ಕೊಚ್ಚಿ/ಹೊಸದಿಲ್ಲಿ: ಕೇರಳದ ಚಿನ್ನ ಸಾಗಣೆ ಕೇಸ್‌ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಕಿಂಗ್‌ಪಿನ್ ಎಂದು ಕೇಂದ್ರ ಸಚಿವರಾದ ರಾಜೀವ್ ಚಂದ್ರ ಶೇಖರ್ ಮತ್ತು ವಿ.ಮುರಳೀಧರನ್ ಆರೋಪಿಸಿದ್ದಾರೆ.
ನವದಿಲ್ಲಿಯಲ್ಲಿ ಮಾತನಾಡಿದ ಇಬ್ಬರು ಸಚಿವರು, ಸ್ವಪ್ನಾ ಸುರೇಶ್ ಮಾಡಿದ ಆರೋಪ ಗಂಭೀರವಾಗಿದೆ ಎಂದರು.
ಇತ್ತೀಚೆಗೆ ರಾಜ್ಯ ದಲ್ಲಿ ಉಂಟಾಗಿರುವ ಬೆಳವಣಿಗೆಗಳು ಗಂಭೀರ ವಾದದ್ದು ಮತ್ತು ಅವುಗಳು ನೇರವಾಗಿ ಸಿಎಂ ಪಿಣರಾಯಿ ಅವರತ್ತಲೇ ಬೆರಳು ಮಾಡುತ್ತಿವೆ. 2020ರಲ್ಲಿ ಪಿಣರಾಯಿ ಅವರೇ ಈ ಬಗ್ಗೆ ಉನ್ನತಮಟ್ಟದ ತನಿಖೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿ ದ್ದರು ಎಂದು ನೆನಪಿಸಿದ್ದಾರೆ. ಆ ದಿನದಿಂದ ಇದುವರೆಗೆ ಪ್ರಕರಣವನ್ನು ಮುಚ್ಚಿ ಹಾಕಲು ಕೇರಳ ಮುಖ್ಯಮಂತ್ರಿ ಪ್ರಯತ್ನ ಮಾಡು ತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೈಕೋರ್ಟ್‌ಗೆ ಮೇಲ್ಮನವಿ: ಅಕ್ರಮ ಚಿನ್ನ ಸಾಗಣೆ ಆರೋಪದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಅವರು ಬಿಡುಗಡೆ ಮಾಡಿದ್ದ ಧ್ವನಿ ಮುದ್ರಿಕೆಯನ್ನು ಕೇರಳಾದ್ಯಂತ ಗಲಭೆ ನಡೆಸುವ ಸಂಚು ಹೂಡಿದ್ದರು ಎಂಬ ಆರೋಪವನ್ನು ಅವರ ಮೇಲೆ ಹೊರಿಸಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ತಮ್ಮನ್ನು ವಿನಾ ಕಾರಣ ಸಿಲುಕಿಸಲಾಗಿದೆ ಎಂದೂ ಅರ್ಜಿಯಲ್ಲಿ ಆರೋಪಿಸಿದ್ದಾರೆ.