹುದು. ಆ ಆರೋಪವನ್ನು ಸುರೇಶ್ ಗೋಪಿಯವರ ಮೇಲೆ ಹಾಕುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (LDF)-ಆಡಳಿತ ನಡೆಸುತ್ತಿರುವ ತ್ರಿಶೂರ್ ಕಾರ್ಪೊರೇಷನ್‌ನ ಮೇಯರ್ ವರ್ಗೀಸ್ ಅವರು ಸುರೇಶ್ ಗೋಪಿ ಅವರಿ ಗೆ ತ್ರಿಶೂರ್ ಕ್ಷೇತ್ರ ಮತ್ತು ಕೇರಳದ ಅಭಿವೃದ್ಧಿಗೆ ದೂರದೃಷ್ಟಿ ಇದೆ. ಸಂಸದರು ಅಥವಾ ಸಚಿವರ ಅಭಿವೃದ್ಧಿಗೆ ರಾಜಕೀಯದ ಹೊರತಾಗಿ ಜತೆಯಾಗಿ ನಿಲ್ಲುವುದು ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿ ಎಂದಿದ್ದರು.

ಬಿಜೆಪಿ ಸೇರುತ್ತೀರಾ ಎಂದು ಸುದ್ದಿಗಾರರು ಕೇಳಿದಾಗ ಅವರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಏಪ್ರಿಲ್ 26 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಸುರೇಶ್ ಗೋಪಿ ಅವರನ್ನು ಬೆಂಬಲಿಸಿದ ಆರೋಪದ ಮೇಲೆ ವರ್ಗೀಸ್ ಈ ಹಿಂದೆ ಎಡಪಕ್ಷಗಳ ಕಾರ್ಯಕರ್ತರಿಂದ ಹಲ್ಲೆಗೂ ಒಳಗಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next