Advertisement

ಡಿಕೆಶಿ ವಿಚಾರದಲ್ಲಿ ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ ಎಂಬ ವಾದದಲ್ಲಿ ಹುರುಳಿದೆಯಾ?

09:40 AM Sep 01, 2019 | keerthan |

ಮಣಿಪಾಲ: ಆದಾಯ ತೆರಿಗೆ ದಾಳಿ ಸಮಯದಲ್ಲಿ ಡಿ.ಕೆ. ಶಿವಕುಮಾರ್‌ ಅವರ ದಿಲ್ಲಿಯ ಮನೆಯಲ್ಲಿ ಪತ್ತೆಯಾದ 8.53 ಕೋಟಿ ರೂಪಾಯಿಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದು ಬಿಜೆಪಿಯ ರಾಜಕೀಯ ಪ್ರೇರಿತ ಚಟುವಟಿಕೆ, ಸೇಡಿನ ರಾಜಕೀಯ ಎಂಬ ಆರೋಪಗಳು ಕೇಳಿ ಬಂದಿವೆ. ಈ ವಾದದಲ್ಲಿ ಹುರುಳಿದೆಯೇ ಎಂದು “ಉದಯವಾಣಿ” ತನ್ನ ಓದುಗರಿಗೆ ಕೇಳಿದ್ದು, ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

Advertisement

ಶ್ರೀನಿವಾಸ : ಅಲ್ಲಯ್ಯಾ. ನಿಮ್ಮಲ್ಲಿರುವ ಸಂಪತ್ತಿಗೆ ನ್ಯಾಯ ಸಮ್ಮತವಾದ ವಿವರಣೆಯನ್ನು ನೀಡಿ ಯಾವ ತನಿಖಾ ಸಂಸ್ಥೆಯನ್ನಾದ್ರೂ ಎದುರಿಸಬಹುದಲ್ವೇ. ಇಲ್ಲಿ “ಸೇಡಿನ” ಮಾತೇಕೆ?

ವಿಜಯರಾಯ ರಾವ್:‌ ಈ ಡಿಕೆಶಿ ಪ್ರಕರಣದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡೂ ಪಕ್ಷಗಳ ಕೈವಾಡವಿದೆ. ಕಾಂಗ್ರೆಸ್‌ ನ ಬಹುತೇಕ ಮಂದಿಗೆ ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗುವುದು ಇಷ್ಟವಿಲ್ಲ.

ಚೇತನ್‌ ಜಿ ಮೂರ್ತಿ: ಅಯ್ಯಯ್ಯೋ, ನೂರಕ್ಕೆ ನೂರು ದ್ವೇಷನೇ. ಆಪರೇಷನ್ ಕಮಲ ಮಾಡಿ ಸಾವಿರಾರು ಕೋಟಿ ಖರ್ಚು ಮಾಡಿ ವಿರೋಧ ಪಕ್ಷದ ಶಾಸಕರನ್ನು ಖರೀದಿ ಮಾಡಲಿಲ್ಲವೇ? ಅವಾಗ ಈಡಿ ಅವರು ಸತ್ತು ಹೋಗಿದ್ರಾ ಹೇಳಿ. ಇದು ಪಕ್ಷಪಾತವಲ್ಲವೇ ?

ರಜನಿ ಕೆ: ಹುರುಳಿರಲಿ ಇಲ್ಲದಿರಲಿ. ತಪ್ಪು ಮಾಡಿದವರು ಯಾರಾದರೂ ಆಗಿರಲಿ. ಅವರಿಗೆ ಶಿಕ್ಷೆ ಆಗಲೇ ಬೇಕು. ಜನ ಸಾಮಾನ್ಯರಿಗೆ ಒಂದು ಕಾನೂನು ರಾಜಕಾರಣಿಗಳಿಗೆ ಇನ್ನೊಂದು ಕಾನೂನು ಅನ್ನುವುದು ಇನ್ನಾದರೂ ನಿಲ್ಲಬೇಕು.. ಡಿಕೆಶಿ ಅಥವಾ ಬೇರೆ ಇನ್ನಾರೋ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ.

Advertisement

ವಿನಯಕುಮಾರ್‌ ಅಲ್ಲೆಪ್ಪನವರ್:‌ ತಪ್ಪು ಮಾಡಿರುವವರು ಯಾವುದೇ ಪಕ್ಷದಲ್ಲಿದ್ದರೂ ಸಹ ತಕ್ಕ ಶಿಕ್ಷೆಯಾಗಬೇಕು. ದ್ವೇಷ, ಹಗೆ ಈ ತರಹ ಮಾತನಾಡುತ್ತಾ ಹೋದರೆ ಇಂತವರನ್ನು ಹಿಡಿದು ಶಿಕ್ಷಿಸುವ ಸರ್ಕಾರ ಬರುವುದಾದರೂ ಯಾವಾಗ?

ದಾವೂದ್‌ ಕೂರ್ಗ್‌ ದಾವೂದ್;‌ ಸೇಡಿನ ರಾಜಕೀಯ ಅಲ್ಲದೆ ಮತ್ತೇನು? ಚಿದಂಬರಂಗೆ ಜಾಮೀನು ನಿರಾಕರಿಸಿದ ವಕೀಲನಿಗೆ ನ್ಯಾಯಮಂಡಳಿ ಅಧ್ಯಕ್ಷ ಸ್ಥಾನ ನೀಡಿದ್ಯಾಕೆ?

ಸುನಿ ಸುನಿ; ಸೇಡಿನ ರಾಜಕೀಯ ಮಾಡೋದಾಗಿದ್ರೆ ಹಿಂದಿನ ಅವಧಿಯಲ್ಲೇ ಮಾಡ್ತಿದ್ರು. ಗಾಂಧಿ ಕುಟುಂಬವನ್ನ ಮೊದಲು ಜೈಲಿಗೆ ಅಟ್ತಾ ಇದ್ದರು. ಇ.ಡಿ ಹಾಗೂ ಐ.ಟಿ ಇಲಾಖೆಯವರ ಕೆಲಸಗಳಲ್ಲಿ ಅಡ್ಡ ಬಂದಿಲ್ಲ. ಹಾಗಾಗಿ ಈ ಪ್ರಕ್ರಿಯೆ ಕಾನೂನಾತ್ಮಕವಾಗಿ ನಡೆದಿದೆ. ಇಲ್ದಿದ್ರೆ ವಿನಾಕಾರಣ ನಕಲಿ ಎನ್ಕೌಂಟರ್,ಗೋಧ್ರಾ ಅನ್ನೋ ಗುಮ್ಮ ಇಟ್ಕೊಂಡು ಮೋದಿ, ಶಾ ಅವರನ್ನ ಕಟಕಟೆ ಏರಿಸಿದವರನ್ನ ಹಾಗೇ ಬಿಡ್ತಿದ್ರಾ.

ಸೋಮಶೇಖರ್‌ ಅನ್ನದಾನಿ: ಹೌದು. ಯಾಕಂದ್ರೆ ಈ ಬಿಜೆಪಿಯವರು ಹೇಳುತ್ತಾರಲ್ಲ ಕಾಂಗ್ರೆಸ್ಸಿಗರು 70ವರುಷ ಆಡಳಿತ ನಡೆಸಿ ಲೂಟಿ ಹೊಡೆದರು ಅಂತ ಈ ಬಿಜೆಪಿಯವರು ಏನು ಇಲ್ಲದೆ 1 ಓಟಿಗೆ ಸಾವಿರಾರು ರೂಪಾಯಿ ಕೊಡುತ್ತಾರಲ್ಲ ಅದೆಲ್ಲಿಂದ ಬಂತು ಈ ಬಿಜೆಪಿಯವರನ್ನ ಮನೆತನಕ ಕರೆದುಕೊಂಡು ಬಂದರೆ ಗಂಡ ಹೆಂಡತಿನೆ ಬೇರೆ ಮಾಡಿ ಬಿಡುತ್ತಾರೆ ಅಂತ ರಾಜಕೀಯ!

ಮೋಹನ್‌ ನೇತ್ರ: ರಾಜಕೀಯ ನಾಯಕರು ತಮ್ಮ ಅಧಿಕಾರ ಅವಧಿಯಲ್ಲಿ ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮ ಆಸ್ತಿ ಪಾಸ್ತಿಗಳಿಸಿರುವ ರಾಜಕೀಯ ವ್ಯಕ್ತಿಗಳು ಯಾರೇ ಆಗಿದ್ದರೂ ಭಾರತ ಸಂವಿಧಾನದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಿಜೆಪಿ ನಾಯಕರು ಹೊರತಲ್ಲ ಅವರು ಭ್ರಷ್ಟರೇ. ಎಲ್ಲಾ ಭ್ರಷ್ಟ ನಾಯಕರಿಗೂ ಶಿಕ್ಷೆ ವಿಧಿಸಬೇಕು. “ಕಾನೂನು ಎಲ್ಲರಿಗೂ ಒಂದೇ”

ಪ್ರಕಾಶ ದೇಶಪಾಂಡೆ; ಹೌದು,ಇದು ಸೇಡಿನ ರಾಜಕೀಯವೇ . ಗುಜರಾತಿನ ಶಾಸಕರನ್ನು ಬೆಂಗಳೂರಿಗೆ ಕರೆತಂದು ಇಟ್ಟುಕೊಂಡು ಕಾಗ್ರೆಸ್ಸಿನ ಅಹಮ್ಮದ ಪಟೇಲರನ್ನು ಗೆಲ್ಲಿಸಿದ್ದಕ್ಕೆ ಮೋದಿ, ಶಾ ನೀಡಿದ ಕೊಡುಗೆ ಇದು.ಇಷ್ಟಕ್ಕೂ ಸಿಕ್ಕ ಹಣ ನನ್ನದು, ಅದಕ್ಕೆ ಆದಾಯ ತೆರಿಗೆ ಕಟ್ಟಿದ್ದೇನೆಂದು ತಿಳಿಸಿದ ಮೇಲೂ ಕಾನೂನು ಕ್ರಮ ಎಂದರೇನು?

ರಘು ವನಿಗೆರೆ: ಕಾನೂನಿನ ಅಡಿಯಲ್ಲಿ ಎಲ್ಲರೂ ಒಂದೇ ಎನ್ನುವಾಗ ತನಿಖೆ ಆಗಲಿ, ಯಾವ ಪಕ್ಷ ಎನ್ನವ ಪ್ರಶ್ನೆ ಬರಬಾರದು… ಪ್ರಾಮಾಣಿಕವಾಗಿ ದುಡಿದು ತೆರಿಗೆ ಕಟ್ಟಿದವನಿಗೆ ಯಾರ ಬಯವೂ ಇರುವುದಿಲ್ಲಾ

ಕುಶಾಲಪ್ಪ ಮಂಗಳೂರು: ಖಂಡಿತಾ ಇಲ್ಲಾ ಡಿ ಕೆ ಶಿವಕುಮಾರ್ ತುಂಬಾನೇ ಬೇನಾಮಿ ಆಸ್ತಿ ಮಾಡಿರೋದು ಸಾಬೀತಾಗಿದೆ. ಬೇನಾಮಿ ಆಸ್ತಿ ಹೊಂದಿರೋ ಯಾರನ್ನು ಬಿಡಬಾರದು. ಕಾನೂನಿನಲ್ಲಿ ಎಲ್ಲಾರೂ ಒಂದೇ ಎಂಬುದು ಪ್ರತಿಯೊಬ್ಬರಿಗೂ ತಿಳಿಯಬೇಕು.

ವಿಮಲಾನಂದ ಚಿತ್ರಗಿ; ಸದ್ಯದ ಪರಿಸ್ಥಿತಿ ನೋಡಿದರೆ ಇದು ರಾಜಕೀಯ ಪ್ರೇರಿತ ಎಂದು ತೋರುತ್ತದೆ. ಕಾಂಗ್ರೆಸ್‌ ನವರಿಗೆ ಮಾತ್ರ ವಿಚಾರಣೆ. ಮೊನ್ನೆ ಚಿದಂಬರಂ ಈಗ ಡಿ ಕೆ ಶಿವಕುಮಾರ್‌ . ಎಲ್ಲಾ ಮಾಯವೋ ಎಲ್ಲಾ ಲೀಲೆಯೋ. !

ಬಸವರಾಜ್‌ ಬಿರಾದಾರ್:‌ ಇಲ್ಲ .ಇಲ್ಲಿ ಯಾವುದೇ ರಾಜಕೀಯ ಕಾಣ್ತಾ ಇಲ್ಲ. ಒಬ್ಬ ವ್ಯಕ್ತಿಯ ಆಸ್ತಿ ಗಳಿಕೆ ಐದು ವರ್ಷದ ಲ್ಲಿ ₹500 ಕೋಟಿ ಮೀರುತ್ತದೆ ಅಂದರೆ ಅದರ ಮೂಲ ತನಿಖೆ ನಡೆಸಬೇಕು. ಡಿಕೆ ಶಿವಕುಮಾರ್ ಅವರು ಶೋಭಾ ಡೆವಲಪರ್ ಜೊತೆ ಸೇರಿ ಏನೆಲ್ಲಾ ಮಾಡಿದ್ದಾರೆ ಅಂತ ತನಿಖೆ ಆಗಬೇಕು.

ಕುಮಾರ ಆರ್‌ ಸಿ ಕುಮ್ಮಿ; ಕಾನೂನು ವ್ಯವಸ್ಥೆಯನ್ನು ತಮಗೆ ಇಷ್ಟ ಬಂದಂತೆ ನಡೆಸಿಕೊಳ್ಳುತ್ತಿರುವ ಈ ನಾಲಾಯಕ್ ನಾಯಕರು ದ್ವೇಷ ರಾಜಕೀಯದ ಬುಡಮೇಲು ಆಗೋದು ಗ್ಯಾರಂಟಿ.

ಕುಮಾರ್‌ ಬೆಸ್ತಾರ್: ಕಾಂಗ್ರೆಸ್ನವರು ಸೇಡಿನ ರಾಜಕೀಯ ಅಂತ ಹೇಳ್ತಾ ಇದ್ದೀರಾ ಜನಾರ್ದನರೆಡ್ಡಿ, ಯಡಿಯೂರಪ್ಪನವರನ್ನು ಮಾಡಿಲ್ವಾ ಸೇಡಿನ ರಾಜಕೀಯ ?

Advertisement

Udayavani is now on Telegram. Click here to join our channel and stay updated with the latest news.

Next