Advertisement

ಬಿಜೆಪಿಗೆ ಮರ್ಮಾಘಾತ! ಯೋಗಿ ಭದ್ರ ಕೋಟೆಯೂ ಕೈ ತಪ್ಪಿತು

03:35 PM Mar 14, 2018 | Team Udayavani |

ಲಕ್ನೋ: ಆಡಳಿತಾರೂಢ ಬಿಜೆಪಿಗೆ  3 ಲೋಕಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆ ಭಾರೀ ಮುಖಭಂಗಕ್ಕೀಡು ಮಾಡಿದೆ. ಬುಧವಾರ ಪ್ರಕಟವಾದ ಫ‌ಲಿತಾಂಶದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಪ್ರತಿನಿಧಿಸುತ್ತಿದ್ದ ಗೋರಖ್‌ಪುರ್‌ ಮತ್ತು ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಪ್ರತಿನಿಧಿಸುತ್ತಿದ್ದ ಫ‌ೂಲ್ಪುರ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಿನತ್ತ ಮುಖ ಮಾಡಿದ್ದಾರೆ.

Advertisement

ಗೋರಖ್‌ಪುರ್‌ ಕ್ಷೇತ್ರ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು, ಇಲ್ಲಿ  ಬಿಜೆಪಿ ಅಭ್ಯರ್ಥಿ ಉಪೇಂದ್ರ ದತ್‌ ಶುಕ್ಲಾ ಅವರನ್ನು ಎಸ್‌ಪಿ ಅಭ್ಯರ್ಥಿ ಪ್ರತಾಪ್‌ ಸಿಂಗ್‌ ಪಟೇಲ್‌ ಅವರು 20 ನೇ ಸುತ್ತಿನಲ್ಲಿ 30,000ಕ್ಕೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 

ಗೋರಖ್‌ಪುರ ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯಾಗಿದ್ದು ಮಹಂತ್‌ ಅವೈದ್ಯದನಾತ್‌ ಅವರು ಪ್ರತಿನಿಧಿಸಿದ್ದರು. ಆ ಕ್ಷೇತ್ರದಲ್ಲಿ 1998 ರಲ್ಲಿ ಆದಿತ್ಯನಾಥ್‌ ಅವರು ಗೆಲುವು ಸಾಧಿಸಿ ಇದುವರೆಗೆ ಬೇರೆ ಪಕ್ಷಗಳಿಗೆ ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಸೋಲು ಅವರಿಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ  ಮಾಡಿದೆ.

ಬಿಎಸ್‌ಪಿ ಮಹತ್ವದ ಪಾತ್ರ 
ಗೋರಖ್‌ಪುರ್‌ ಮತ್ತು ಫ‌ೂಲ್‌ಪುರ್‌ನಲ್ಲಿ ಎಸ್‌ಪಿ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಬಿಎಸ್‌ಪಿ ಪಾತ್ರವೂ ದೊಡ್ಡದು. ಬಿಎಸ್‌ಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಎಸ್‌ಪಿ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ನೀಡಿತ್ತು, ಇದು ಮತ ವಿಭಜನೆಗಳನ್ನು ತಡೆದ ಕಾರಣ ಬಿಜೆಪಿಯ ಸೋಲಿಗೆ ಕಾರಣವಾಗಿದೆ. 

ಆರ್‌ಜೆಡಿ ಗೆಲುವು 

Advertisement

ಬಿಹಾರದ ಅರಾರಿಯಾ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ-ಜೆಡಿಯು ಮೈತ್ರಿ ಅಭ್ಯರ್ಥಿ ಸೋಲಿನತ್ತ ಮುಖ ಮಾಡಿದ್ದು, ವಿಪಕ್ಷ ಆರ್‌ಜೆಡಿ ಅಭ್ಯರ್ಥಿ ಗೆಲುವಿನತ್ತ ಮುಖ ಮಾಡಿದ್ದಾರೆ.

ಬಿಹಾರದ ವಿಧಾನಸಭೆಯ 2 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ  ಒಂದು ಕ್ಷೇತ್ರವನ್ನು ಅನುಕಂಪದ ಆಧಾರದಲ್ಲಿ ಬಿಜೆಪಿ ಉಳಿಸಿಕೊಂಡಿದ್ದು, ಇನ್ನೊಂದರಲ್ಲಿ ಆರ್‌ಜೆಡಿ -ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next