Advertisement
ಮಾಧ್ಯಮಗಳೊಂದಿಗೆ ಮಾತನಾಡಿತ್ತಿದ್ದ ವೇಳೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಬಹುದೆಂದು ನೀವು ಏನಾದರೂ ಊಹಿಸಿದ್ದೀರಾ ಎಂದು ಪ್ರಶ್ನಿಸಲಾಗಿದೆ. ಈ ವೇಳೆ ಪ್ರತಿಕ್ರಿಯಿಸಿ ನಿತೀಶ್, ಖಂಡಿತವಾಗಿಯೂ ಹೌದು! ನಾವೆಲ್ಲರೂ ದೇಶದ ಒಳಿತಿಗಾಗಿ ಕೈಜೋಡಿಸಿ ಒಕ್ಕೂಟ ಕಟ್ಟಿದ್ದೇವೆ. ಆದರೆ, ಬಿಜೆಪಿಯ ಜತೆಗೆ ಈಗಿರುವ ಕೆಲ ಪಕ್ಷಗಳು ಭಯದಿಂದ ಮಾತ್ರವೇ ಅವರೊಟ್ಟಿಗಿವೆ. ಒಂದು ಬಾರಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಆ ಪಕ್ಷಗಳೂ ಈ ಕಡೆಗೆ ಬರಲಿವೆ ಎಂಬುದು ಬಿಜೆಪಿಗೆ ತಿಳಿದಿಲ್ಲ ಎಂದಿದ್ದಾರೆ.
ಸಂಸತ್‌ನಲ್ಲಿ ರಾಹುಲ್ ಫ್ಲೈಯಿಂಗ್ ಕಿಸ್ ನೀಡಿದ್ದರೆಂದು ಸಚಿವೆ ಸ್ಮತಿ ಇರಾನಿ ಆರೋಪಿಸಿ, ಈ ವಿಚಾರ ವಿವಾದಕ್ಕೆ ಗುರಿಯಾಗಿರುವ ನಡುವೆಯೇ, ಬಿಹಾರದ ಶಾಸಕಿಯೊಬ್ಬರು ರಾಹುಲ್ ಅವರನ್ನು ಸಮರ್ಥಿಸಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಶಾಸಕಿ ನೀತು ಸಿಂಗ್, ವಿಡಿಯೊ ಒಂದರಲ್ಲಿ ರಾಹುಲ್ ಗಾಂಧಿ ಅವರಿಗೆ ಯುವತಿಯರಿಗೆ ಬರವಿಲ್ಲ, ಫ್ಲೈಯಿಂಗ್ ಕಿಸ್ ನೀಡುವುದಾದರೂ ಯುವತಿಯರಿಗೆ ನೀಡುತ್ತಿದ್ದರು. ಆ 50 ವರ್ಷದ ಹೆಂಗಸಿಗಲ್ಲ, ಇದೆಲ್ಲವೂ ಆಧಾರವಿಲ್ಲದ ಆರೋಪ ಎಂದಿದ್ದಾರೆ. ಈ ಬಗ್ಗೆ ಬಿಜೆಪಿಗರು ಕಿಡಿ ಕಾರಿ, ರಾಹುಲ್ ದುಷ್ಕೃತ್ಯವನ್ನೂ ಸ್ವತಃ ಪಕ್ಷದ ಮಹಿಳೆಯರೇ ಸಮರ್ಥಿಸಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.