Advertisement

ಹೆಚ್ಚು ಸ್ಥಾನ ಗೆದ್ದವರೇ ಅಧಿಕಾರ ನಡೆಸಬೇಕು;ಮಹಾರಾಷ್ಟ್ರದಲ್ಲಿ ಅದೇ ಆಗಿದೆ: ಬಿ.ಎಲ್. ಸಂತೋಷ್

09:49 AM Nov 24, 2019 | Hari Prasad |

ಚಿಕ್ಕಬಳ್ಳಾಪುರ: ಪ್ರಜಾಪ್ರಭುತ್ವದಲ್ಲಿ ಯಾವ ಪಕ್ಷಕ್ಕೆ ಚುನಾವಣೆಯಲ್ಲಿ ಹೆಚ್ಚು ಸೀಟು ಬರುತ್ತದೋ ಆ ಪಕ್ಷಕ್ಕೆ ಅಧಿಕಾರ ಸಿಗಬೇಕು. ಅದು ಮಹಾರಾಷ್ಟ್ರದಲ್ಲಿ ಈಡೇರಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

Advertisement

ಮಹಾರಾಷ್ಟ್ರದಲ್ಲಿ ಎನ್.ಸಿ.ಪಿ. ಪಕ್ಷದ ಬೆಂಬಲದೊಂದಿಗೆ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗುವುದರೊಂದಿಗೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಕೆಲವರು ಕಳೆದ ಹಲವು ದಿನಗಳಿಂದ ಮಾಡಿದ ಪ್ರಯತ್ನ ವ್ಯರ್ಥವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ನಡೆಸಬೇಕಿರುವುದು ಅತಿ ದೊಡ್ಡ ಪಕ್ಷದ ಜವಾಬ್ದಾರಿ ಎಂದು ಸಂತೋಷ್ ಅವರು ತಿಳಿಸಿದರು.

ಜನರ ಅರ್ಶೀವಾದವಿದ್ದರೆ ಅಧಿಕಾರಕ್ಕೇರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಇದಕ್ಕೆ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೇರಿರುವುದು ಹಾಗೂ ಈಗ ಮಹಾರಾಷ್ಟ್ರದಲ್ಲಿ ಫಡ್ನವೀಸ್ ಸರಕಾರ ಅಸ್ತಿತ್ವಕ್ಕೆ ಬಂದಿರುವುದೇ ಸಾಕ್ಷಿ ಎಂದು ಬಿ.ಎಲ್.ಸಂತೋಷ್ ಅವರು ಹೇಳಿದರು.

ಮಹಾರಾಷ್ಟ್ರ ರಾಜಕೀಯ ಬೆಳವಣೆಗೆ ಕಾಂಗ್ರೆಸ್, ಮತ್ತಿತರ ಪಕ್ಷಗಳಿಗೆ ತಕ್ಕ ಪಾಠ ಕಲಿಸಿವೆ ಎಂದರು. ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಆನ್ಯಾಯವೇ ನೀತಿ, ಭ್ರಷ್ಟಾಚಾರವೇ ಸಿದ್ದಾಂತ ಎಂದು ಸಂತೋಷ್ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next