Advertisement

“ಬಿಜೆಪಿ ಸೇರಲ್ಲ, ಮುಂದೇನೋ ಗೊತ್ತಿಲ್ಲ’

11:35 PM Sep 09, 2019 | Lakshmi GovindaRaju |

ಬೆಂಗಳೂರು: ಹುಣಸೂರು ಕ್ಷೇತ್ರದಿಂದ ನನ್ನ ಪುತ್ರವನ್ನು ಕಣಕ್ಕಿಳಿಸುವುದಿಲ್ಲ. ನಾನು ಸಹ ಬಿಜೆಪಿಗೆ ಹೋಗುವುದಿಲ್ಲ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಡಾಲರ್ ಕಾಲೋನಿ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರು ಪಕ್ಷ ಸೇರುವಂತೆ ಕರೆದಿಲ್ಲ. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಈಗ ಹೋಗುವುದಿಲ್ಲ. ಮುಂದೆನೋ ಗೊತ್ತಿಲ್ಲ ಎಂದರು.

Advertisement

ನಾನು ಯಾವುದೇ ಪಕ್ಷ ಸೇರುವ ವಿಚಾರವಿಲ್ಲ ಎಂದು ಈಗಾಗಲೇ ಹೇಳಿದ್ದೇನೆ. ಶಾಸಕನಾಗಿದ್ದು, ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ. ನಾನು ತಟಸ್ಥನಾಗಿದ್ದೇನೆಂದು ಮಾಜಿ ಸಚಿವ ಸಾ.ರಾ.ಮಹೇಶ್‌ ಹೇಳಿರುವುದು ಗೊತ್ತಿಲ್ಲ. ನಾವಿಬ್ಬರು ಭೇಟಿಯಾಗಿಲ್ಲ. ನಾನು ಪಕ್ಷದಲ್ಲಿ ತಟಸ್ಥನಾಗಿರುವುದು ಹೌದು. ಪಕ್ಷದಲ್ಲಿ ನನಗೆ ತುಂಬಾ ನೋವಾಗಿದೆ. ಇದರಿಂದ ಸುಧಾರಿಸಿಕೊಳ್ಳಲು ಸಮಯಬೇಕು ಎಂದು ತಿಳಿಸಿದರು. ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆಗಳ ಕಾಮಗಾರಿ ಸ್ಥಗಿತವಾಗಿದೆ. ಹಾಗಾಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ಹೇಳಿದರು.

ಸಚಿವ ವಿ.ಸೋಮಣ್ಣ ಅವರು ಸ್ನೇಹಿತರು. ಅಲ್ಲದೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಭೇಟಿ ಆಗಿದ್ದೇನೆ. ಮಾಜಿ ಸಚಿವರಾದ ಎಸ್‌.ಎ. ರಾಮದಾಸ್‌, ತನ್ವೀರ್‌ ಸೇಠ್ ಎಲ್ಲರೂ ಬೇಕಾದವರೇ ಆಗಿದ್ದಾರೆ ಎಂದರು. ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಈ ಹಿಂದೆ ಗುಜರಾತ್‌ನ ಶಾಸಕರನ್ನು ಕೂಡಿ ಹಾಕಿದ್ದರು. ಹಾಗಾಗಿ ಇದೆಲ್ಲಾ ನಡೆಯುತ್ತಿದೆ ಎಂಬ ಮಾತುಗಳಿವೆ, ಆದರೆ ಡಿ.ಕೆ.ಶಿವಕುಮಾರ್‌ ಅವರು ಎಲ್ಲ ವ್ಯವಹಾರಗಳನ್ನು ಕಾನೂನುಬದ್ಧವಾಗಿಯೇ ಮಾಡುತ್ತಿದ್ದಾರೆ. ಅವರು ಪ್ರಕರಣದಿಂದ ಹೊರ ಬರುವ ನಿರೀಕ್ಷೆ ಇದೆ. ಡಿಕೆಶಿ ಪರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next