ಬೆಂಗಳೂರು: ಈಶ್ವರಪ್ಪ ಅವರ ರಾಜೀನಾಮೇ ಬೇಕಾಗಿಲ್ಲ, ಡಿಸ್ಮಿಸ್ ಮಾಡಬೇಕು, ರಾಷ್ಟ್ರದ್ರೋಹದ ಕೇಸ್ ಹಾಕಬೇಕು, ಬಿಜೆಪಿಯವರು ಅವರನ್ನುಆಸ್ತಿ ಅಂತ ಮಾತನಾಡುತ್ತಿದ್ದಾರೆ, ಬಿಜೆಪಿಯವರಿಗೆ ರಾಷ್ಟ್ರ ಧ್ವಜ ಅಂದ್ರೆ ಏನು ಎಂದು ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಸುದ್ದಿಗಾರರೋಂದಿಗೆ ಮಾತನಾಡಿದ ಅವರು, ನಮ್ಮ ಧರಣಿ ಮುಂದುವರೆಯುತ್ತದೆ. ತಲೆದಂಡ ಅಲ್ಲ ವಜಾ ಮಾಡಬೇಕು. ನಮ್ಮ ಅಪ್ಪನ ಬಗ್ಗೆ ಮಾತನಾಡಿದ್ದಾರೆ. ನಮ್ಮ ಅಪ್ಪ ಮೇಲೆ ಇದ್ದಾರೆ. ಇದಕ್ಕೆಲ್ಲಾ ಟೈಂ ಬಂದಾಗ ಹೇಳುತ್ತೇನೆಎಂದು ಹೇಳಿದರು.
ಸ್ಪೀಕರ್ ಅವರ ಸ್ಥಾನಕ್ಕೆ ತಕ್ಕಂತೆ ಇರಬೇಕು. ಡಿಫೆಂಡ್ ಮಾಡುತ್ತಿದ್ದಾರೆ. ಹೆಗಡೆ ಸಂವಿಧಾನ ಚೇಂಜ್ ಮಾಡಬೇಕು ಎಂದಾಗ ಡ್ರಾಪ್ ಮಾಡಿದ್ದರಲ್ವಾ. ಆ ಮುತ್ತುರತ್ನವನ್ನು ಹಾಗೇ ಇಟ್ಟುಕೊಳ್ಳಲಿ ಎಂದರು.
ರಾಷ್ಟ್ರ ಧ್ವಜಕ್ಕೆ ಗೌರವ ಇದೆ, ತ್ರಿವರ್ಣ ಧ್ವಜ ಕೊಟ್ಟವರು ಕಾಂಗ್ರೆಸ್. ಸ್ವಾತಂತ್ರ್ಯ ತಂದುಕೊಟ್ಟಿದ್ದಕ್ಕೆ ಇವರು ಸಿಎಂ ಆಗಿರುವುದು. ಕುಮಾರಣ್ಣ ಟ್ರಯಲ್ ತೋರಿಸಬೇಕು ಎಂದು ಹೇಳಿದ್ದಾರೆ. ಟ್ರಯಲ್ ತೋರಿಸೋಣ, ಮಾತನಾಡಲಿ, ನೆರೆ ಬಗ್ಗೆ ಆದರೂ ಮಾತನಾಡಲಿ, ಏನಾದರೂ ಮಾತನಾಡಲಿ ಎಂದು ಹೇಳಿದರು.
ಸೋಮವಾರ ಪ್ರತೀ ತಾಲೂಕು, ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ರಾಷ್ಟ್ರ ದ್ರೋಹಿ ಬಗ್ಗೆ ಡಿಸಿಗೆ ತಹಶಿಲ್ದಾರ್ ಪತ್ರ ಬರೆಯಬೇಕು ಎಂದು ಹೇಳಿದರು.