Advertisement

ಬಿಜೆಪಿಗೆ ಪಂಚಾಯತ್ ವ್ಯವಸ್ಥೆಯಲ್ಲಿ ವಿಶ್ವಾಸ‌ ಇಲ್ಲ: ದೇಶಪಾಂಡೆ

11:24 AM Dec 03, 2021 | Team Udayavani |

ಶಿರಸಿ: ಬಿಜೆಪಿಗೆ ಪಂಚಾಯತ್ ವ್ಯವಸ್ಥೆಯಲ್ಲಿ ವಿಶ್ವಾಸ‌ ಇಲ್ಲ, ಕೇಂದ್ರದ ಪ್ರಧಾನಿ ನರೇಂದ್ರ ‌ಮೋದಿ, ರಾಜ್ಯ ಸರಕಾರ ಪಂಚಾಯತ್ ಪರವಾಗಿ ಏನು ಕಾರ್ಯ ಮಾಡಿದೆ ಎಂದು‌ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ‌ ನಾಯಕ ಆರ್.ವಿ.ದೇಶಪಾಂಡೆ ಪ್ರಶ್ನಿಸಿದ್ದಾರೆ.

Advertisement

ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ, ಪಟ್ಟಣ ಪಂಚಾಯತ್, ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಿ ಅಲ್ಲಿ‌ ಜನಪ್ರತಿನಿಧಿಗಳು ಬಂದ ಬಳಿಕ ವಿಧಾನ ಪರಿಷತ್ ಚುನಾವಣಾ ಮಾಡಬೇಕಿತ್ತು. ಹಾಗೆ ಆದರೆ ಬಿಜೆಪಿ ಗೆಲ್ಲುವದಿಲ್ಲ ಎಂದು ಹೀಗೆ ಮಾಡಿದೆ. ಬಿಜೆಪಿಗೆ ಪಂಚಾಯತ್ ವ್ಯವಸ್ಥೆಯಲ್ಲಿ ವಿಶ್ವಾಸವೇ ಇಲ್ಲ ಎಂದು ಹೇಳಿದರು.

ಪಂಚಾಯತ್ ವ್ಯವಸ್ಥೆ, ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಕಾಂಗ್ರೆಸ್ ವಿಶ್ವಾಸ ಇತ್ತು. ನರೇಗಾದಿಂದ‌ ನೇರ ಹಣ ಕೊಟ್ಟಿದ್ದು, ಮಹಿಳೆಯರಿಗೆ ಅಧಿಕಾರ‌‌ ನೀಡಿದ್ದು ಕಾಂಗ್ರೆಸ್. ಇಂದು ಪಂಚಾಯತ್‍ನಲ್ಲಿ ಕೆಲಸಗಳು ನಡೆಯುತ್ತಿದ್ದರೆ ಕಾಂಗ್ರೆಸ್ ಸರಕಾರ, ಸಿದ್ದರಾಮಯ್ಯ ಅವರು‌ ಮಂಜೂರಿ ಮಾಡಿದ್ದೇ‌ ನಡೆಯುತ್ತಿದೆ. ನರೇಗಾದಿಂದ ಹಳ್ಳಿಗರಿಗೆ ಉದ್ಯೋಗ ಸಿಗುತ್ತಿದೆ. ಬಿಜೆಪಿ ಏನು‌ ಮಾಡಿದೆ ಹೇಳಲಿ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಪರಿಷತ್ ಚುನಾವಣೆಯಲ್ಲಿ ಮತದಾರರಿಗೆ ಲಕ್ಷ ಲಕ್ಷ ರೂ ನೀಡಲಾಗುತ್ತಿದೆ: ಹೆಚ್.ವಿಶ್ವನಾಥ್ ಆರೋಪ

ಮಳೆಗೆ ‌ಮನೆಗಳು ಬಿದ್ದಿವೆ, ಪರಿಹಾರ ಬಂದಿಲ್ಲ. ಭ್ರಷ್ಟ ಸರಕಾರ ಎಂದು ವಿರೋಧ ಪಕ್ಷಗಳು ಹೇಳುತ್ತಿದ್ದವು. ಆದರೆ, ಇಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ. ಮನೆಗಳನ್ನೂ ಕೊಟ್ಟಿಲ್ಲ ಎಂದರು.

Advertisement

ಪರಿಷತ್ ಚುನಾವಣೆಗಳ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿದ್ದೇನೆ‌. ಸೀಮಿತ‌‌ ಮತದಾರರ ಚುನಾವಣೆಯಾಗಿದೆ.‌ ನಾನು ಸಕ್ರೀಯ ರಾಜಕಾರಣ ಪ್ರಾರಂಭಿಸಿದ ನಂತರ ಇದು ಐದನೇ ಪರಿಷತ್ ಚುನಾವಣೆ. ಐದು ಚುನಾವಣೆಯಲ್ಲಿ ಕಾರ್ತಕರ್ತನಾಗಿ ಕೆಲಸ‌ ಮಾಡಿದ್ದೇನೆ. ಹಿಂದಿನ ಐದೂ ಚುನಾವಣೆ ಗೆದ್ದಿದ್ದೇವೆ ಎಂದರು.

ಈ ವೇಳೆ ಅಭ್ಯರ್ಥಿ ಭೀಮಣ್ಣ‌ನಾಯ್ಕ, ಪ್ರಮುಖರಾದ ನಿವೇದಿತ ಆಳ್ವಾ, ದೀಪಕ ದೊಡ್ಡೂರು, ಪ್ರಶಾಂತ ದೇಶಪಾಂಡೆ, ರವೀಂದ್ರ ನಾಥ ನಾಯ್ಕ, ನಾಗರಾಜ ನಾರ್ವೇಕರ್, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next